LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಹಿಂದುಳಿದ ವರ್ಗಗಳ ಸಮಾಜದ ಮಹನೀಯರ ಜಯಂತಿಗಳಿಗೆ ರೂ.50 ಸಾವಿರ ಅನುದಾನ: ಮೇಯರ್ ಪಿ.ಗಾದೆಪ್ಪ

ಬಳ್ಳಾರಿ,ಆ.14 :ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗಗಳ ವಿವಿಧ ಸಮಾಜಗಳ ಮಹನೀಯರ ಜಯಂತಿಗಳನ್ನು ವಿಜೃಂಭಣೆಯಿAದ ಆಚರಿಸಲು ಪಾಲಿಕೆ ವತಿಯಿಂದ ಘೋಷಿಸಲಾದ ರೂ.50,000 ಅನುದಾನದ ಸದುಪಯೋಗವನ್ನು ಆಯಾ ಸಮಾಜದ ಮುಖಂಡರು ಪಡೆದುಕೊಳ್ಳಬೇಕು ಎಂದು ಮಹಾನಗರ ಪಾಲಿಕೆಯ ಮೇಯರ್ ಪಿ.ಗಾದೆಪ್ಪ ಮನವಿ ಮಾಡಿದ್ದಾರೆ.

‘ನಾನು ಮಹಾಪೌರನಾಗಿ ಅಧಿಕಾರ ವಹಿಸಿಕೊಂಡ ನಂತರ ಪ್ರಥಮ ಬಾರಿಗೆ ಮಂಡಿಸಿದ ಮಹಾನಗರ ಪಾಲಿಕೆಯ ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿ ಹಾಗೂ ಅವರ ಸಾಂಸ್ಕೃತಿಕ ಗೌರವಕ್ಕೆ ಆದ್ಯತೆ ನೀಡಲಾಗಿದೆ. ಅದರ ಭಾಗವಾಗಿ ವಿವಿಧ ಹಿಂದುಳಿದ ವರ್ಗಗಳ ಸಮಾಜದ ಮಹನೀಯರ ಜಯಂತಿ ಆಚರಣೆಗಾಗಿ ಪಾಲಿಕೆ ವತಿಯಿಂದ ತಲಾ ರೂ.50,000 ಅರ್ಥಿಕ ನೆರವು ನೀಡುವ ಪ್ರಮುಖ ನಿರ್ಧಾರವನ್ನು ಕೈಗೊಳ್ಳಲಾಗಿತ್ತು’ ಎಂದು ಸ್ಮರಿಸಿದರು.

ಹಿಂದುಳಿದ ಸಮುದಾಯಗಳ ಸಂಸ್ಕೃತಿ, ಪರಂಪರೆ ಮತ್ತು ಮಹನೀಯರ ವಿಚಾರಧಾರೆಗಳನ್ನು ಸಮಾಜಕ್ಕೆ ತಲುಪಿಸಲು ಹಾಗೂ ಜಯಂತಿಗಳನ್ನು ವ್ಯವಸ್ಥಿತವಾಗಿ ಆಚರಿಸಲು ಈ ನೆರವು ನೀಡಲಾಗುತ್ತಿದೆ. ನಗರದ ಎಲ್ಲಾ ವರ್ಗಗಳ ಹಾಗೂ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ಸಾಮಾಜಿಕ ಸಾಮರಸ್ಯಕ್ಕೆ ಪಾಲಿಕೆ ಬದ್ಧವಾಗಿದೆ.

ಬಳ್ಳಾರಿ ನಗರದ ಹಿಂದುಳಿದ ವರ್ಗಗಳ ವಿವಿಧ ಸಂಘ-ಸAಸ್ಥೆಗಳು, ಸಮಾಜದ ಮುಖಂಡರು ಪಾಲಿಕೆಯ ನಿಯಮಾವಳಿಗಳ ಪ್ರಕಾರ ಈ ಅನುದಾನವನ್ನು ಪಡೆದುಕೊಂಡು ಕಾರ್ಯಕ್ರಮಗಳಲ್ಲಿ ಎಲ್ಲ ಸಮಾಜದವರು ಸಕ್ರಿಯವಾಗಿ ತೊಡಗಿಸಿಕೊಂಡು ಯಶಸ್ವಿಗೊಳಿಸಬೇಕು ಎಂದು ಮೇಯರ್ ಪಿ.ಗಾದೆಪ್ಪ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿದ್ದಾರ್ಥ ವಿಹಾರ ಟ್ರಸ್ಟ್ ಭೂ ಹಂಚಿಕೆ ವಿವಾದ: ತುರ್ತು ನೋಟಿಸ್ ಜಾರಿ ಮಾಡಲು ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ಆದೇಶ"ಮೂಡಲಗಿಯಲ್ಲಿ ಹರ ಘರ್ ತಿರಂಗಾ ಅಭಿಯಾನದ ಅಂಗವಾಗಿ ತ್ರಿವರ್ಣ ಯಾತ್ರೆ"16ಕ್ಕೆ ಕರ್ನಾಟಕ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ, ಪತ್ರಕರ್ತರಿಗೆ ಸನ್ಮಾನಹಿಂದುಳಿದ ವರ್ಗಗಳ ಸಮಾಜದ ಮಹನೀಯರ ಜಯಂತಿಗಳಿಗೆ ರೂ.50 ಸಾವಿರ ಅನುದಾನ: ಮೇಯರ್ ಪಿ.ಗಾದೆಪ್ಪಗ್ರಂಥಾಲಯಗಳು ಜ್ಞಾನ ವೃದ್ಧಿ ಕೇಂದ್ರಗಳುಚನ್ನಮ್ಮನ ಕಿತ್ತೂರಿನಲ್ಲಿ ಆಕರ್ಷಕವಾಗಿ ಮೂಡಿಬಂದ ‘ಹರ್ ಘರ್ ತಿರಂಗಾ’ ಅಭಿಯಾನ: ರಾಷ್ಟ್ರಭಕ್ತಿಯ ಸಂಭ್ರಮ​ಗ್ರಂಥಾಲಯವು ಮಹಾವಿದ್ಯಾಲಯದ ಹೃದಯವಿದ್ದಂತೆ : ಪ್ರೊ.ಬಿ.ಎ.ಪಾಟೀಲಪುಸ್ತಕ ಸಂಸ್ಕೃತಿಯಿಂದ ಮಸ್ತಕವನ್ನು ಅರಳಿಸಬೇಕಾದ ಅವಶ್ಯಕತೆಯಿದೆ : ಶ್ರೀಗಳುಆ.೧೬ ರಂದು ಶ್ರೀ ಸಾಯಿ ಮಂದಿರದ ಪ್ರಥಮ ವಾರ್ಷಿಕೋತ್ಸವಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಮಹಾತ್ಮ ಗಾಂಧಿ ಪುತ್ಥಳಿಗೆ ಪೂಜೆ