ಬಳ್ಳಾರಿ. ಆ. 10: ಸ್ವಾತಂತ್ರ್ಯ ಪೂರ್ವದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಜನರಿಗೆ ಶಿಕ್ಷಣೆ ನೀಡಲು ಆರಂಭಗೊಂಡ ವೀರಶೈವ ಸಂಘ ಸಂಸ್ಥೆಗಳ ಶಾಲೆ ಕಾಲೇಜುಗಳ ಕೊಡುಗೆ ಮಹತ್ವದ್ದು ಎಂದು ಬೃಹತ್ ಕೈಗಾರಿಕಾ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಅಭಿಪ್ರಾಯಪಟ್ಟರು.
ಎರೆಡು ದಿನಗಳ ಕಾಲ ನಡೆಯುತ್ತಿರುವ
ನಗರದ ವೀರಶೈವ ವಿದ್ಯಾವರ್ಧಕ ಸಂಘದ ಪ್ರಥಮ ಶಾಲೆ ಹೀರದ ಸೂಗಮ್ಮ ಶಾಲೆಯ ಶತಮಾನೋತ್ಸವವನ್ನು ಶಾಲೆಯ ಆವರಣದಲ್ಲಿ ಇಂದು ಎಮ್ಮಿಗನೂರಿನ ಮಹಾಂತ ಮಠದ ಶ್ರೀಗಳ ಸಾನಿದ್ಯದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು ನಂತರ ಸಿದ್ದಗಂಗ ಮಠ, ಕೊಪ್ಪಳದ ಗವಿಸಿದ್ದೇಶ್ವರ ಮಠದ ಶಾಲೆಗಳಮೂಲಕ ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ಇವು ಕೇವಲ ಲಿಂಗಾಯತರಿಗೆ ಮಾತ್ರ ಶಿಕ್ಷಣ ನೀಡದೆ ಸರ್ವ ಸಮುದಾಯಕ್ಕೆ ಶಿಕ್ಷಣ ನೀಡುವ ಕೆಲಸ ಆಗಿದೆಂದರು.
ಈ ಶಿಕ್ಷಣ ಸಂಸ್ಥೆಗಳನ್ನು ಈ ವರೆಗೆ ಬೆಳಸಿಕೊಂಡು ಬಂದಿದೆ. ನಮ್ಮ ಸಂಸ್ಕೃತಿ, ಸಂಪ್ರದಾಯದ ಜೊತೆ ಅಧುನಿಕತೆ ಮೈಗೂಡಿಸಿಕೊಳ್ಳಬೇಕಿದೆ. ಆ ಚಿಂತನೆ ಮಾಡಬೇಕಿದೆ. ಎಐ, ರೋಬಟಿಕ್ಸ್ ಎಲ್ಲಾ ಕ್ಷೇತ್ರದಲ್ಲಿ ಮಹತ್ವದ ಒಅತ್ರ ಬೀರುತ್ತಿದೆ ಅದರ ಬಗ್ಗೆ ಗಮನ ಹರಿಸಬೇಕಿದೆ. ವಿದೇಶಿ ವಿವಿಗಳು ಬರುತ್ತಿವೆ. ಅವುಗಳ ಜೊತೆ ನಾವು ಸ್ಪರ್ಧಾತ್ಮಕವಾಗಿ ಶಿಕ್ಷಣ ನೀಡಬೇಕಿದೆಂದರು.
ಸಂಸ್ಥೆಗಳ ಅಭಿವೃದ್ಧಿಗೆ ಅನೇಕರು ದಾನ ನೀಡಿದ್ದಾರೆ. ಅದನ್ನು ಸಮರ್ಥವಾಗಿ, ಸಮರ್ಪಕವಾಗಿ ಬಳಸಿಕೊಳ್ಳಬೇಕು ಇಂತಹ ಸಂಸ್ಥೆಗಳ ಮೂಲಕಮತ್ತಷ್ಟು ಸಮಾಜದ ಅಭಿವೃದ್ಧಿ ಆಗಲಿ ಎಂದು ಹಾರೈಸಿದರು.
ಜ್ಞಾನದ ಬೆಳಕು:
ಎಮ್ಮಿಗನೂರಿನ ಮಹಾಂತ ಮಠದ ಶ್ರೀಗಳ ಆಶಿರ್ವಚನ ನೀಡಿ, ವೀರಶೈವ ಸಮಾಜದ ನೇತ್ರಾಲಯದಿಂದ ಹಿಮಾಲಯ ನೋಡು, ದೇವಸ್ಥಾನ ಕಟ್ಟು ಎಂದು ಹೇಳದಿದ್ದರೂ, ಶಿಕ್ಷಣ ಸಂಸ್ಥೆಗಳ ಮೂಲಕ ಜ್ಞಾನ ನೀಡುವ ಕಾರ್ಯ ನಡೆಯಿತು. ವೀರಶೈವ ಸಮಾಜದ ಅತಃಕರಣ ಎಂದರೆ ಅನ್ನ ಅಕ್ಷರ ದಾಸೋಹದ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಕಾರಣವಾಗಿದೆ. ಸರ್ವೇ ಜನ ಸುಖಿನೋ ಭವಂತಿ ಎಂದು ಅಣ್ಣ ಬಸವಣ್ಣ ಮಾರ್ಗದರ್ಶನ ನೀಡಿದ್ದಾರೆ. ಜ್ಞಾನದ ಬೆಳಕನ್ನು ನೀಡಿದ್ದು ವೀರಶೈವದ ಮಠ ಮಾನ್ಯಗಳು ಎಂದರು.
ಸ್ಮರಣ ಸಂಚಿಕೆ ಬಿಡುಗಡೆ:
ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ.ನಮೋಶಿ ಶತಮಾನೋತ್ಸವದ ಅಂಗವಾಗಿ ಹೊರತಂದ ಸ್ಮರಣ ಸಂಚಿಕೆ ಬಿಡುಗಡೆ ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಅಂದಿನ ಸಿಎಂ ಎಸ್.ನಿಜಲಿಂಗಪ್ಪ ಅವರು ರೈತರಿಂದ 2.5 ಸೆಸ್ ಸಂಗ್ರಹ ಮಾಡಿ ನೀಡಿದನ್ನು ಸ್ಮರಿಸಿದರು.
ಕಾಲೇಜುಗಳ ಆರಂಭಕ್ಕೆ ಸರ್ಕಾರ ನಿಯಮಗಳನ್ನು ಸರಳೀಕರಣ ಮಾಡಬೇಕು ಎಂದ ಅವರು ಗುಣಮಟ್ಟದ ಶಿಕಣದ ಅವಶ್ಯಕತೆ ಇದೆಂದರು.
ಶಿಲಾನ್ಯಾಸ:
ಹಾನಗಲ್ಲು, ಉಜ್ಜಯನಿ ಶ್ರೀಗಳ ಮತ್ತು ಹೀರದ ಸೂಗಮ್ಮನವರ ಶಿಲಾ ಮೂರ್ತಿಗಳ ಪ್ರತಿಷ್ಟಾಪನೆಗೆ ಚಾಲನೆ ನೀಡಿದ ಸಚಿವ ಬಿ.ನಾಗೇಂದ್ರ ಮಾತನಾಡಿ,
ನಾನು ನನ್ನ ತಂದೆ ಈ ಸಂಘದ ಕಾಲೇಜುಗಳಲ್ಲಿ ಅಭ್ಯಾಸ ಮಾಡಿದ್ದೇವೆ. ಈ ಸಂಸ್ಥೆ ಶಿಕ್ಷಣಕ್ಕೆ ನೀಡಿದ ಕೊಡುಗೆ ಅಪಾರವಾದುದು ಎಂದರು. ಅಹಿಂದಾ ಸಮೂದಾಯಕ್ಕೂ ಅಕ್ಷರ ದಾಸೋಹ ಮಾಡಿದ ಖ್ಯಾತಿ ಈ ಸಂಘದ ಕೊಡುಗೆಯಾಗಿದೆ. ಅನೇಕ ಪ್ರತಿಭಾನ್ವಿತರನ್ನು ಸಮಾಜಕ್ಕೆ ನೀಡಿದ್ದನ್ನು ಉಲ್ಲೇಖಿಸಿ. ಬಡಜನರ ಬದುಕನ್ನು ಶಿಕ್ಷಣ ನೀಡುವಮೂಲಕ ಅವರ ಬಾಳನ್ನು ಬೆಳಗಿದ ಕೀರ್ತಿ ವೀರಶೈವ ವಿದ್ಯಾವರ್ಧಕ ಸಂಘದ್ದಾಗಿದೆಂದು ಶ್ಲಾಘಿಸಿದರು.
ಉಚಿತ ಹಾಸ್ಟಲ್ ಗೆ ಶಂಕುಸ್ಥಾಪನೆ:
ಸಂಸದ ಈ.ತುಕರಾಂ ಅವರು ವೀರಶೈವ ವಿದ್ಯಾವರ್ಧಕ ಸಂಘ ಆರಂಭಿಸಲು ಉದ್ದೇಶಿಸಿರುವ ಉಚಿತ ಹಾಸ್ಟಲ್ ಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿ. ಹೀರದ ಸೂಗಮ್ಮ ಅಕ್ಷರ ಅವ್ವಾ ಆಗಿದ್ದಾರೆ. ಅಕ್ಷರ ಅನ್ನ, ಆರೋಗ್ಯ ಮುಖ್ಯ ಈ ಸಂಸ್ಥೆ ಅಭಿವೃದ್ಧಿಗೆ ಶ್ರಮಿಸಿದವರ ಉಸಿರು ಇಲ್ಲದಿರಬಹುದು. ಆದೇ ಹೆಸರಿದೆ. ಇಂತಹ ಕಾರ್ಯ ಎಲ್ಲರಿಂದ ಆಗಬೇಕಿದೆ. ಶಿಕ್ಷಣದ ಜೊತೆ ಸಂವಿಧಾನವನ್ನು ಪಾಲಿಸಿಕೊಂಡು ಜೀವನದ ಅಂತ್ಯದ ವರೆಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ವೀರಶೈವ ವಿದ್ಯಾವರ್ಧಕ ಸಂಘದ ಸ್ಥಾಪನೆಯ ಮೂಲ ಪುರುಷರ ಭಾವ ಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕೆ.ಕಣೇಕಲ್ ಮಹಾಂತೇಶ್ ವಹಿಸಿದ್ದರು.
ವೇದಿಕೆಯಲ್ಲಿ ಪಾಲ್ತೂರು ಶ್ರೀಗಳು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ ವೀಣಾ ಕಾಶಪ್ಪನವರ್, ಮೆರಯರ್ ಪಿ.ಗಾದೆಪ್ಪ, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಸಂಘದ ಸಹ ಕಸರ್ಯದರ್ಶಿ ಮೇಟಿ ಯಾಳ್ಪಿ ಪಂಪನಗೌಡ, ಸಂಘದ ಉಪಾಧ್ಯಕ್ಷ ಜಾನೆಕುಂಟೆ ಬಸವರಾಜ್, ಕಾರ್ಯಕಾರಿ ಸಮಿತಿ ಸದಸ್ಯರು, ಹಿರಿಯ ಲೆಕ್ಕಪರಿಶೋಧಕ ಸಿರಿಗೇರಿ ಪನ್ನರಾಜ್ ಮೊದಲಾದವರು ಇದ್ದರು.
ಸಂಘದ ಖಜಾಂಚಿ ವದ್ದಿಗೇರಿ ಎರ್ರಿಸ್ವಾಮಿ ಅವರು ಸ್ವಾಗತಿಸಿದರೆ. ಕಾರ್ಯದರ್ಶಿ ಡಾ.ಅರವಿಂದ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ. ಶಾಲೆಯ, ಸಂಘದ ಇತಿಹಾಸವನ್ನು ತಿಳಿಸಿಕೊಟ್ಟರು.