LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಯುವಶಕ್ತಿ ರಾಷ್ಟçಶಕ್ತಿಯಾಗಲಿ: ಡಾ. ಇಂದ್ರಾಣಿ ಕರೆ

ಶ್ರೀ ಮೇಧಾ ಕಾಲೇಜಿನಲ್ಲಿ ಅಂತರಾಷ್ಟಿçÃಯ ಯುವ ದಿನಾಚರಣೆ



ಬಳ್ಳಾರಿ,ಆ.19 ಯುವಕರು ದೇಶದ ಅಮೂಲ್ಯ ಸಂಪತ್ತು ಹಾಗೂ ನಾಳೆಯ ನಾಯಕರಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ಪಷ್ಟ ಗುರಿಯೊಂದಿಗೆ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಇಂದ್ರಾಣಿ ಅವರು ಹೇಳಿದರು.
ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಹೆಚ್‌ಐವಿ/ಏಡ್ಸ್ ನಿಯಂತ್ರಣ ಘಟಕ ಹಾಗೂ ಶ್ರೀ ಮೇಧಾ ಪದವಿ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಕಾಲೇಜು ಆವರಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಅಂತರಾಷ್ಟಿçÃಯ ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನವು ಭವಿಷ್ಯ ನಿರ್ಮಾಣದ ಪ್ರಮುಖ ಹಂತ. ಯಾವುದೇ ಕಾರಣಕ್ಕೂ ಗುರಿಯಿಂದ ವಿಮುಖರಾಗದೆ ಶಿಸ್ತುಬದ್ಧ ಜೀವನ ನಡೆಸಬೇಕು. ಅಸುರಕ್ಷಿತ ಲೈಂಗಿಕ ಸಂಪರ್ಕದಿAದ ಹರಡುವ ಹೆಚ್‌ಐವಿ, ಸಿಫಿಲಿಸ್‌ನಂತಹ ಸೋಂಕುಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಯುವಜನರು ಮಾದಕ ದ್ರವ್ಯ ಸೇರಿದಂತೆ ಎಲ್ಲಾ ದುಶ್ಚಟಗಳಿಂದ ದೂರವಿರಬೇಕು ಹಾಗೂ ಸಾಮಾಜಿಕ ಜಾಲತಾಣಗಳನ್ನು ಜವಾಬ್ದಾರಿಯುತವಾಗಿ ಬಳಸಿ, ಯಾವುದೇ ವಿಷಯ ಹಂಚಿಕೊಳ್ಳುವ ಮುನ್ನ ಸತ್ಯಾಸತ್ಯತೆ ಪರಿಶೀಲಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಿ.ಕೆ. ರಾಮಕೃಷ್ಣ ಅವರು ಮಾತನಾಡಿ, ಹೆಚ್‌ಐವಿ/ಏಡ್ಸ್ ನಿಯಂತ್ರಣದಲ್ಲಿ ಸಮಾಜದ ಪಾತ್ರ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ಈ ಬಗ್ಗೆ ವೈಜ್ಞಾನಿಕ ಮಾಹಿತಿ ಹೊಂದಿರಬೇಕು. ಆರೋಗ್ಯ ಇಲಾಖೆಯ ಜಾಗೃತಿ ಕಾರ್ಯಕ್ರಮಗಳಿಗೆ ಸಂಸ್ಥೆ ಸದಾ ಬೆಂಬಲ ನೀಡಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ‘ಮೊಬಿಲೈಸೇಷನ್ ಫಾರ್ ಏಡ್ಸ್ ಸೇಫ್ಟಿ’ ಅಭಿಯಾನದ ಬಗ್ಗೆ ಮಾಹಿತಿ ನೀಡಿ, ಕ್ಯೂಆರ್ ಕೋಡ್ ಮೂಲಕ ಹೆಚ್ಚಿನ ಅರಿವು ಪಡೆದು ಸಮಾಜದಲ್ಲಿ ಜಾಗೃತಿ ಮೂಡಿಸಲು ಪ್ರೇರೇಪಿಸಲಾಯಿತು.
*ರೀಲ್ಸ್ ಮೇಕಿಂಗ್ ಸ್ಪರ್ಧೆಯ ವಿಜೇತರು:*
ಕಾರ್ಯಕ್ರಮದ ಅಂಗವಾಗಿ ನಡೆದ ಹೆಚ್‌ಐವಿ/ಏಡ್ಸ್ ಜಾಗೃತಿ ರೀಲ್ಸ್ ಮೇಕಿಂಗ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
  ಪ್ರಥಮ ಬಹುಮಾನ (ರೂ.3,000): ಪ್ರಯಾ ಮತ್ತು ತಂಡ (ಶ್ರೀ ಮೇಧಾ ಪದವಿ ಮಹಾವಿದ್ಯಾಲಯ).
ದ್ವಿತೀಯ ಬಹುಮಾನ (ರೂ.2,000): ಯಶವಂತ್ ಕುಮಾರ್ ಮತ್ತು ತಂಡ (ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಬಳ್ಳಾರಿ)
ತೃತೀಯ ಬಹುಮಾನ (ರೂ.1,000): ಕಿಷ್ಕಿಂದಾ ವಿದ್ಯಾಲಯದ ವಿದ್ಯಾರ್ಥಿಗಳ ತಂಡ.
ಕಾರ್ಯಕ್ರಮದಲ್ಲಿ ಜಿಲ್ಲಾ ಹೆಚ್‌ಐವಿ/ಏಡ್ಸ್ ನಿಯಂತ್ರಣ ಘಟಕದ ಅಧಿಕಾರಿಗಳು, ಸಿಬ್ಬಂದಿ, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಾರದ ಗಡುವು ಠರಾವು ಅಂಗೀಕರಿಸದಿದ್ದರೆ ಬುಧವಾರ ಬೃಹತ್ ಪ್ರತಿಭಟನೆ: ಆರ್. ಅಭಿಲಾಷ್ ಎಚ್ಚರಿಕೆ. ಕ್ಯಾಪ್ಟನ್ ಅಭಿಮನ್ಯು ಆನೆಗೆ ರಾಜೋಚಿತ ಬೀಳ್ಕೊಡುಗೆ ನೀಡಿ:ಈಶ್ವರ ಖಂಡ್ರೆರೈತ ಸಂಘ ಸ್ಥಾಪನೆಯಿಂದ ರೈತರ ಸಮಸ್ಯ ಪರಿಹಾರ :ಚೂನಪ್ಪ ಪೂಜೇರಿ ಯುವಶಕ್ತಿ ರಾಷ್ಟçಶಕ್ತಿಯಾಗಲಿ: ಡಾ. ಇಂದ್ರಾಣಿ ಕರೆಪೂರ್ವಭಾವಿ ಸಭೆಯಲ್ಲಿ ನಿರ್ಧಾರ: ಮಹನೀಯರ ಜಯಂತಿಗಳ ಅರ್ಥಪೂರ್ಣ ಆಚರಣೆ - ತಹಶೀಲ್ದಾರ ಶೇಷಾವಲಿಬಿಮ್ಸ್  ನಿರ್ದೇಶಕ ಡಾ. ಗಂಗಾಧರ ಗೌಡರವರನ್ನು  ನಿರ್ದೇಶಕರನ್ನಾಗಿ ಮುಂದುವರೆಸಬೇಡಿ : ಕೆ. ಪಿ. ಹಸೇನ್ ಅಗ್ರಹ ಕನಿಷ್ಠ ವೇತನ ಜಾರಿಗೊಳಿಸಲು ಗ್ರಾಮ ಪಂಚಾಯಿತಿ ನೌಕರರಿಂದ ಧರಣಿ  : 13 ಬೇಡಿಕೆಗಳ ಈಡೇರಿಕೆಗೆ ಒತ್ತಾಯ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಅಹೋರಾತ್ರಿ ಧರಣಿ ಎರಡನೇಯ ದಿನದ ಹೋರಾಟ.ಕೆಪಿಎಸ್‌ಸಿ ಅಕ್ರಮದ ಬೆನ್ನತ್ತಿದ ಇಡಿ : ಕಿತ್ತೂರಿನಲ್ಲಿ ಸಂಬಂಧಿಕರ ಮನೆ ಮೇಲೆ ತಪಾಸಣೆ*ಮೂನ್ ವಾಕರ್ಸ್ ವತಿಯಿಂದ "ಶ್ರಾವಣ ಸಂಭ್ರಮ" ಕಾರ್ಯಕ್ರಮ*