LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bagalkot

ಕರವೇ ಹೋರಾಟಕ್ಕೆ ಸ್ಪಂದಿಸಿದ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು


ಬಾಗಲಕೋಟೆ: ಕರ್ನಾಟಕ ರಕ್ಷಣಾ ವೇದಿಕೆ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಬಣ ಬಾಗಲಕೋಟೆ ಜಿಲ್ಲಾ ಘಟಕ ಕಲಾವಿದರಿಗೆ ಪ್ರಾಯೋಜನ ಮೊತ್ತ ಹೆಚ್ಚು ಮಾಡಲು ಹಾಗೂ ಸಹಾಯಕ ನಿರ್ದೇಶಕ ಹುದ್ದೆಯನ್ನು ಖಾಯಂ ನೇಮಿಸುವ ಸಲುವಾಗಿ ಹಮ್ಮಿಕೊಂಡ ಮೂರು ದಿನದ ಉಪವಾಸ ಸತ್ಯಾಗ್ರಹವನ್ನು ಬಾಗಲಕೋಟೆಯ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕರ್ನಾಟಕ ರಾಜ್ಯ ಸರ್ವ ಕಲಾವಿದರ ಸಂಘ ಹಾಗೂ ರಕ್ಷಣಾ ವೇದಿಕೆ, ಜೈಕರ್ನಾಟಕ ಸಂಘಟನೆಯ ಕಾರ್ಯಕರ್ತರು, ರೈತ ಸಂಘಟನೆಯ ಕಾರ್ಯಕರ್ತರು, ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಕಲಾವಿದರಿಗೆ ಸಿಗಬೇಕಾದ ಸೌಲಭ್ಯವನ್ನು ಸರ್ಕಾರ ಸಮರ್ಪಕವಾಗಿ ಕಲ್ಪಿಸಬೇಕು ಎಂದು ಆಗ್ರಹಿಸದರು.
ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಬಾಗಲಕೋಟೆಯ ಶಾಸಕರಾದ ಉಮೇಶ ಮೇಟಿ, ಜಿಲ್ಲಾಧಿಕಾರಿಗಳಾದ ಸಂಗಪ್ಪ ಅವರು ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಕರ್ನಾಟಕ ರಾಜ್ಯ ಸರ್ವ ಕಲಾವಿದರ ಸಂಘಟನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ) ಬಣದ ಜಿಲ್ಲಾಧ್ಯಕ್ಷರ ಮನವೊಲಿಸಿ ಸರ್ವ ಕಲಾವಿದರ ಬೇಡಿಕೆಯನ್ನು ಕೂಡಲೇ ಅಧಿಕಾರಿಯನ್ನು  ನೇಮಕ ಮಾಡಿ ಪ್ರಾಯೋಜನೆ ಮೊತ್ತವನ್ನು ಹೆಚ್ಚುವರಿ ಮಾಡಲು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಭರವಸೆ ನೀಡಿ ಕೂಡಲೇ ತಾವು ಹಮ್ಮಿಕೊಂಡ ಮೂರು ದಿನದ ಉಪವಾಸ ಸತ್ಯಾಗ್ರಹವನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದರು. 
ಕರವೇ (ಪ್ರವೀಣ ಶೆಟ್ಟಿ) ಬಣದ ಜಿಲ್ಲಾಧ್ಯಕ್ಷರಾದ ಮುತ್ತುರಾಜ ಅರಗಿನಶೆಟ್ಟಿ ಅವರು ಸರ್ವ ಕಲಾವಿದರನ್ನು ಉದ್ದೇಶಿಸಿ ಮಾತನಾಡಿ ನಾವು ಹಮ್ಮಿಕೊಂಡ ಉಪವಾಸ ಸತ್ಯಾಗ್ರಹಕ್ಕೆ ಮತಕ್ಷೇತ್ರದ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ನಮ್ಮ ಸಮಸ್ಯೆಗೆ ಸ್ಪಂದಿಸಿರುವುದರಿಂದ ಉಪವಾಸ ಸತ್ಯಾಗ್ರವನ್ನು ಕೈಬಿಡಲಾಗುವುದು ಎಂದು ತಿಳಿಸಿದರು. 
ಈ ಸಂದರ್ಭದಲ್ಲಿ ಸರ್ವ ಕಲಾವಿದರ ಸಂಘದ ಅಧ್ಯಕ್ಷರಾದ ಶ್ರೀ ಶರಣಬಸವ ಶಾಸ್ತ್ರಿಗಳು, ಶಶಿಕಾಂತ ನಾಯಕ, ಶಂಕ್ರಪ್ಪ ತಂಬಾಕದ, ಸದಾಶಿವ ಅಂಬೋಜಿ, ಈಶ್ವರಪ್ಪ ಹೊರಟ್ಟಿ, ಶ್ರೀಮತಿ ಲಕ್ಕವ್ವ ಕಪರಡ್ಡಿ, ಕಮಲಾಕ್ಷಿ, ಸರಸ್ವತಿ ನಾಯಕ. ಲಕ್ಷ್ಮೀ ಮಂಟೂರ, ರಾಜೇಶ್ವರಿ ಉಮದಿ, ಯಲ್ಲಪ್ಪ ಪೂಜಾರಿ ಸೇರಿದಂತೆ ನೂರಾರು ಕಲಾವಿದರು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಚೀವ ಎಂ.ಬಿ. ಪಾಟೀಲರ ಜನ್ಮದಿನದ ಅಂಗವಾಗಿ  ಡಾ.ಪ್ರಭುಗೌಡ ಅಭಿಮಾನಿಗಳಿಂದ ಹಣ್ಣು-ಹಂಪಲು ವಿತರಣೆ*ಗುರುಭವನ ಉದ್ಘಾಟನೆ: ಲಕ್ಷ್ಮೀ ಹೆಬ್ಬಾಳಕರ್ ಭಾಗಿ* ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ ಶ್ರೀ ಅಕ್ಷೋಭ್ಯ ತೀರ್ಥರ ೨೧೫ನೇ ಆರಾಧನಾ ಮಹೋತ್ಸವಹಳ್ಳಿಗಳಲ್ಲೇ ಹೆಣ್ಣು ಮಕ್ಕಳು ಹೆಚ್ಚು ಶೋ?ಣೆಗೆ ಒಳಗಾಗುತ್ತಿದ್ದಾರೆ : ನ್ಯಾ. ಸವಿತಾ ಮುಕ್ಕಲ್ಶತಾಯುಷಿ ದಂಪತಿಗಳ ಜನ್ಮಶತಮಾನೋತ್ಸವಕರವೇ ಹೋರಾಟಕ್ಕೆ ಸ್ಪಂದಿಸಿದ ಶಾಸಕರು ಹಾಗೂ ಜಿಲ್ಲಾಧಿಕಾರಿಗಳುರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಗೆ ಆದರ್ಶಗೌಡ ಹಳೆಹಡಗಲಿ ಆಯ್ಕೆಕಬ್ಬಿಗೆ ಹೆಚ್ಚಿನ ದರಕ್ಕೆ ಕೇಂದ್ರದ ಸಭೆಯಲ್ಲಿ ಪ್ರಸ್ತಾವನೆ, ದೆಹಲಿಯಲ್ಲಿ ಕೇಂದ್ರ ತಂಡದೊAದಿಗೆ ಸಭೆ. ರೈತರ ಹಿತಾಸಕ್ತಿ ಕಾಪಾಡಲು ಬದ್ದ ಸಹಕಾರಿ ಸಚಿವ ಲಕ್ಷö್ಮಣ ಸವದಿಇಂಗಳಗಿ ಪಿಕೆಪಿಎಸ್ ಅಧ್ಯಕ್ಷರಾಗಿ ಉಮೇಶ ಚವ್ಹಾಣ್ ಭರ್ಜರಿ ಗೆಲುವು