ರನ್ನ ಬೆಳಗಲಿ: ಅ. ೧೦: ಸಮಾಜದ ಓರೆಕೋರೆಗಳನ್ನು ತಿದ್ದಿ, ತಪ್ಪುಗಳನ್ನು ಎತ್ತಿತೋರಿಸಿ, ಜನರಲ್ಲಿ ಜಾಗೃತಿ ಮೂಡಿಸುವ ಶಕ್ತಿ ಪತ್ರಿಕಾ ಮಾಧ್ಯಮಕ್ಕಿದೆ. ಈ ನಿಟ್ಟಿನಲ್ಲಿ ನಿಸ್ವಾರ್ಥವಾಗಿ ಕಾರ್ಯನಿರ್ವಹಿಸುವ ಪತ್ರಕರ್ತರು ನಿಜಕ್ಕೂ ಶ್ರೇ?ರು. ಅಂತಹ ಪತ್ರಕರ್ತರನ್ನು ಸಮಾಜ ಗೌರವಿಸಿ ಪ್ರೋತ್ಸಾಹಿಸಬೇಕು ಎಂದು ಜಿಲ್ಲಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಧರೆಪ್ಪ ಸಾಂಗ್ಲೀಕರ ಹೇಳಿದರು.
ಪಟ್ಟಣದ ಹಿರಿಯ ಪತ್ರಕರ್ತ ಕೆ. ಬಿ. ಕುಂಬಾಳಿ ಅವರು ದಿನಪತ್ರಿಕೆಯ ವರದಿಗಾರರಾಗಿ ನಿಯುಕ್ತಿಗೊಂಡ ಹಿನ್ನೆಲೆಯಲ್ಲಿ, ಶನಿವಾರ ಪಟ್ಟಣದ ಬಂದಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಸಾಂಕೇತಿಕ ಪತ್ರಿಕೆ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪತ್ರಿಕಾ ರಂಗವು ತನ್ನ ವೃತ್ತಿಪರ ಶುದ್ಧತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಂಡರೆ ದೇಶದಲ್ಲಿನ ಭ್ರ?ಚಾರವನ್ನು ತೊಲಗಿಸಲು ಮಹತ್ವದ ಕೊಡುಗೆ ನೀಡಬಹುದು. ಆದರೆ ಪತ್ರಕರ್ತರು ಹಣದ ಆಮಿ?ಕ್ಕೆ ಒಳಗಾಗಿ ಬ್ಲ್ಯಾಕ್‌ಮೇಲ್‌ನಂತಹ ಪ್ರವೃತ್ತಿಗಳಿಗೆ ಬಲಿಯಾದರೆ ಪತ್ರಿಕಾ ರಂಗದ ಘನತೆಗೆ ಧಕ್ಕೆಯಾಗುತ್ತದೆ. ಆದ್ದರಿಂದ ಪತ್ರಕರ್ತರು ತಮ್ಮ ವೃತ್ತಿಯಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ನೈತಿಕ ಮೌಲ್ಯಗಳನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದರು.
ಪತ್ರಿಕಾ ರಂಗವು ಕೇವಲ ಲಾಭ ಗಳಿಸುವ ಕ್ಷೇತ್ರವಲ್ಲ; ಅದು ದೇಶ ಮತ್ತು ಸಮಾಜದ ಸೇವೆಗೆ ಮೀಸಲಾದ ಮಹತ್ವದ ವಲಯವಾಗಿದೆ. ಹೀಗಾಗಿ ಆರ್ಥಿಕವಾಗಿ ಸಬಲರಾಗಿರುವ ನಾಗರಿಕರು ಹಬ್ಬ-ಹರಿದಿನ, ಹುಟ್ಟುಹಬ್ಬ ಸೇರಿದಂತೆ ವಿವಿಧ ಶುಭ ಸಂದರ್ಭಗಳಲ್ಲಿ ಪತ್ರಿಕೆಗಳಿಗೆ ಜಾಹೀರಾತು ನೀಡುವ ಮೂಲಕ ಪತ್ರಿಕಾ ರಂಗದ ಬೆಳವಣಿಗೆಗೆ ಸಹಕರಿಸಬೇಕು. ಇದರಿಂದ ಪತ್ರಿಕೆಗಳು ಅಭಿವೃದ್ಧಿ ಹೊಂದುವುದರ ಜೊತೆಗೆ ಸಮಾಜಮುಖಿ ಪತ್ರಿಕೋದ್ಯಮಕ್ಕೂ ಪ್ರೋತ್ಸಾಹ ದೊರೆಯುತ್ತದೆ ಎಂದು ಹೇಳಿ, ನೂತನ ವರದಿಗಾರರಿಗೆ ಶುಭ ಹಾರೈಸಿದರು.
ಬಿವಿವಿಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಂಡಿತ ಪೂಜಾರಿ ಹಾಗೂ ಪತ್ರಕರ್ತ ಮಹಾದೇವ ಕುಲಗೂಡ ಮಾತನಾಡಿ, ಸಮಾಜದಲ್ಲಿ ಶಾಂತಿ, ನೆಮ್ಮದಿ ಮತ್ತು ಜಾಗೃತಿ ಮೂಡಿಸುವಲ್ಲಿ ಪತ್ರಕರ್ತರ ವಸ್ತುನಿ? ವರದಿಗಳು ಮಹತ್ವದ ಪಾತ್ರ ವಹಿಸುತ್ತವೆ. ಪತ್ರಕರ್ತರು ಸತ್ಯನಿ?ಯಿಂದ ತಮ್ಮ ಕರ್ತವ್ಯ ನಿರ್ವಹಿಸಿದರೆ ದೇಶದ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗುತ್ತದೆ. ಉತ್ತಮ ವರದಿಗಳನ್ನು ನೀಡುವ ಪತ್ರಕರ್ತರನ್ನು ಸಾರ್ವಜನಿಕರು ಪ್ರೋತ್ಸಾಹಿಸಿ ಬೆಂಬಲಿಸಿದಾಗ ಸಮಾಜದಲ್ಲಿ ಇನ್ನ? ಪಾರದರ್ಶಕತೆ ಮೂಡಲು ಸಾಧ್ಯವಾಗುತ್ತದೆ ಎಂದರು.
ಪಟ್ಟಣದ ಯೋಗಿರಾಜೇಂದ್ರ ಸದಾಶಿವ ಗುರೂಜಿ ಅವರು ದಿನಪತ್ರಿಕೆಯನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಪತ್ರಿಕೆಯು ಉತ್ತರೋತ್ತರವಾಗಿ ಅಭಿವೃದ್ಧಿ ಹೊಂದಿ, ಜನರ ವಿಶ್ವಾಸ ಗಳಿಸಿ, ಸಮಾಜದ ಏಳ್ಗೆಗೆ ಇನ್ನ? ಕೊಡುಗೆ ನೀಡಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಪಟ್ಟಣದ ಹಿರಿಯರಾದ ಚಿಕ್ಕಪ್ಪ ನಾಯಕ, ಪ್ರವೀಣ ಪಾಟೀಲ, ಲಕ್ಕಪ್ಪ ಹಾರೂಗೇರಿ, ಸಂಗನಗೌಡ ಪಾಟೀಲ, ಕೆ. ಎ. ಧಡೂತಿ, ಮಹಾಲಿಂಗಪ್ಪ ಹೊಸಪೇಟಿ, ಆನಂದ ಪಾಟೀಲ, ಸಂಗಪ್ಪ ಅಮಾತಿ, ಪ್ರಕಾಶ ಕೊಣ್ಣೂರ, ಲಕ್ಷ್ಮಣ ಶಿರೋಳ, ಮಹಾಲಿಂಗಪ್ಪ ಕೊಣ್ಣೂರ, ಮುರಗೇಶ ಗಾಡವಿ,ಪರಶುರಾಮ ನಾಯಕ,ಎಸ್. ಬಿ. ರಡರಟ್ಟಿ, ಸತ್ಯಪ್ಪ ಸಿದ್ದಾಪುರ, ಹರಳಯ್ಯ ಮಲಾವಡಿ, ಯಮನಪ್ಪ ದೊಡಮನಿ,ಪತ್ರಕರ್ತ ಮೀರಾಸಾಬ್ ತಟಗಾರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪತ್ರಕರ್ತ ಹಾಗೂ ಯೋಗ ಗುರು ರಾಘವೇಂದ್ರ ನೀಲಣ್ಣವರ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಪತ್ರಕರ್ತ ಕೆ. ಬಿ. ಕುಂಬಾಳಿ ಸ್ವಾಗತಿಸಿ, ವಂದಿಸಿದರು.