ಜಮಖಂಡಿ. ಚುನಾವಣೆಗಳೇ ಪ್ರಜಾಪ್ರಭುತ್ವದ ಜೀವಾಳವಾಗಿದ್ದು ಮಕ್ಕಳು ಶಾಲಾ ಹಂತದಲ್ಲಿಯೇ ಮತದಾನದ ಮಹತ್ವದ ಕುರಿತು ಅರಿಯಬೇಕು. ಚುನಾವಣೆಯ ಪ್ರಕ್ರಿಯೆಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಮತದಾರ ಸಾಕ್ಷರತಾ ಸಂಘದ ಸಂಚಾಲಕಿ ಸವಿತಾ ಬೆನಕಟ್ಟಿ ಹೇಳಿದರು. ಕುಂಬಾರಹಳ್ಳ ಪಿಎಂಶ್ರೀ ಶಾಲೆಯಲ್ಲಿ ನಡೆದ ಸಂಸತ್ತ ಚುನಾವಣೆಯ ಸಂಚಾಲತ್ವವಹಿಸಿ ಮಾತನಾಡಿದರು. ಭಾರತ ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು ಇಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದಾರೆ. ಮತಗಳೇ ಪ್ರಭುತ್ವವನ್ನು ನಿರ್ಧರಿಸುತ್ತವೆ. ಮುಂದಿನ ಪ್ರಜೆಗಳಾದ ಮಕ್ಕಳು ವಿದ್ಯಾರ್ಥಿದೆಸೆಯಿಂದಲೆ ಪವಿತ್ರ ಮತದಾನದ ಮಹತ್ವ ಅರಿಯುವಂತಾಗಲು ಶಾಲಾ ಚುನಾವಣೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದುತಿಳಿಸಿದರು.
ಸಾರ್ವತ್ರಿಕ ಚುನಾವಣೆಗಳು ನಡೆಯುವ ಮಾದರಿಯಲ್ಲಿಯೇ ಮತಪೆಟ್ಟಿಗೆಗಳನ್ನು ಬಳಸಿ ಮಕ್ಕಳಿಂದ ಮತದಾನ ಮಾಡಿಸಲಾಯಿತು. ಮತದಾನದ ಪ್ರಾತ್ಯಕ್ಷಿಕೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ನಿಂಗಪ್ಪ ತೇರದಾಳ, ಸದಸ್ಯರಾದ ಪದ್ಮಾ ಹುದಲಿ, ಶೈಲಾ ಮಾಳಿ, ಅಪ್ಪ ಸಾಬನದಾಫ ಉಪಸ್ಥಿತರಿದ್ದು ಚುನಾವಣೆಗೆ ಚಾಲನೆ ನೀಡಿದರು. ಮಕ್ಕಳು ಮತ ಚಲಾಯಿಸಿದರು. ಚುನಾವಣೆಯ ನಂತರ ಮತಗಳನ್ನು ಎಣಿಕೆ ಮಾಡಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.ಮತಗಟ್ಟೆ ಅಧಿಕಾರಿಗಳಾಗಿ, ಪೋಲಿಂಗ ಆಫೀಸರ ಆಗಿ, ಪೊಲೀಸ ಸಿಬ್ಬಂದಿಯಾಗಿ ಶಾಲಾ ಮಕ್ಕಳು ಕಾರ್ಯನಿರ್ವಹಿಸಿದರು.
ಮುಖ್ಯಶಿಕ್ಷಕ ನಾರಾಯಣ ಶಾಸ್ತ್ರಿ ಫಲಿತಾಂಶ ಘೋಷಿಸಿ *ಚುನಾವಣೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯ ಎಂದು ಹೇಳಿದರು. ಶಿಕ್ಷಕ ಸಂಗಮೇಶ ಉಟಗಿ, ಚಂದ್ರಕಾಂತ ಪೋಲಿಸ, ಅಶೋಕ ಬಿರಾದಾರ ಪಾಟೀಲ, ಶಾರದಾ ಮಠ ಎಣಿಕೆ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಶಿಕ್ಷಕ ಬಾಹುಬಲಿ ಮುತ್ತೂರ, ಮಂಜುಳಾ ಕಡಕೋಳ, ಆಸೀಫಾಭಾನು ಮೊಮಿನ,ಶಕುಂತಲಾ ಬಿರಾದಾರ ಸಂಪನ್ಮೂಲ ವ್ಯಕ್ತಿಗಳಾಗಿ ಮಕ್ಕಳಿಗೆ ತರಬೇತಿ ನೀಡಿದರು.
ಚುನಾವಣೆಯಲ್ಲಿ ಶ್ರವಣ ಯಮನಪ್ಪ ತೇಲಿ 95, ಶ್ರವಣ ಅಡೆವಪ್ಪ ಇಂಡಿ 93, ಚೈತ್ರಾ ನಿಂಗಪ್ಪ ತೇರದಾಳ 88, ಪೂರ್ಣಿಮಾ ಲಕ್ಷ್ಮಣ ಜೋಗಪ್ಪಗೋಳ 88, ಭವಾನಿ ಸದಾಶಿವ ಮಾಳಿ 82, ಶ್ವೇತಾ ಹಣಮಂತ ನ್ಯಾಮಗೌಡ 80, ಮಾದೇವ ಅಮೋಘಿ ಕುರಣಿ 78, ಸಾತ್ವಿಕ ಸಿದ್ಧಪ್ಪ ನರಸನ್ನವರ 77,ಸಂಜು ಬಸಪ್ಪ ಮಾಂಗ 71,ಮಂಜುನಾಥ ಸಾಬು ನಾಟಿಕಾರ 70 ಅತ್ಯಧಿಕ ಮತ ಪಡೆದು 2026-27ನೆಯ ಶಾಲಾ ಸಂಸತ್ತಿಗೆ ಆಯ್ಕೆಯಾದರು. ಒಟ್ಟು ಚಲಾವಣೆಯಾದ ಮತಗಳ 206. ತಿರಸ್ಕೃತಗೊಂಡ ಮತಗಳ ಸಂಖ್ಯೆ 2. ಶಿಕ್ಷಕ ಸಂಗಮೇಶ ಉಟಗಿ ಸ್ವಾಗತಿಸಿದರು, ಚಿತ್ರಕಲಾ ಶಿಕ್ಷಕ ಚಂದ್ರಕಾಂತ ಪೋಲೀಸ ವಂದಿಸಿದರು.
