ಮಹಾಲಿಂಗಪುರ: ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯವನ್ನು ಕಾಪಾಡುವಲ್ಲಿ ಹಗಲಿರುಳು ಶ್ರಮಿಸುವ ಪೌರ ಕಾರ್ಮಿಕರ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ ೨೩ನೇ ರಾಜ್ಯ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಸ್ಥಳೀಯ ಪುರಸಭೆ ವತಿಯಿಂದ ಪೌರ ಕಾರ್ಮಿಕರಿಗೆ ಅದ್ದೂರಿ ಸನ್ಮಾನ ಕಾರ್ಯಕ್ರಮ ಬುಧವಾರ ಪುರಸಭೆಯ ಸಭಾಭವನದಲ್ಲಿ ನಡೆಯಿತು.
ಬೆಳಗಿನ ಜಾವ ನಗರವಾಸಿಗಳು ಎಚ್ಚರಗೊಳ್ಳುವ ಮುನ್ನವೇ ಕೈಯಲ್ಲಿ ಪೊರಕೆ ಹಿಡಿದು ನಗರದ ಬೀದಿಗಿಳಿಯುವ ಪೌರ ಕಾರ್ಮಿಕರು, ಸ್ವಚ್ಛತೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. ಅವರ ಪರಿಶ್ರಮದಿಂದಲೇ ಸ್ವಚ್ಛ ಹಾಗೂ ಆರೋಗ್ಯಕರ ನಗರ ನಿರ್ಮಾಣ ಸಾಧ್ಯವಾಗುತ್ತಿದೆ. ಇಂತಹ ಶ್ರಮಜೀವಿಗಳನ್ನು ಗೌರವಿಸುವುದು ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ನಿರಂತರವಾಗಿ ನಡೆಯಬೇಕು ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ ಮಣ್ಣಯ್ಯನ್ನವರಮಠ, ಪೌರ ಕಾರ್ಮಿಕರು ಸಮಾಜದ ನಿಜವಾದ ಕರ್ಮಯೋಗಿಗಳು. ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ನಗರದ ಸ್ವಚ್ಛತೆಗಾಗಿ ದುಡಿಯುವ ಅವರ ಸೇವೆ ಅತ್ಯಂತ ಶ್ರೇ?ವಾದದ್ದು. ನಾವು ಸ್ವಚ್ಛ ರಸ್ತೆಯಲ್ಲಿ ನಡೆಯುತ್ತೇವೆ, ಸ್ವಚ್ಛ ಪರಿಸರದಲ್ಲಿ ಉಸಿರಾಡುತ್ತೇವೆ ಎಂದರೆ ಅದರ ಹಿಂದೆ ಪೌರ ಕಾರ್ಮಿಕರ ಬೆವರು ಮತ್ತು ಪರಿಶ್ರಮವಿದೆ. ಆದ್ದರಿಂದ ಅವರನ್ನು ಕೇವಲ ಕಾರ್ಮಿಕರೆಂದು ನೋಡದೆ, ನಗರದ ಸ್ವಚ್ಛತೆಯ ಕಾವಲುಗಾರರೆಂದು ಗೌರವಿಸಬೇಕು ಎಂದರು.
ಪೌರ ಕಾರ್ಮಿಕರ ಪರಿಶ್ರಮಕ್ಕೆ ಸಮಾಜದಿಂದ ಗೌರವ, ಪ್ರೀತಿ ಹಾಗೂ ಆತ್ಮೀಯತೆ ದೊರೆಯಬೇಕು. ಅವರ ಕುಟುಂಬಗಳ ಬಗ್ಗೆಯೂ ಕಾಳಜಿ ವಹಿಸುವ ಮನೋಭಾವ ಸಮಾಜದಲ್ಲಿ ಬೆಳೆಯಬೇಕು. ಪೌರ ಕಾರ್ಮಿಕರನ್ನು ನಿರಂತರವಾಗಿ ಗೌರವಿಸಿ ಸತ್ಕರಿಸುವ ಕಾರ್ಯ ನಡೆಯಬೇಕು ಎಂದು ಅವರು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುರಸಭೆ ವ್ಯವಸ್ಥಾಪಕ ಶಂಕರಗೌಡ ಪಾಟೀಲ ಮಾತನಾಡಿ, ನಗರದ ಸ್ವಚ್ಛತೆ ಎಂಬುದು ಕೇವಲ ಪುರಸಭೆಯ ಜವಾಬ್ದಾರಿಯಲ್ಲ; ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಆದರೆ ಈ ಜವಾಬ್ದಾರಿಯನ್ನು ಪ್ರತಿದಿನ ತಮ್ಮ ಕರ್ತವ್ಯದ ಮೂಲಕ ನಿಭಾಯಿಸುತ್ತಿರುವವರು ನಮ್ಮ ಪೌರ ಕಾರ್ಮಿಕರು. ಮಳೆ, ಬಿಸಿಲು, ಚಳಿ ಯಾವುದನ್ನೂ ಲೆಕ್ಕಿಸದೆ ನಗರದ ಸ್ವಚ್ಛತೆಗಾಗಿ ಅವರು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾಗಿದೆ ಎಂದರು.
ಪೌರ ಕಾರ್ಮಿಕರ ಪರಿಶ್ರಮಕ್ಕೆ ತಕ್ಕ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯ. ನಗರದ ಸ್ವಚ್ಛತೆಯ ಹಿಂದೆ ಅವರ ಬೆವರಿನ ಶ್ರಮವಿದೆ. ಹೀಗಾಗಿ ಪೌರ ಕಾರ್ಮಿಕರನ್ನು ಗೌರವಿಸುವುದು ಎಂದರೆ ಅವರ ಸೇವೆಯನ್ನ? ಅಲ್ಲ, ಸ್ವಚ್ಛತೆಯ ಮಹತ್ವವನ್ನೂ ಗೌರವಿಸಿದಂತಾಗುತ್ತದೆ. ಪುರಸಭೆಯ ವತಿಯಿಂದ ಪೌರ ಕಾರ್ಮಿಕರೊಂದಿಗೆ ಸದಾ ಆತ್ಮೀಯವಾಗಿ ನಡೆದುಕೊಂಡು, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗುವುದು ಎಂದು ಶಂಕರಗೌಡ ಪಾಟೀಲ ಹೇಳಿದರು.
ಮುಖ್ಯ ಅತಿಥಿಗಳಾಗಿ ಸರ್ಕಾರಿ ವೈದ್ಯಾಧಿಕಾರಿ ಡಾ. ಸಿ.ಎಂ. ವಜ್ಜರಮಟ್ಟಿ ಹಾಗೂ ಪುರಸಭೆ ನೌಕರರ ಸಂಘದ ಅಧ್ಯಕ್ಷ ಮಾರುತಿ ದಳವಾಯಿ ಭಾಗವಹಿಸಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಎಂ.ಡಿ. ಮಹಾಲಿಂಗ ಪ್ರಾರ್ಥಿಸಿದರು. ಬಳಿಕ ಪೌರ ಕಾರ್ಮಿಕರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭೆ ಸಿಬ್ಬಂದಿಗಳಾದ ಎಂ.ಎಂ ಮುಗಳಖೋಡ, ಪಿ.ವೈ. ಸೊನ್ನದ, ಕಿರಿಯ ಅಭಿಯಂತರ ಸುನೀಲ ಬಬಲೇಶ್ವರ ಮೆಹಬೂಬ್ ಜಾನ್, ಮನೋಜ ಹಂಚಾಟಿ, ರಾಜು ಹೂಗಾರ, ಅರುಣ ಸಣ್ಣಕ್ಕಿ,ಮೋದಿನಸಾಬ ಮುಲ್ಲಾ, ಪಿ.ಡಿ. ನಾಗನೂರ, ಬಸವರಾಜ ಬಳಿಗಾರ, ಬಿ.ಎಸ್. ಚೌಧರಿ, ಮಲ್ಲಿಕ ಅಂಬಿ, ಕಾಂತು ಹಡಪದ, ಚಂದ್ರು ಚಿತ್ತರಗಿ ಈರಣ್ಣ ಕೊಪ್ಪದ, ಹಣಮಂತ ಮಾಂಗ,ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.ಸಿ.ಎಂ. ಮಠಪತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
೨೩ ಒಐP ೦೧ ಫೋಟೋ