LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಪತ್ರಕರ್ತೆ ನೀರೂಶರ್ಮಾ ಈಗ ಬಾಂದ್ರ ಬಾಯ್ ಸಿನಿಮಾ ನಿರ್ದೇಶಕಿ

ಬಾಲಿವುಡ್ ಅಂಗಳದಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಕತೆಯಾಗಿ ಗುರುತಿಸಿಕೊಂಡಿರುವ ನೀರೂಶರ್ಮಾ ಹೊಸ ಅನುಭವ ಎನ್ನುವಂತೆ *’ಬಾಂದ್ರ ಬಾಯ್’* ಇಪ್ಪತ್ತೊಂದು ನಿಮಿಷದ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. 

news_1783060417_0_505.webp

     ಹಿರಿಯ ನಿರ್ದೇಶಕ ಸುಭಾಷ್ ಘಾಯ್ ಒಡೆತನದ ವಿಸ್ಟಿಂಗ್‌ವುಡ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯಲ್ಲಿ ನಿರ್ದೇಶನದ ಕೋರ್ಸ್ ಮುಗಿಸಿ, ನಂತರ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇವರ ಶ್ರಮಕ್ಕೆ ರಾಜೀವ್ ಪರಾಶರ್ ಕ್ರ್ರಿಯೇಶನ್ಸ್ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ.

ಶೀರ್ಷಿಕೆಗೆ ’ಕ್ರೂರ,ಕಹಿ, ಪಕ್ಷಪಾತ’ ಎಂಬ ಅಡಿಬರಹ ಇಂಗ್ಲೀಷ್‌ನಲ್ಲಿದೆ.

      ಇಂದಿನ ಡಿಜಿಟಲ್ ಯುಗದಲ್ಲಿ ಬಲವಾಗಿ ಪ್ರತಿಧ್ವನಿಸುವ ವಿಷಯಗಳನ್ನು ಚಿತ್ರಕತೆಯಲ್ಲಿ ಬಳಸಿಕೊಂಡಿದ್ದಾರೆ. ಮಾಧ್ಯಮ, ಅಧಿಕಾರ ಮತ್ತು ಸಾಮಾಜಿಕ ತೀರ್ಪಿನ ನಡುವಿನ ಸಂಕೀರ್ಣ ಸಂಬಂಧಗಳನ್ನು ಅನ್ವೇಷಿಸುತ್ತದೆ. ಸತ್ಯಗಳು ಹೊರಹೊಮ್ಮುವ ಮೊದಲು ನಿರೂಪಣೆಗಳು ಹೇಗೆ ರಚಿಸ್ಪಡುತ್ತವೆ. ಇಂತಹ ಸತ್ಯಗಳು ಎಷ್ಟು ಸುಲಭವಾಗಿ ಮೀರಿಸಬಹುದು ಎಂದು ನೋಡುಗರನ್ನು ಪ್ರಶ್ನಿಸುವಂತೆ ಮಾಡುತ್ತದೆ.

news_1783060417_1_159.webp

      ಮ್ಯೂಸಿಕ್ ಆಲ್ಬಂ,ದೂರದರ್ಶನ, ಡಿಜಿಟಲ್ ಫ್ಲಾಟ್‌ಫಾರ್ಮ್‌ಗಳಲ್ಲಿ ಹೆಸರು ಮಾಡಿರುವ ಆಹ್ವಾನ್‌ಕುಮಾರ್ ಹಾಗೂ ಗುಜರಾತಿ ಮತ್ತು ಮರಾಠಿ ಭಾಷೆಯ ಖ್ಯಾತ ನಟ ಧರ್ಮೇಂದ್ರ ಗೋಹಿಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಲೋಚನ್ ಬರ್ಸಗಡೆ, ಯಶ್ ಪಡ್ನೇಕರ್, ಶಾಮ್‌ಥೋಬರೆ, ಪವನ್ ತಿವಾರಿ, ಐಶ್ವರ್ಯ ಮನೋಹರ್, ಹಿಮಾಂಶಿ ಮಂಡಾಲಿಯ, ನಂದಿನಿಶರ್ಮಾ ಮುಂತಾದವರು ನಟಿಸಿದ್ದಾರೆ.

     ಸಂಗೀತ ಮಹಾವೀರ್ ಕೌಶಲ್, ಛಾಯಾಗ್ರಹಣ ಆಯುಷ್ ಷಾ, ಸಂಕಲನ ಸಂದೀಪ್ ಕುರ್ರಪ್ ಚಿತ್ರಕ್ಕಿದೆ. ’ಬಾಂದ್ರ ಬಾಯ್’ ಈಗಾಗಲೇ ರಾಷ್ಟ್ರೀಯ, ಅಂತರರಾಷ್ಟ್ರೀಯ ಹಾಗೂ ಮುಂಬರುವ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸಲ್ಲಿಕೆಯಾಗಿದ್ದು, ತನ್ನ ಉತ್ಸವದ ಪ್ರಯಾಣವನ್ನು ಶುರು ಮಾಡಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಚಿವ ಬಿ.ನಾಗೇಂದ್ರ ರಾಜಿನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಕರ್ನಾಟಕದ ಅವಿಭಾಜ್ಯ ಅಂಗ ಬೆಳಗಾವಿ : ಗೊತ್ತುವಳಿ  ಸ್ವೀಕಾರಕ್ಕೆ ಕಾಂಗ್ರೆಸ್ ಪಟ್ಟು; ಪಾಲಿಕೆ ಸಭೆಯಲ್ಲಿ ಗದ್ದಲದ ಕೋಲಾಹಲ. ಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರಹ್ಲಾದ ಆಚಾರ್ಯ ಯಜುರ್ವೇದಿ ಅವರಿಗೆ ಪಿಎಚ್ ಡಿಭಾರತ ಜೋಡೋ ಯುವ ಸಂಘಗಳ ನೋಂದಣಿಗೆ ಅರ್ಜಿ ಆಹ್ವಾನಮನಸ್ಸನ್ನ ನಿಗ್ರಹಿಸಿಕೊಂಡರೆ ಮಾದಕ ವ್ಯಸನಗಳಿಂದ ಮುಕ್ತಿ - ಕವಿಯತ್ರಿ ಅಂಜಲಿ ಬೆಳಗಲ್ಹೆಚ್ ಎಲ್ ಸಿ ಮತ್ತು ಎಲ್ ಎಲ್ ಸಿ ಕಾಲುವೆ ನೀರಿನ ಹರಿವು ಹೆಚ್ಚಿಸಲು ಮನವಿಬಾಲ್ಯ ವಿವಾಹ ಕಾನೂನುಬಾಹಿರ: ರೇಣುಕಾ ಜಡಗಣ್ಣನವರ್ಆಗಸ್ಟ್ 27 ರಂದು ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ಚಿತ್ರದುರ್ಗದಲ್ಲಿ ‘ನಿಧಿ ಆಪ್ಕೆ ನಿಕಟ್' ಕಾರ್ಯಕ್ರಮಆಗಸ್ಟ್ 20 ರಂದು ದಿವಂಗತ ಡಿ.ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ ಸಮಾರಂಭಬಳ್ಳಾರಿ: ಗಾಂಧಿನಗರದಲ್ಲಿ ಸ್ವಚ್ಛತಾ ಕಾರ್ಯದೊಂದಿಗೆ 80ನೇ ಸ್ವಾತಂತ್ರö್ಯ ದಿನಾಚರಣೆ