ಬಳ್ಳಾರಿ, ಜು.21:: ನೀಟ್ (NEET-UG)-2026 ಫಲಿತಾಂಶದಲ್ಲಿ ಬಳ್ಳಾರಿ ನಾರಾಯಣ ಪಿಯು ಮತ್ತು ಪ್ಲಸ್-2 ಕಾಲೇಜಿನ ವಿದ್ಯಾರ್ಥಿನಿ ಎನ್. ಸಾಯಿ ಶ್ರಾವ್ಯ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ನಗರದ ನಾರಾಯಣ ಕಾಲೇಜಿನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲ ಮೊಹಮ್ಮದ್ ಗೌಸ್ ಬಾಷಾ ಈ ಮಾಹಿತಿ ನೀಡಿದರು. ಸಾಯಿ ಶ್ರಾವ್ಯ 720 ಅಂಕಗಳಿಗೆ 687 ಅಂಕ ಗಳಿಸಿ ಅಖಿಲ ಭಾರತ ಮಟ್ಟದಲ್ಲಿ 150ನೇ ರ‍್ಯಾಂಕ್ ಪಡೆದಿದ್ದಾಳೆ ಎಂದು ತಿಳಿಸಿದರು.
ನಿಯೋಜಿತ ತರಬೇತಿ, ಪರಿಣಿತ ಶಿಕ್ಷಕರ ಮಾರ್ಗದರ್ಶನ ಹಾಗೂ ವಿದ್ಯಾರ್ಥಿ ಕೇಂದ್ರಿತ ಬೋಧನಾ ವಿಧಾನದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಅವರು ಹೇಳಿದರು. ಈ ಬಾರಿ ನೀಟ್‌ನಲ್ಲಿ ಕಾಲೇಜಿನ ಹಲವು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಇದು ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆಯ ವಿಷಯ ಎಂದರು.
ನೀಟ್-2026ರಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ನಾರಾಯಣ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಡಾ. ಪಿ. ನಾರಾಯಣ, ನಿರ್ದೇಶಕರಾದ ಡಾ. ಪಿ. ಸಿಂಧುರಾ, ಬೆಂಗಳೂರು ದಕ್ಷಿಣ ವಲಯದ ಪ್ರಮುಖ ಡೀನ್ ಸುರೇಂದರ್ ರೆಡ್ಡಿ, ದಕ್ಷಿಣ ವಲಯದ ಎಜಿಎಂ ರೂಪಾ ಜಿ. ಬಾಷಾ, ಬಾಬು, ವಿಭಾಗೀಯ ಡೀನ್‌ಗಳಾದ ಜಗದೀಶ್ ಹಾಗೂ ಅನಂತ ರಾವ್, ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿ ಅಭಿನಂದಿಸಿದರು.
ಸುದ್ದಿಗೋಷ್ಠಿಯಲ್ಲಿ ಬಾಷಾ, ರಜನಿಕಾಂತ್, ಜಗದೀಶ್, ನಾರಾಯಣ ರೆಡ್ಡಿ, ದೇವರಾಜ್ ಸಿಬ್ಬಂದಿ ವರ್ಗ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.