LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bagalkot

ಹುನ್ನೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 215.69ಲಕ್ಷ ನಿವ್ವಳ ಲಾಭ 

 


ಜಮಖಂಡಿ ಸೆ. 23- ಪ್ರಥಮವಾಗಿ ಸಂಘವು ದಿನಾಂಕ 29-03-1949ರಲ್ಲಿ ಪ್ರಾರಂಭವಾಯಿತು. ವಿವಿಧ ಆಯಾಮಗಳಲ್ಲಿ ಪರಿವರ್ತನೆ ಗೊಂಡು ದಿನಾಂಕ 02-03-1995ರಂದು ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಆಶೀರ್ವಾದ ಮತ್ತು ಅವರ ಅಮೃತ ಹಸ್ತದಿಂದ ಉದ್ಘಾಟನೆ ಗೊಂಡಿತು.ನಂತರ ಸಂಘವು ಯಾವದೇ ಅಡೆತಡೆ ಇಲ್ಲದೆ ವರ್ಷದಿಂದ ವರ್ಷಕ್ಕೆ ಪ್ರಗತಿಪತದತ್ತ ಸಾಗುವಮೂಲಕ ನಿರೀಕ್ಷೆಗೂ ಮೀರಿ ಆದಾಯ ಮತ್ತು ಅಭಿವೃದ್ಧಿ ಹೊಂದಿ ಪ್ರತಿಷ್ಠಿತ ಸಹಕಾರಿ ಸಂಘಗಳ ಸಾಲಿನಲ್ಲಿ ಬೆಳೆದು ನಿಂತಿದೆ. 
 ದಿನಾಂಕ 22-9-2026ರಂದು ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ ಸಂಘದ ಅಧ್ಯಕ್ಷ ಶ್ರೀ ಭೀಮಪ್ಪ ಸಿ. ಕರಿಗಾರ ಅವರ ಅಧ್ಯಕ್ಸತೆಯಲ್ಲಿ ಜರುಗಿತು.ಸನ್ 2025-26ನೇ ಸಾಲಿನ ಲಾಭ ಹಾನಿ ಮತ್ತು 2026-27ನೇ ಮುಂಗಡ ಬಜಟ್ ಮಂಡಿಸಿ ಸಭೆಯಲ್ಲಿ ಮುಂಜೂರಾತಿ ಪಡೆದುಕೊಳ್ಳಲಾಯಿತು.
 ನಂತರ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸನ್ 2025-26ನೇ ಸಾಲಿನಲ್ಲಿ ಸಂಘವು 6127ಮೆಂಬರ್ ಸದಸ್ಯರನ್ನು ಹೊಂದಿದ್ದು 250.15ಲಕ್ಷ ಶೇರುಸಂದಾಯವಾಗಿದೆ. 1049.03ಲಕ್ಷ ಒಟ್ಟು ನಿಧಿಗಳನ್ನು ಹೊಂದಿದ್ದು 6582.68ಲಕ್ಷ ಒಟ್ಟು ಠೇವಣಿಗಳನ್ನು ಪಡೆದುಕೊಂಡಿದೆ.748.18ಲಕ್ಷ ಒಟ್ಟು ಪಡೆದಸಾಲಗಳ ಬಾಕಿ ಇದ್ದು 8642.29ಲಕ್ಷ ದುಡಿಯುವ ಬಂಡವಾಳ ಹೊಂದಿದೆ.2936.29ಲಕ್ಷ ಒಟ್ಟು ಬರತಕ್ಕ ಸಾಲಗಳ ಬಾಕಿ ಇದ್ದು 2676.87ಲಕ್ಷ ರೂಗಳನ್ನು 2025-26ನೇ ಸಾಲಿನಲ್ಲಿ ಸಾಲ ವಿತರಿಸಲಾಗಿದೆ. 819.35ಲಕ್ಷ ಕೃಷಿ ಸಾಲಗಳನ್ನುವಿತರಿಸಲಾಗಿದ್ದು 1857.52ಲಕ್ಷ ಕೃಷಿಯೇತರ ಸಾಲಗಳನ್ನು ವಿತರಿಸಲಾಗಿದೆ. 5747.17ಲಕ್ಷ ಹೂಡಿಕೆ ಮಾಡಲಾಗಿದ್ದು 103.48ಲಕ್ಷ ಸಾಲೆತರ ವ್ಯವಹಾರ ಮಾಡಲಾಗಿದೆ.
 ಈ ವರ್ಷ ಅಂದರೆ 2025-26ನೇ ಸಾಲಿನಲ್ಲಿ ನಮ್ಮಸಂಘವು 215.69ಲಕ್ಷ.ರೂಗಳ ನಿವ್ವಳ ಲಾಭವನ್ನು ಪಡೆದುಕೊಂಡು ಪ್ರತಿಷ್ಠಿತ ಸಹಕಾರಿ ಸಂಘಗಳ ಸಾಲಿನಲ್ಲಿ ಬೆಳೆದು ನಿಂತಿರುವದು ತುಂಬಾ ಖುಷಿ. ವಿಷಯವಾಗಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಾಹಕ ಶ್ರೀ ಎಲ್ ಎನ್ ತೇಲಿ ಸಭೆಗೆ ತಿಳಿಸಿದರು. 
    ಸಭೆಯಲ್ಲಿ ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಸಂಘದ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಕ್ಟೋಬರ್ 23 ರಂದು ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ"ಸಾಧಕ ಶಿಕ್ಷಕರ ಸಾಧನೆ ಉಳಿದವರಿಗೆ ಪ್ರೇರಣೆಯಾಗಲಿ" : ಉಮೇಶ ಬೆಳಕೂಡಬ್ಯಾಂಕ್ ಅಭಿವೃದ್ಧಿಗೆ ಸಹಕಾರ ಅಗತ್ಯ: ರಾಮಲಿಂಗಯ್ಯಶ್ರೀಸಂಕೇಶ್ವರ: ನವೆಂಬರ್ 1ರೊಳಗೆ ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆಗೆ ಗಡುವು; ಕನ್ನಡಪರ ಸಂಘಟನೆಗಳ ಎಚ್ಚರಿಕೆ ಕಾರ್ಯನಿರತ ಪತ್ರಕರ್ತರ ಸಂಘದಿಂದ  ಪೌರಕಾರ್ಮಿಕರಿಗೆ ಸನ್ಮಾನ  ಕಾಗವಾಡ ತಾಲೂಕು ಬರಪೀಡಿತ ಘೋಷಣೆ: ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ರೈತರು ಹಾಗೂ ಬಿಜೆಪಿ ಕಾರ್ಯಕರ್ತರುಧನಲಕ್ಷ್ಮಿ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಸಾಮರ್ಥ್ಯ 7,500 ಮೆಟ್ರಿಕ್ ಟನ್‌ಗೆ ಹೆಚ್ಚಳ: ಮಹಾದೇವಪ್ಪ ಯಾದವಾಡಬೀಳಗಿಯಲ್ಲಿ ವಿಜೃಂಭಣೆಯ ಪೌರಕಾರ್ಮಿಕ ದಿನಾಚರಣೆ: ನೈರ್ಮಲ್ಯ ಸೇವಕರಿಗೆ ಗೌರವ ಸನ್ಮಾನಬಾಗಲಕೋಟೆಯಲ್ಲಿ ಬಲಗೈ ಸಮುದಾಯಗಳ ಒಕ್ಕೂಟದ ಸಭೆ: ಸಮುದಾಯದ ಹಿತಾಸಕ್ತಿಗೆ ಮುಖಂಡರ ಒಕ್ಕೊರಲ ಆಗ್ರಹಒಂದೇ ಪ್ಯಾಕೇಜ್‌ನಲ್ಲಿ ಕಾಮಗಾರಿಗಳ ಟೆಂಡರ್ ಕರೆಯದಂತೆ ಗುತ್ತಿಗೆದಾರರ ಮನವಿ.