LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bagalkot

ವಿಜೇತರಾದ ಕ್ರೀಡಾಪಟುಗಳಿಗೆ ಪದಕ ವಿತರಿಸಿದ ಸಚಿವ ಕಾಶಪ್ಪನವರ

ಬಾಗಲಕೋಟೆಯಲ್ಲಿ ರಾಜ್ಯ ಮಟ್ಟದ ಜೂಡೋ ಪಂದ್ಯಾವಳಿ

ಬಾಗಲಕೋಟೆ : ಅಕ್ಟೋಬರ ೧೦ : ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಜೂಡೋ ಪಂದ್ಯಾವಳಿಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಪದಕಗಳನ್ನು ವಿತರಣೆ ಮಾಡಿದರು.
ವಿಜೇತರಿಗೆ ಪದಕಗಳನ್ನು ವಿತರಿಸಿ ಮಾತನಾಡಿದ ಅವರು ಬಾಗಲಕೋಟೆಯಲ್ಲಿ ರಾಜ್ಯಮಟ್ಟದ ಜೂಡೋ ಪಂದ್ಯಾವಳಿಗಳು ಆಯೋಜಿಸಿರುವುದು ಸಂತಸ ತಂದಿದೆ. ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರ ಮಟ್ಟದಲ್ಲಿಯೂ ಅವಕಾಶಗಳ ಸದುಪಯೋಗ ಪಡೆದುಕೊಳ್ಳಬೇಕು. ತಮ್ಮ ಗುರಿ ಮುಟ್ಟಲು ಸತತ ಪ್ರಯತ್ನ ಮಾಡಬೇಕು ಎಂದರು.
ಕ್ರೀಡೆಗಳು ಮಕ್ಕಳಲ್ಲಿ ಶಿಸ್ತು, ಆತ್ಮವಿಶ್ವಾಸ, ಏಕಾಗ್ರತೆ ಹಾಗೂ ಹೋರಾಟದ ಮನೋಭಾವ ಬೆಳೆಸುತ್ತದೆ. ಕ್ರೀಡಾಪಟುಗಳು ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ನಿರಂತರ ಅಭ್ಯಾಸ, ಪರಿಶ್ರಮ ಮತ್ತು ದೃಡಸಂಕಲ್ಪದಿಂದ ಉನ್ನತ ಮಟ್ಟದ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಇಂತಹ ಕ್ರೀಡಾಕೂಟಗಳು ಯುವ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆಯಾಗುತ್ತದೆ ಎಂದರು.
ಪಂದ್ಯಾವಳಿಯಲ್ಲಿ ಸಾಧನೆ ಮಾಡಿದ ಬಾಲಕ ಹಾಗೂ ಬಾಲಕಿಯರಿಗೆ ಪದಕಗಳನ್ನು ವಿತರಿಸುವ ಮೂಲಕ ಸಚಿವರು ಕ್ರೀಡಾಪಟುಗಳನ್ನು ಅಭಿನಂಧಿಸಿದರು. ಜೂಡೋ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡವರು ಇದೇ ತಿಂಗಳು ನವದೆಹಲಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಬಾಗಲಕೋಟೆ ಪಟ್ಟಣ ಅಬಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಜಿಲ್ಲಾಧಿಕಾರಿ ಸಂಗಪ್ಪ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಸಿ.ಸೀತಾರಾಮು, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.
೧೪ ವರ್ಷದೊಳಗಿನ ಜೂಡೋ ಪಂದ್ಯದ ವಿಜೇತರು : ಬಾಲಕರ ವಿಭಾಗ : ೨೫ ಕೆಜಿ ಜೂಡೋ ಪಂದ್ಯದಲ್ಲಿ ಸಾಹಿಲ್ ನಾಯ್ಕ ಬೆಳಗಾವಿ (ಪ್ರಥಮ), ೩೦ ಕೆಜಿಯಲ್ಲಿ ಪಾರ್ಥ ಎಸ್ ಬೆಳಗಾವಿ (ಪ್ರಥಮ), ೩೫ ಕೆಜಿಯಲ್ಲಿ ವಿಜಯಕುಮಾರ ಬೆಳಗಾವಿ (ಪ್ರಥಮ), ೪೦ ಕೆಜಿಯಲ್ಲಿ ಶ್ರುಜನಕುಮಾರ ಬೆಂಗಳೋರ (ಪ್ರಥಮ), ೪೫ ಕೆಜಿಯಲ್ಲಿ ವಾಬ್ರೀತ್ ಕೆ.ಆರ್ ಶಿವಮೊಗ್ಗ (ಪ್ರಥಮ), ೫೦ ಕೆಜಿಯಲ್ಲಿ ಮನಿಕಂಠ ಬೆಂಗಳೂರು ಉತ್ತರ (ಪ್ರಥಮ), 
ಬಾಲಕಿಯರ ವಿಭಾಗ : ೨೩ ಕೆಜಿಯಲ್ಲಿ ಭಾಗ್ಯಶ್ರೀ ಬೆಂಗಳೂರು ಉತ್ತರ (ಪ್ರಥಮ), ೨೭ ಕೆಜಿಯಲ್ಲಿ ಶ್ರೇಯಾ ಬೆಳಗಾವಿ (ಪ್ರಥಮ), ೩೨ ಕೆಜಿಯಲ್ಲಿ ಗಾಯಿತ್ರಿ ಬೆಳಗಾವಿ (ಪ್ರಥಮ), ೩೬ಕೆಜಿಯಲ್ಲಿ ಕಾವೇರಿ ಬೆಳಗಾವಿ (ಪ್ರಥಮ), ೪೦ ಕೆಜಿಯಲ್ಲಿ ಅಮೃತ ಚಿಕ್ಕಮಂಗಳೂರು (ಪ್ರಥಮ), ೪೪ ಕೆಜಿಯಲ್ಲಿ ವೈಶ್ವವಿ ಚಿಕ್ಕಮಂಗಳೂರು (ಪ್ರಥಮ).
೧೭ ವರ್ಷದೊಳಗಿನ ಜೂಡೋ ಪಂದ್ಯದ ವಿಜೇತರು : ಬಾಲಕರ ವಿಭಾಗ : ೪೦ ಕೆಜಿ ವಿಭಾಗದಲ್ಲಿ ಪ್ರೀತಮ ಹುಳಿಕಟ್ಟಿ ಚಿಕ್ಕಮಂಗಳೂರು (ಪ್ರಥಮ), ೪೫ ಕೆಜಿಯಲ್ಲಿ ಶ್ರೇಯಲ್ ಬೆಳಗಾವಿ (ಪ್ರಥಮ), ೫೦ ಕೆಜಿಯಲ್ಲಿ ಪ್ರದೀಪ ತೇರದಾಳ ಚಿಕ್ಕಮಂಗಳೂರು (ಪ್ರಥಮ), ೫೫ ಕೆಜಿಯಲ್ಲಿ ಬಿಮಲ್ ಪಾರ್‍ಕಿ ಬೆಂಗಳೂರು ಉತ್ತರ (ಪ್ರಥಮ), ೬೦ ಕೆಜಿಯಲ್ಲಿ ಪ್ರಜ್ವಲ್ ಕಾಂಬಳೆ ಚಿಕ್ಕೋಡಿ (ಪ್ರಥಮ), ೬೬ ಕೆಜಿಯಲ್ಲಿ ತುಕಾರಾಮ ಲಮಾಣಿ ಬೆಳಗಾವಿ (ಪ್ರಥಮ), ೭೩ ಕೆಜಿಯಲ್ಲಿ ಮುತ್ತುರಾಜ ಡಾವಣಗೇರಿ (ಪ್ರಥಮ), ೮೧ ಕೆಜಿಯಲ್ಲಿ ಜೀವನ ಎಂ ವಿಜಯನಗರ (ಪ್ರಥಮ), ೯೦ ಕೆಜಿಯಲ್ಲಿ ದಿಗಂಬರ ಎನ್ ಚಿಕ್ಕೋಡಿ (ಪ್ರಥಮ), ಡಬ್ಲೂ+೯೦ ಕೆಜಿಯಲ್ಲಿ ಸತೀಶ ಸದಲಕರ ಚಿಕ್ಕೋಡಿ (ಪ್ರಥಮ).
ಬಾಲಕಿಯರ ವಿಭಾಗ : ೩೬ ಕೆಜಿಯಲ್ಲಿ ಬಿಂದು ಬೆಳಗಾವಿ (ಪ್ರಥಮ), ೪೦ ಕೆಜಿಯಲ್ಲಿ ರಾಜನಾ ನಾಯಕ ಬೆಳಗಾವಿ (ಪ್ರಥಮ), ೪೪ ಕೆಜಿಯಲ್ಲಿ ನೇತ್ರಾ ಪಿ. ಬೆಳಗಾವಿ (ಪ್ರಥಮ), ೪೮ ಕೆಜಿಯಲ್ಲಿ ಮೆಘನಾ ಎಂ ಬೆಳಗಾವಿ (ಪ್ರಥಮ), ೫೨ಕೆಜಿಯಲ್ಲಿ ಶ್ರೇಯಾ ಪಾಟೀಲ ಚಿಕ್ಕಮಂಗಳೂರು (ಪ್ರಥಮ), ೫೭ ಕೆಜಿಯಲ್ಲಿ ಆರತಿ ಎಂ ಬೆಳಗಾವಿ (ಪ್ರಥಮ), ೬೩ ಕೆಜಿಯಲ್ಲಿ ಜಾನವಿ ಟಿ ಬೆಳಗಾವಿ (ಪ್ರಥಮ), ೭೦ ಕೆಜಿಯಲ್ಲಿ ಶಾಂತಲಾ ಜಿ ಚಿಕ್ಕಮಂಗಳೂರು (ಪ್ರಥಮ), ಟಬ್ಲೂ+೭೦ ಕೆಜಿಯಲ್ಲಿ ಅಚಿಜಲಿ ಪಾಟೀಲ ಬೆಳಗಾವಿ (ಪ್ರಥಮ)

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವನ್ಯಜೀವಿಗಳಿಗೂ ಮಾನವರಂತೆ ಮನಸ್ಸಿದೆ, ಅವುಗಳನ್ನು ಪ್ರೀತಿಸೋಣ: ಡಿಎಫ್‌ಒ ಮಲ್ಲಿನಾಥ ಕುಸನಾಳದೈನಂದಿನ ಜೀವನದಲ್ಲಿ ಪ್ರಾಣಾಯಾಮದಿಂದ ಆರೋಗ್ಯ ಮತ್ತು ಮನಃಶಾಂತಿ: ಅಮೃತಾಂನಂದ ಮಹಾಸ್ವಾಮಿಗಳ ಬೋಧನೆಇಂಡಿ: ಶಾಸಕ ಯಶವಂತರಾಯಗೌಡ ಪಾಟೀಲ ಅವರ 59ನೇ ಜನ್ಮದಿನದ ನಿಮಿತ್ತ ಉಚಿತ ಆರೋಗ್ಯ ತಪಾಸಣಾ ಶಿಬಿರಕೊಪ್ಪಳದಲ್ಲಿ ಶ್ರದ್ಧಾ-ಭಕ್ತಿಯಿಂದ ನಡೆದ ಸಾಮೂಹಿಕ ಪಿಂಡ ಪ್ರದಾನ ಹಾಗೂ ಪಿತೃ ತರ್ಪಣಬಳ್ಳಾರಿಯ ಶ್ರೀ ಸಣ್ಣದುರ್ಗಮ್ಮ ದೇವಸ್ಥಾನದಲ್ಲಿ  11ನೇ ವರ್ಷದ ಶರನ್ನವರಾತ್ರಿ ಉತ್ಸವ ಇಂದು ಹನುಮಾನ್ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮಮೂಳೆಯ ಗುಣಮಟ್ಟ ಕಡಿಮೆ ಇರುವ ರೋಗಿಗಳಲ್ಲಿ ಆಂಕರ್‌ರಹಿತ ರಿಪೇರ್‌ಗೆ ನೆರವಾಗುವ ಸಾಧನ ಅಭಿವೃದ್ಧಿಹೊಸಪೇಟೆಯಲ್ಲಿ ಪಂಡಿತ್ ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆಗ್ರಾಮೀಣ ಕ್ರೀಡೆಗಳು ನಮ್ಮ ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಸಂಕೇತ: ಶಾಸಕ ವಿಶ್ವಾಸ ವೈದ್ಯಸಮಾಜದ ಓರೆಕೋರೆಗಳನ್ನು ತಿದ್ದುವ ವರದಿಗಾರರು ಶ್ರೇ?ರು: ಧರೆಪ್ಪ ಸಾಂಗ್ಲೀಕರ