Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎಡಗೈಯೇ ಅಪಘಾತಕ್ಕೆ ಕಾರಣ  ಹೊಸ ಪೋಸ್ಟರ್ ರಿಲೀಸ್







    ಅಂತಾರಾಷ್ಟ್ರೀಯ ಎಡಗೈ ಬಳಕೆದಾರರ  ವಿಶೇಷ ದಿನದ ಅಂಗವಾಗಿ 'ಎಡಗೈ ಅಪಘಾತಕ್ಕೆ ಕಾರಣ' ಸಿನಿಮಾ ತಂಡದಿಂದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

     ಎಡಗೈ ಬಳಸುವವರನ್ನೇ ಗಮನದಲ್ಲಿಟ್ಟುಕೊಂಡು, ಅವರ ಜೀವನ ಶೈಲಿ ಕುರಿತು ಈ ಚಿತ್ರ ಕಟ್ಟಿಕೊಡಲಾಗಿದೆ. ಅದರಂತೆಯೇ ಪೋಸ್ಟರ್ ಕೂಡ  ಆಕರ್ಷಕವಾಗಿದೆ. ಸೆಟ್ಟೇರಿದ ದಿನದಂದಲೂ ಚಿತ್ರತಂಡ ವಿಭಿನ್ನ ಪೋಸ್ಟರ್ ಅನಾವರಣ ಮಾಡುವ ಮೂಲಕ ಪ್ರೇಕ್ಷಕರ ಕುತೂಹಲವನ್ನು ಹೆಚ್ಚು ಮಾಡಿದೆ.


     'ಎಡಗೈಯೇ ಅಪಘಾತಕ್ಕೆ ಕಾರಣ' ಸಿನಿಮಾಗೆ ಸಮರ್ಥ್ ಬಿ ಕಡಕೊಳ್ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಕಥಾ ಹಂದರ ಈ ಸಿನಿಮಾದಲ್ಲಿದೆ. ದೂದ್ ಪೇಡ ದಿಗಂತ್ ನಾಯಕನಾಗಿ ನಟಿಸಿದ್ದು, ದಿಗ್ಗಿಗೆ ಜೋಡಿಯಾಗಿ ಹೊಸ ನಟಿ ಧನು ಹರ್ಷ ನಟಿಸುತ್ತಿದ್ದು ನಿಧಿ ಸುಬ್ಬಯ್ಯ, ರಾಧಿಕಾ ನಾರಾಯಣ್, ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಕೂಡಾ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.


     ಎಡಗೈ ಅಪಘಾತಕ್ಕೆ ಕಾರಣ ಸಿನಿಮಾವನ್ನು ಹೈಫನ್ ಪಿಕ್ಚರ್ಸ್ ಹಾಗೂ ಗುರುದತ್ ಗಾಣಿಗ ಫಿಲ್ಮಂಸ್ ಬ್ಯಾನರ್ ನಡಿ ಗುರುದತ್ ಗಾಣಿಗ ಹಾಗೂ ನಿರ್ದೇಶಕ ಸಮರ್ಥ್ ಬಿ ಕಡಕೊಳ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಅಭಿಮನ್ಯು ಸದಾನಂದ್ ಕ್ಯಾಮೆರಾ ವರ್ಕ್, ರಾಹುಲ್ ವಿ ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಇದೆ.

'ಎಡಗೈ ಅಪಘಾತಕ್ಕೆ ಕಾರಣ' ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ತೆರೆಗೆ ಬರಲು ಸಜ್ಜಾಗಿದೆ. ಚಿತ್ರತಂಡ ಪ್ರಚಾರ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದು, ಶೀಘ್ರದಲ್ಲೇ ಸಿನಿಮಾವನ್ನು ತೆರೆಗೆ ತರಲಿದೆ.















Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ