ಬಳ್ಳಾರಿ, ಏ.18.: ವಿಜಯನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ವಿಜಯನಗರ ಜಿಲ್ಲಾ ಘಟಕ ಹಾಗೂ ನ್ಯಾಷನಲ್ ಬಿಎಡ್ ಕಾಲೇಜ್ ಹೊಸಪೇಟೆ ಸಹಯೋಗದೊಂದಿಗೆ ಆಯೋಜಿಸಿದ್ದ 893ನೇ ಬಸವ ಜಯಂತಿ ಪ್ರಯುಕ್ತ ವಿಜಯನಗರ ಜಿಲ್ಲೆಯ ಹೊಸಪೇಟೆಯ ನ್ಯಾಷನಲ್ ಬಿಎಡ್ ಕಾಲೇಜ್ ಕಾಲೇಜು ವಿದ್ಯಾರ್ಥಿಗಳಿಗೆ ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಶರಣ ಚಿಂತಕರು ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಕೆ. ರವೀಂದ್ರನಾಥ ಅವರು 12ನೇ ಶತಮಾನದಲ್ಲಿ ಬಸವಾದಿ ಶರಣರು ಪ್ರತಿಪಾದಿಸಿದ ತತ್ವ ಸಿದ್ಧಾಂತಗಳು ಸಂವಿಧಾನದ ಆಶಯಗಳಾಗಿವೆ, ಇಂದಿನ ಸಂವಿಧಾನದ ಪೂರ್ವ ಪೀಠಿಕೆಯಲ್ಲಿರುವ ಸ್ವಾತಂತ್ರ, ಸಮಾನತೆ, ಭ್ರಾತೃತ್ವ, ನ್ಯಾಯ, ಈ ಅಂಶಗಳನ್ನು ಬಸವಾದಿ ಶರಣರು 12ನೇ ಶತಮಾನದಲ್ಲಿ ಪ್ರತಿಪಾದಿಸಿ ಸಮ ಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸಿದ್ದರು, ಆದ್ದರಿಂದ ಅವರುಗಳು ಪ್ರತಿಪಾದಿಸಿದ ತತ್ವ ಸಿದ್ಧಾಂತಗಳು ಕನ್ನಡದ ಅಸ್ಮಿತೆಯಾಗಿದ್ದು ಈ ಸಿದ್ಧಾಂತಗಳು ಸರ್ವಕಾಲಕ್ಕೂ ಶ್ರೇಷ್ಠವಾಗಿದ್ದು ವಿದ್ಯಾರ್ಥಿಗಳು ಈ ತತ್ವಗಳನ್ನು ಅನುಸರಿಸುವುದರ ಮೂಲಕ ಸಮಾಜವನ್ನು ಪರಿವರ್ತನೆಗೊಳಿಸಬೇಕು ಎಂದು ಅಭಿಪ್ರಾಯಪಟ್ಟರು. ಪ್ರಾಸ್ತಾವಿಕ ನುಡಿಗಳನ್ನು ನುಡಿದ ಜಗತಿಕ ಲಿಂಗಾಯತ ಮಹಾಸಭಾ ವಿಜಯನಗರ ಜಿಲ್ಲಾ ಘಟಕದ ಕಾರ್ಯದರ್ಶಿ ಅಕ್ಕಿ ಮಲ್ಲಿಕಾರ್ಜುನ ಅವರು ಪ್ರಸ್ತುತ ಕರ್ನಾಟಕದ ಅನೇಕ ಸಾಂಸ್ಕೃತಿಕ ನಾಯಕರ ಜಯಂತಿಗಳು ಆ ಸಮುದಾಯದ ಜನರಿಗೆ ಮಾತ್ರ ಸೀಮಿತವಾಗಿವೆ, ಆಚರಣೆ ಮಾಡಿಕೊಳ್ಳುತ್ತಿರುವುದು ದುರಂತವಾಗಿದೆ, ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಯಾಕೆ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ, ಆ ಬಸವಾದಿ ಶರಣ ಶರಣೇಯರು ಯಾವ ತತ್ವ ಸಿದ್ಧಾಂತಗಳ ವಿರುದ್ಧ ಹೋರಾಡಿದರೂ, ಯಾರಿಗಾಗಿ ಹೋರಾಡಿದರೂ, ಯಾಕಾಗಿ ಹೋರಾಡಿದರೂ, ಎನ್ನುವ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಂಡು ಈ ರಾಷ್ಟ್ರದ ಭವಿಷ್ಯತ್ತಿನ ಪ್ರಜೆಗಳಾದ ವಿದ್ಯಾರ್ಥಿಗಳು ಸಾಂಸ್ಕೃತಿಕ ನಾಯಕರ ವಿಚಾರಧಾರೆಗಳನ್ನು ತಿಳಿದು ಸಮ ಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸಬೇಕಾಗಿದೆ, ಹಾಗಾಗಿ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಅನುಕೂಲಕರವಾಗಲಿ ಎನ್ನುವ ಕಾರಣಕ್ಕಾಗಿ ಈ ಕಾರ್ಯಕ್ರಮವನ್ನು ಪದವಿ ಕಾಲೇಜುಗಳಲ್ಲಿ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಜಾಗತಿಕ ಲಿಂಗಾಯತ ಲಿಂಗಾಯತ ಮಹಾಸಭಾ ವಿಜಯನಗರ ಜಿಲ್ಲಾ ಘಟಕ ಅಧ್ಯಕ್ಷರಾದ ಎಸ್ ಬಸವರಾಜ್ ಮಾವಿನಹಳ್ಳಿ ಅವರು ಕಾರ್ಯಕ್ರಮ ಉದ್ಘಾಟಿಸಿದರು, ಅಧ್ಯಕ್ಷತೆಯನ್ನು ವಿನಾಯಕ ಎಜುಕೇಶನ್ ಸೊಸೈಟಿ. ಅಧ್ಯಕ್ಷರಾದ ಶ್ರೀ ಜಾಲಿ ಬಸವರಾಜ, ವಹಿಸಿಕೊಂಡು ಅಧ್ಯಕ್ಷ ನುಡಿಗಳನ್ನು ನುಡಿದ ಅವರು ಬಸವಣ್ಣ ತತ್ವಗಳು ಕೇವಲ ಯಾವುದೇ ಒಂದು ಜನಾಂಗಕ್ಕೆ, ಯಾವುದೇ ಒಂದು ಸಮುದಾಯಕ್ಕೆ, ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ, ಬಸವಣ್ಣನವರ ತತ್ವಗಳು ಜಾಗತಿಕ ಮನ್ನಣೆಯನ್ನ ಗಳಿಸಿವೆ ಎಂದು ಅಭಿಪ್ರಾಯಪಟ್ಟರು, ಈ ಕಾರ್ಯಕ್ರಮದಲ್ಲಿ ಬಿಎಡ್ ಕಾಲೇಜು ಪ್ರಾಂಶುಪಾಲರಾದ ಡಾ. ಆಯೂಬ್ ಖಾನ್ , ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಡಾ. ಬಿ. ಸತೀಶ್‍ಗೌಡ, ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಸದಸ್ಯರಾದ ಕೆ.ಬಿ. ಪೊಲೀಸ್ ಪಾಟೀಲ್ ಜೆ. ಬಸವನಗೌಡ, ಶರಣೆ ಸೌಭಾಗ್ಯಲಕ್ಷ್ಮಿ, ಇತರರು ಉಪಸ್ಥಿತರಿದ್ದರು.


