LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

 ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಅಹೋರಾತ್ರಿ ಧರಣಿ ಎರಡನೇಯ ದಿನದ ಹೋರಾಟ.

ಬೆಳಗಾವಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಜಿಜೆಪಿ ನೇತ್ರತ್ವದಲ್ಲಿ  ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಮಂಗಳವಾರ ಎರಡನೇ ದಿನವೂ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದಿದೆ.
ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಧರಣಿಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಭಜನೆ ಮಾಡಿ  ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಜಗದೀಶ್ ಶೆಟ್ಟರ ಮಾತನಾಡಿ, “ಭ್ರಷ್ಟಾಚಾರದ ಬಗ್ಗೆ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಕೆ.ಎನ್. ರಾಜಣ್ಣ ಅವರ ಸಚಿವ ಸ್ಥಾನವನ್ನು ಕಿತ್ತುಕೊಂಡಿದ್ದೀರಿ. ಅದೇ ಸಮಾಜದ ಬಡವರ ಕೋಟಿ ಕೋಟಿ ಹಣ ಲೂಟಿ ಮಾಡಿದ ಆರೋಪ ಎದುರಿಸುತ್ತಿರುವ ನಾಗೇಂದ್ರ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ನೀಡಿದ್ದೀರಲ್ಲ, ನಾಚಿಕೆಯಾಗುವುದಿಲ್ಲವೇ? ಎಂದು ಪ್ರಶ್ನಿಸಿದರು.
ಕೂಡಲೇ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಈ ಹೋರಾಟವನ್ನು ಹಳ್ಳಿ ಹಳ್ಳಿಗೂ ಕೊಂಡೊಯ್ಯಬೇಕಾಗುತ್ತದೆ,ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ಯಾರೇ ಭ್ರಷ್ಟಾಚಾರ ಮಾಡಿದರೂ ಸಹಿಸುವುದಿಲ್ಲ, ಲಂಚ ಪಡೆಯುವುದನ್ನು ಸಹಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದೀರಿ. ಅದು ಕೇವಲ ತೋರಿಕೆಗಾಗಿ ಮಾಡಿದ ಹೇಳಿಕೆಯೇ ಎಂದು ಪ್ರಶ್ನಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗದ ಆರೋಪ ಗಂಭೀರವಾಗಿದ್ದು, ಪ್ರಕರಣದ ಸಂಪೂರ್ಣ ಸತ್ಯವನ್ನು ಜನತೆಯ ಮುಂದೆ ಇಡಬೇಕಾಗುತ್ತದೆ ಎಂದರು.   
ಈ ವೇಳೆ  ಮಾಜಿ ಶಾಸಕ ಸಂಜಯ ಪಾಟೀಲ, ಮಹಾನಗರ ಅಧ್ಯಕ್ಷೆ ಗೀತಾ ಸುತಾರ, ಬಸವರಾಜ ಹುಂದ್ರಿ, ನಿತಿನ್ ಚೌಗಲೆ, ಡಾ. ಸೋನಾಲಿ ಸರ್ನೋಬತ್, ಸಿ.ಬಿ. ಪಾಟೀಲ, ಈರಣ್ಣ ಅಂಗಡಿ, ಯುವರಾಜ್ ಜಾಧವ್, ಚೇತನ್ ಅಂಗಡಿ, ಶ್ರೀಶೈಲ ಯಮಕನಮರಡಿ, ಕೆ.ವಿ. ಪಾಟೀಲ, ವಿಜಯ ಗುಡದೇರಿ, ಪ್ರಶಾಂತ್ ಅಮ್ಮಿನಭಾವಿ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಾರದ ಗಡುವು ಠರಾವು ಅಂಗೀಕರಿಸದಿದ್ದರೆ ಬುಧವಾರ ಬೃಹತ್ ಪ್ರತಿಭಟನೆ: ಆರ್. ಅಭಿಲಾಷ್ ಎಚ್ಚರಿಕೆ. ಕ್ಯಾಪ್ಟನ್ ಅಭಿಮನ್ಯು ಆನೆಗೆ ರಾಜೋಚಿತ ಬೀಳ್ಕೊಡುಗೆ ನೀಡಿ:ಈಶ್ವರ ಖಂಡ್ರೆರೈತ ಸಂಘ ಸ್ಥಾಪನೆಯಿಂದ ರೈತರ ಸಮಸ್ಯ ಪರಿಹಾರ :ಚೂನಪ್ಪ ಪೂಜೇರಿ ಯುವಶಕ್ತಿ ರಾಷ್ಟçಶಕ್ತಿಯಾಗಲಿ: ಡಾ. ಇಂದ್ರಾಣಿ ಕರೆಪೂರ್ವಭಾವಿ ಸಭೆಯಲ್ಲಿ ನಿರ್ಧಾರ: ಮಹನೀಯರ ಜಯಂತಿಗಳ ಅರ್ಥಪೂರ್ಣ ಆಚರಣೆ - ತಹಶೀಲ್ದಾರ ಶೇಷಾವಲಿಬಿಮ್ಸ್  ನಿರ್ದೇಶಕ ಡಾ. ಗಂಗಾಧರ ಗೌಡರವರನ್ನು  ನಿರ್ದೇಶಕರನ್ನಾಗಿ ಮುಂದುವರೆಸಬೇಡಿ : ಕೆ. ಪಿ. ಹಸೇನ್ ಅಗ್ರಹ ಕನಿಷ್ಠ ವೇತನ ಜಾರಿಗೊಳಿಸಲು ಗ್ರಾಮ ಪಂಚಾಯಿತಿ ನೌಕರರಿಂದ ಧರಣಿ  : 13 ಬೇಡಿಕೆಗಳ ಈಡೇರಿಕೆಗೆ ಒತ್ತಾಯ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಅಹೋರಾತ್ರಿ ಧರಣಿ ಎರಡನೇಯ ದಿನದ ಹೋರಾಟ.ಕೆಪಿಎಸ್‌ಸಿ ಅಕ್ರಮದ ಬೆನ್ನತ್ತಿದ ಇಡಿ : ಕಿತ್ತೂರಿನಲ್ಲಿ ಸಂಬಂಧಿಕರ ಮನೆ ಮೇಲೆ ತಪಾಸಣೆ*ಮೂನ್ ವಾಕರ್ಸ್ ವತಿಯಿಂದ "ಶ್ರಾವಣ ಸಂಭ್ರಮ" ಕಾರ್ಯಕ್ರಮ*