LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bellary

ಜಮೀನು ವಿವಾದ; ಆರೋಪ ಆಧಾರರಹಿತ

ಬಳ್ಳಾರಿ,ಆ.17: `ನಾನು ಕೋರ್ಟ್ ಮೂಲಕವೇ ಜಮೀನು ಖರೀದಿಸಿದ್ದೇನೆ. ಜಮೀನಿನ ಖರೀದಿ ಹಾಗೂ ಹಕ್ಕಿಗೆ ಸಂಬAಧಿಸಿದ ಅಸಲಿ ದಾಖಲೆಗಳು ನನ್ನ ಬಳಿ ಇವೆ ಎಂದು ಮುಂಡ್ಲೂರು ಕುಶಾಲ್ ಸ್ಪಷ್ಟಪಡಿಸಿದರು. 
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಸಂಜೀವರಾಯನ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚರಕುಂಟೆ ಗ್ರಾಮದ ಸರ್ವೆ ನಂ.೪೬ರ ಜಮೀನು ವಿವಾದಕ್ಕೆ ಸಂಬAಧಿಸಿದAತೆ ರೈತ ಹನುಮಂತಪ್ಪ ಮಾಡಿರುವ ಆರೋಪಗಳು ಆಧಾರರಹಿತವಾಗಿದೆ ಎಂದು ಆರೋಪಿಸಿದರು.
ಜಮೀನಿನ ವಿಚಾರದಲ್ಲಿ ಹನುಮಂತಪ್ಪ ಅವರು ಹೆಚ್ಚುವರಿ ಹಣಕ್ಕಾಗಿ ೧೦ ಲಕ್ಷ ಬೇಡಿಕೆ ಇಟ್ಟಿದ್ದಾರೆ. ತಮ್ಮ ವಿರುದ್ಧ ಮಾಡಲಾಗುತ್ತಿರುವ ಆರೋಪಗಳಿಗೆ ಯಾವುದೇ ಆಧಾರವಿಲ್ಲ. ಜಮೀನಿನ ಮಾಲೀಕತ್ವದ ವಿಚಾರದಲ್ಲಿ ಆರೋಪ-ಪ್ರತ್ಯಾರೋಪಗಳ ಬದಲಾಗಿ ಕಂದಾಯ ದಾಖಲೆ, ಪಹಣಿ, ಮಾರಾಟ ಪತ್ರ ಹಾಗೂ ನ್ಯಾಯಾಲಯದ ಆದೇಶಗಳನ್ನು ಪರಿಶೀಲಿಸಿದರೆ ಸತ್ಯಾಸತ್ಯತೆ ತಿಳಿಯಲಿದೆ ಎಂದರು. ೧೯೮೩ರಲ್ಲಿ ಸರ್ಕಾರ ಬಡ ರೈತರಿಗೆ ಜಮೀನು ಹಂಚಿಕೆ ಮಾಡಿತ್ತು ಹಾಗೂ ನಂತರ ಪಹಣಿ ದಾಖಲೆಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂಬ ಆರೋಪದ ಬಗ್ಗೆಯೂ ಮೂಲ ದಾಖಲೆಗಳನ್ನು ಪರಿಶೀಲಿಸಬೇಕಿದೆ. ಕೇವಲ ಹೇಳಿಕೆಗಳ ಆಧಾರದ ಮೇಲೆ ಜಮೀನಿನ ಮಾಲೀಕತ್ವ ನಿರ್ಧರಿಸಲು ಸಾಧ್ಯವಿಲ್ಲ. ಎಲ್ಲ ದಾಖಲೆಗಳನ್ನು ಪರಿಶೀಲಿಸಲಿ. ನನ್ನ ಬಳಿ ಇರುವ ಅಸಲಿ ದಾಖಲೆಗಳನ್ನೂ ಅಧಿಕಾರಿಗಳು ಹಾಗೂ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಿದ್ಧನಿದ್ದೇನೆ. ದಾಖಲೆಗಳ ಆಧಾರದ ಮೇಲೆ ಸತ್ಯ ಹೊರಬರಲಿ’’ ಎಂದರು. 
ಹನುಮಂತಪ್ಪ ಅವರು ಸುದ್ದಿಗೋಷ್ಠಿಗಳ ಮೂಲಕ ತಪುö್ಪ ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಎರಡೂ ಕಡೆಯ ದಾಖಲೆಗಳನ್ನು ಕಂದಾಯ ಇಲಾಖೆ ಹಾಗೂ ಸಂಬAಧಿಸಿದ ಅಧಿಕಾರಿಗಳು ಪರಿಶೀಲಿಸಿ ವಾಸ್ತವಾಂಶವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು. 
ಇದೇ ವೇಳೆ ಹನುಮಂತಪ್ಪ ಅವರನ್ನು `ಫೇಕ್ ಪರ್ಸನ್’ ಎಂದು ಕುಶಾಲ್ ಆರೋಪಿಸಿದ್ದು, ತಮ್ಮ ಹೇಳಿಕೆಗೆ ಸಂಬAಧಿಸಿದ ದಾಖಲೆಗಳನ್ನು ಅಗತ್ಯವಿದ್ದಲ್ಲಿ ಅಧಿಕಾರಿಗಳು ಹಾಗೂ ನ್ಯಾಯಾಲಯದ ಮುಂದೆ ಸಲ್ಲಿಸುವುದಾಗಿ ಹೇಳಿದರು. ಜಮೀನಿನ ವಿಚಾರದಲ್ಲಿ ಅಕ್ರಮ ಹಸ್ತಕ್ಷೇಪ ಅಥವಾ ಬೆಳೆ ಹಾನಿಯಾಗಿದ್ದರೆ ಕಾನೂನುಬದ್ಧವಾಗಿ ದೂರು ನೀಡಿ ತನಿಖೆ ನಡೆಸಬಹುದು. ಯಾವುದೇ ಆಧಾರರಹಿತ ಆರೋಪಗಳಿದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬಹುದು ಎಂದರು. 
ಈ ಸಂದರ್ಭದಲ್ಲಿ ಗೋಪಿ, ಭಾಷಾ ಹಾಗೂ ಆಲಂಭಾಷಾ ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಕಸಿತ ಭಾರತ ನಿರ್ಮಾಣಕ್ಕೆ ಯುವಶಕ್ತಿ ಶ್ರಮಿಸಲು ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆಧಾರವಾಡದಲ್ಲಿ  ಶ್ರಾವಣ ಮಾಸದ ಪ್ರಥಮ ಹಬ್ಬವಾದ ನಾಗರ ಪಂಚಮಿ ಶ್ರದ್ಧಾಭಕ್ತಿ ಆಚರಣೆನೇಸರಗಿ ಪಂಚಾಯತ ಕಾರ್ಯದರ್ಶಿ ಭೀಮಶಿ  ಮಾಳಗಿ ಸೇವಾ ನಿವೃತ್ತಿ.*ದಿ,24 ರಂದು ಭೂಮಿ ಕಳೆದುಕೊಂಡ ರೈತರಿಂದ ಬೃಹತ್ ಪ್ರತಿಭಟನೆ, ಬಲ್ದೋಟ ಕಂಪನಿಗೆ ಮುತ್ತಿಗೆ*ಎಸ್.ಸಿ, ಎಸ್‌ಟಿ ಬಾಲಕಿಯರಿಗೆ ವಿದ್ಯಾರ್ಥಿ ವೇತನ ಪೊಲೀಸ್ ಠಾಣೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನ ಆಚರಣೆ.ಜಮೀನು ವಿವಾದ; ಆರೋಪ ಆಧಾರರಹಿತವಿಜೃಂಭಣೆಯಿಂದ ನೆರವೇರಿದ “ಭಾರತ ಮಾತೆಗೆ ಭಾವೈಕ್ಯತೆಯ ಆರತಿ - 2026”ಪತ್ರಿಕಾರಂಗ ದಿಟ್ಟತನದಿಂದ ಪ್ರಜಾಪ್ರಭುತ್ವದ ಕಾವಲು ಕಾಯುತ್ತಿದೆ: ಸಿ.ಎಂ. ತ್ಯಾಗರಾಜಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರಿಗೆ ಮುಂಬಯಿಯಲ್ಲಿ ಭವ್ಯ ಸತ್ಕಾರ