LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bellary

ಬಳ್ಳಾರಿ: ಗಾಂಧಿನಗರದಲ್ಲಿ ಸ್ವಚ್ಛತಾ ಕಾರ್ಯದೊಂದಿಗೆ 80ನೇ ಸ್ವಾತಂತ್ರö್ಯ ದಿನಾಚರಣೆ


ಬಳ್ಳಾರಿ,ಆ.18 ಭಾರತ ಸರ್ಕಾರದ ಮೇರಾ ಯುವ ಭಾರತ (ಬಳ್ಳಾರಿ), ಶುಭಮಸ್ತು ಮಹಿಳಾ ಸಂಘ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ‘ಸ್ವಚ್ಛತಾ ಪಕ್ವಾಡಾ' ಅಭಿಯಾನದ ಅಂಗವಾಗಿ ಶನಿವಾರ ಗಾಂಧಿನಗರದ ಕೆ.ಹೆಚ್.ಬಿ. ಕಾಲೋನಿ ಪಾರ್ಕ್ನಲ್ಲಿ 80ನೇ ಸ್ವಾತಂತ್ರö್ಯ ದಿನಾಚರಣೆಯನ್ನು ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮಹಾನಗರ ಪಾಲಿಕೆಯ 22ನೇ ವಾರ್ಡ್ ನ ಸದಸ್ಯ ಕೆ. ಹನುಮಂತಪ್ಪ ಅವರು, ನಗರದಲ್ಲಿ ಸ್ವಚ್ಛತೆಯ ಅರಿವು ಮೂಡಿಸುವುದು ಪ್ರತಿಯೊಬ್ಬರ ಕರ್ತವ್ಯ. ಎಲ್ಲೆಂದರಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಸಾರ್ವಜನಿಕರು ಹಾಗೂ ಅಂಗಡಿ-ಮುAಗಟ್ಟುಗಳ ಮಾಲೀಕರು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿ, ಪರಿಸರಸ್ನೇಹಿ ಬಟ್ಟೆ ಚೀಲಗಳನ್ನು ಬಳಸುವ ಮೂಲಕ ಪರಿಸರ ರಕ್ಷಣೆಗೆ ಸಹಕರಿಸಬೇಕು ಎಂದು ಕರೆ ನೀಡಿದರು.
ಶುಭಮಸ್ತು ಮಹಿಳಾ ಸಂಘದ ಕಾರ್ಯದರ್ಶಿ ಸುಮಾರೆಡ್ಡಿ ಅವರು ಮಾತನಾಡಿ, ಮಹಾತ್ಮ ಗಾಂಧೀಜಿಯವರು ಸ್ವಾತಂತ್ರö್ಯ ಪೂರ್ವದಿಂದಲೂ ಸ್ವಚ್ಛತೆಗೆ ನೀಡಿದ ಮಹತ್ವ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಆರಂಭವಾದ ಸ್ವಚ್ಛ ಭಾರತ ಅಭಿಯಾನದ ಆಶಯಗಳ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಬನ್ನಿ ಗಿಡ ಪಾರ್ಕ್ ನಾಗರಿಕರ ವೇದಿಕೆಯ ಗೌರವಾಧ್ಯಕ್ಷ ನಾರಾಯಣಪ್ಪ, ಅಧ್ಯಕ್ಷ ರಾಮೇಶ್ವರ ಹಾಗೂ ಪ್ರಮುಖರಾದ ರಾಜು, ಶಿವು, ಶಿವರಾಜ್ ಗೌಡ, ತಿಪ್ಪೇಸ್ವಾಮಿ, ರಜಾಕ್ ಸಾಬ್, ಸೂರ್ಯದೇವ, ಸುಂಕಣ್ಣ, ಮಹಾನಗರ ಪಾಲಿಕೆಯ ಪೌರಕಾರ್ಮಿಕರು, ಸ್ವಚ್ಛ ಭಾರತ್ ಪದಾಧಿಕಾರಿಗಳು ಮತ್ತು ಬಡಾವಣೆಯ ನಾಗರಿಕರು ಶ್ರಮದಾನದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ವೇದಿಕೆಯ ಅಧ್ಯಕ್ಷ ರಾಮೇಶ್ವರ ಅವರು ವಂದನಾರ್ಪಣೆ ಮಾಡಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೂರನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ ಯರಗಟ್ಟಿ-ಮುನವಳ್ಳಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಶಾನೂರಬಿ ದಿಲಾವರನಾಯ್ಕ ಆಯ್ಕೆ ವಾರದ ಗಡುವು ಠರಾವು ಅಂಗೀಕರಿಸದಿದ್ದರೆ ಬುಧವಾರ ಬೃಹತ್ ಪ್ರತಿಭಟನೆ: ಆರ್. ಅಭಿಲಾಷ್ ಎಚ್ಚರಿಕೆ. ಕ್ಯಾಪ್ಟನ್ ಅಭಿಮನ್ಯು ಆನೆಗೆ ರಾಜೋಚಿತ ಬೀಳ್ಕೊಡುಗೆ ನೀಡಿ:ಈಶ್ವರ ಖಂಡ್ರೆರೈತ ಸಂಘ ಸ್ಥಾಪನೆಯಿಂದ ರೈತರ ಸಮಸ್ಯ ಪರಿಹಾರ :ಚೂನಪ್ಪ ಪೂಜೇರಿ ಯುವಶಕ್ತಿ ರಾಷ್ಟçಶಕ್ತಿಯಾಗಲಿ: ಡಾ. ಇಂದ್ರಾಣಿ ಕರೆಪೂರ್ವಭಾವಿ ಸಭೆಯಲ್ಲಿ ನಿರ್ಧಾರ: ಮಹನೀಯರ ಜಯಂತಿಗಳ ಅರ್ಥಪೂರ್ಣ ಆಚರಣೆ - ತಹಶೀಲ್ದಾರ ಶೇಷಾವಲಿಬಿಮ್ಸ್  ನಿರ್ದೇಶಕ ಡಾ. ಗಂಗಾಧರ ಗೌಡರವರನ್ನು  ನಿರ್ದೇಶಕರನ್ನಾಗಿ ಮುಂದುವರೆಸಬೇಡಿ : ಕೆ. ಪಿ. ಹಸೇನ್ ಅಗ್ರಹ ಕನಿಷ್ಠ ವೇತನ ಜಾರಿಗೊಳಿಸಲು ಗ್ರಾಮ ಪಂಚಾಯಿತಿ ನೌಕರರಿಂದ ಧರಣಿ  : 13 ಬೇಡಿಕೆಗಳ ಈಡೇರಿಕೆಗೆ ಒತ್ತಾಯ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಅಹೋರಾತ್ರಿ ಧರಣಿ ಎರಡನೇಯ ದಿನದ ಹೋರಾಟ.