LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bagalkot

ಮೋದಿ ನಾಯಕತ್ವದಲ್ಲಿ ಭಾರತಕ್ಕೆ ವಿಶ್ವಮಾನ್ಯತೆ: ಸಿದ್ದು ಸವದಿ

’ಸೇವಾ ಸಂಕಲ್ಪದ ರಂಗೋಲಿ ಮೂಲಕ ರಾಷ್ಟ್ರಭಕ್ತಿಯ ಅನಾವರಣ

 

 

ಮಹಾಲಿಂಗಪುರ,ಸೆ,೨೧: ಧರ್ಮದ ರಕ್ಷಣೆ ಹಾಗೂ ಅಧರ್ಮದ ನಾಶಕ್ಕಾಗಿ ಶ್ರೀಕೃಷ್ಣ ಪರಮಾತ್ಮ ಅವತಾರ ತಾಳಿದಂತೆ, ದೇಶದ ಹಿತ, ಅಭಿವೃದ್ಧಿ ಹಾಗೂ ಭದ್ರತೆಯ ಸಂಕಲ್ಪದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಮುನ್ನಡೆಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಭಾರತವು ಜಗತ್ತಿನ ಗಮನ ಸೆಳೆಯುವ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.

ನಗರದ ನಡುಚೌಕಿಯಲ್ಲಿ ತೇರದಾಳ ಮತಕ್ಷೇತ್ರದ ಬಿಜೆಪಿ ಗ್ರಾಮೀಣ ಘಟಕದ ಮಹಿಳಾ ಮೋರ್ಚಾ ವತಿಯಿಂದ ಅಧ್ಯಕ್ಷೆ ಸ್ನೇಹಲ್ ಅಂಗಡಿ ಅವರ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ’ಸೇವಾ ಸಂಕಲ್ಪ ಅಭಿಯಾನರಂಗೋಲಿ ರಾಷ್ಟ್ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

"ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ೧೩ ವರ್ಷ ಹಾಗೂ ಭಾರತದ ಪ್ರಧಾನಿಯಾಗಿ ೧೨ ವರ್ಷ ಸೇರಿದಂತೆ ಒಟ್ಟು ೨೫ ವರ್ಷಗಳ ಸಾರ್ವಜನಿಕ ಜೀವನದಲ್ಲಿ ದೇಶದ ಸೇವೆ ಸಲ್ಲಿಸಿದ್ದಾರೆ. ಅವರ ಆಡಳಿತದಲ್ಲಿ ಭಾರತವು ಹಲವು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದ್ದು, ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಸ್ಥಾನಮಾನವನ್ನು ಗಳಿಸಿಕೊಂಡಿದೆ" ಎಂದು ಸವದಿ ಹೇಳಿದರು.

ಮೋದಿ ಅವರ ಆಡಳಿತದ ವಿವಿಧ ಯೋಜನೆಗಳು ಹಾಗೂ ಉಪಕ್ರಮಗಳನ್ನು ಪ್ರಸ್ತಾಪಿಸಿದ ಅವರು, ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತ, ಡಿಜಿಟಲ್ ಇಂಡಿಯಾ ಸೇರಿದಂತೆ ಹಲವು ಕಾರ್ಯಕ್ರಮಗಳು ದೇಶದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿವೆ ಎಂದರು.

ದೇಶದ ಭದ್ರತೆ ಮತ್ತು ಸ್ವಾಭಿಮಾನಕ್ಕೆ ಆದ್ಯತೆ ನೀಡುವ ಮೂಲಕ ಭಾರತ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ. ಸರ್ಜಿಕಲ್ ಸ್ಟ್ರೈಕ್, ಆಪರೇಷನ್ ಸಿಂಧೂರ, ಬ್ರಿಕ್ಸ್ ಶೃಂಗಸಭೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಭಾರತದ ನಿಲುವು ಹಾಗೂ ಸಾಮರ್ಥ್ಯ ಜಾಗತಿಕವಾಗಿ ಚರ್ಚೆಗೆ ಬಂದಿದೆ ಎಂದು ಹೇಳಿದರು.

"ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಕೇವಲ ಹುಟ್ಟುಹಬ್ಬದ ಆಚರಣೆಯಾಗಿ ಸೀಮಿತಗೊಳಿಸದೆ, ಇಡೀ ತಿಂಗಳು ಸೇವಾ ಸಂಕಲ್ಪದ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಅರ್ಥಪೂರ್ಣವಾಗಿದೆ. ಜನಸೇವೆಯೇ ನಿಜವಾದ ರಾಷ್ಟ್ರಸೇವೆಯಾಗಿದ್ದು, ಪ್ರತಿಯೊಬ್ಬರೂ ಸಮಾಜದ ಒಳಿತಿಗಾಗಿ ತಮ್ಮ ಕೈಲಾದ ಸೇವೆ ಸಲ್ಲಿಸಬೇಕು" ಎಂದು ಸವದಿ ಕರೆ ನೀಡಿದರು.

ರಂಗೋಲಿಯಲ್ಲಿ ಅರಳಿದ ರಾಷ್ಟ್ರಭಕ್ತಿ : ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ರಂಗೋಲಿ ಕಾರ್ಯಕ್ರಮದಲ್ಲಿ ಮಹಿಳಾ ಮೋರ್ಚಾದ ಕಾರ್ಯಕರ್ತೆಯರು ವಿವಿಧ ಬಣ್ಣಗಳ ಮೂಲಕ ದೇಶಭಕ್ತಿ, ರಾಷ್ಟ್ರದ ಏಕತೆ, ಅಭಿವೃದ್ಧಿ ಹಾಗೂ ಸೇವಾ ಮನೋಭಾವವನ್ನು ಬಿಂಬಿಸುವ ಆಕರ್ಷಕ ರಂಗೋಲಿಗಳನ್ನು ಬಿಡಿಸಿದರು. ನಡುಚೌಕಿಯಲ್ಲಿ ಅರಳಿದ ವೈವಿಧ್ಯಮಯ ರಂಗೋಲಿಗಳು ಸಾರ್ವಜನಿಕರ ಗಮನ ಸೆಳೆದವು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಶೇಖರ ಅಂಗಡಿ, ಶಿವಾನಂದ ಅಂಗಡಿ, ಮಲ್ಲು ದಲಾಲ, ವಿಜಯ ಸಬಕಾಳೆ, ತಿಪ್ಪಣ್ಣ ಬಂಡಿವಡ್ಡರ, ಮಹಾದೇವ ಸಾವಂತ, ಮಹೇಶ ಜಿಡ್ಡಿಮನಿ, ಅಜಯ ಹಂದ್ರಾಳ, ವಿಜಯಲಕ್ಷ್ಮಿ ಕುಳ್ಳೊಳಿ, ಅರುಣಾ ಅಂಗಡಿ, ಲಕ್ಷ್ಮಿ ಅಂಗಡಿ, ಸುಜಾತಾ ಅಂಗಡಿ, ರೂಪಾಲಿ ಅಂಗಡಿ, ಕಾಳಮ್ಮ ಕೇದಾರಿ, ರೂಪಾ ಅಂಗಡಿ, ಕವಿತಾ ಮಡಿವಾಳ, ಗೌರಿ ಮಾಳಿ, ಸುವರ್ಣಾ ಕೊಪ್ಪದ, ಸಂಗೀತಾ ಹಳ್ಳೂರ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಮಹಿಳಾ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
೨೦ mಟಠಿ ೦೧ ಫೋಟೋ

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
*ಕಂಗ್ರಾಳಿ ಕೆ.ಎಚ್‌ನಲ್ಲಿ ₹20 ಲಕ್ಷ ವೆಚ್ಚದಲ್ಲಿ ಶ್ರೀ ವಿಠ್ಠಲ–ರುಕ್ಮಾಯಿ ಮಂದಿರದ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ*      ಚೆನ್ನೈನಲ್ಲಿ ನಡೆಯುವ  ರಾಷ್ಟ್ರಮಟ್ಟದ " ವುಶು" ಚಾಂಪಿಯನ್ಶಿಪ್ ಗೆ _ಜಿಲ್ಲೆಯ 5 ಪಟುಗಳು ಅಯ್ಕೆ .ಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ ‘ಪ್ರಜಾಸೇವೆ': ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಿ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ.ಬಳ್ಳಾರಿಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆ ಸುಸೂತ್ರ: ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಖುದ್ದು ಭೇಟಿ, ಪರಿಶೀಲನೆಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿಯಾಗಿ ಚಾಂದಿನಿ ನೇಮಕಸಹಕಾರಿಗಳ ಸಹಕಾರವೇ ಸಹಕಾರ ಚಳವಳಿಯ ಯಶಸ್ವಿ : ಶ್ರೀಮತಿ ಪಲ್ಲೇದ ಮೈತ್ರಿ ಕೊಣ್ಣೂರ ಗ್ರಾಮ ಅಭಿವೃದ್ದಿ ಕುರಿತು ಡಿಸಿ, ಸಿಇಓ ಜಂಟಿ ಸಭೆ ೭೨ ಜನ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಿದ ಶಾಸಕ ಜೆ.ಟಿ.ಪಾಟೀಲ