ಬಳ್ಳಾರಿ, ಏ.18.: ರಾಘವ ಕಲಾಮಂದಿರದಲ್ಲಿ, ರಾಘವ ಮೆಮೋರಿಯಲ್ ಅಸೋಸಿಯೇಷನ್, ವತಿಯಿಂದ ಹಮ್ಮಿಕೊಂಡಿದ್ದ ಬಳ್ಳಾರಿ ರಾಘವರ 80ನೇ ವಾರ್ಷಿಕ
ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಸಂಸ್ಥೆಯ ಪದಾಧಿಕಾರಿಗಳು ಜ್ಯೋತಿ ಬೆಳಗಿಸಿ, ಪುಷ್ಪಾಂಜಲಿ ಸಮರ್ಪಣೆ ಅರ್ಪಿಸುವ ಮೂಲಕ ಪುಣ್ಯಸ್ಮರಣೆ ಕಾರ್ಯಕ್ರಮ ಆಚರಿಸಲಾಯಿತು.ಬಳ್ಳಾರಿ ರಾಘವರ ಬಗ್ಗೆ ನಿವೃತ್ತ ಉಪನ್ಯಾಸಕರೂ ಸಂಸ್ಥೆಯ ಕಾರ್ಯಕಾರಿಣಿ ಸದಸ್ಯರೂ ಆಗಿರುವ ಏನ್.ಬಸವರಾಜು ರವರು ಮಾತನಾಡುತ್ತಾ ರಾಫವರು ಬಾಲ್ಯ ಶಿಕ್ಷಣ ನಾಟಕ ಕಲೆಗೆ ಕೊಟ್ಟ ಕೊಡುಗೆಗಳು ಸ್ಮರಿಸುತ್ತ ನಾಟಕರಂಗದಲ್ಲಿ ಹಿಮ್ಮೇಳ ಹಿಮ್ಮೇಳವಾಗಿಯೇ ಹಾಗೂ ಸ್ತ್ರೀಯರ ಪಾತ್ರಗಳನ್ನು ಸ್ತ್ರೀಯರೆ ಅಭಿನಯಸಬೇಕು. ನಾಟಕಗಳು ಸಮಾಜದಲ್ಲಿ ಬದಲಾವಣೆ
ತರುವಂತೆರಬೇಕೆಂದು ರಾಘವರವರು ಪ್ರತಿಪಾದಿಸಿದರು. ಖ್ಯಾತ ವಕೀಲರಾಗಿದ್ದು ಕೊಂಡೆ ನಾಟಕರಂಗದ್ದಲೂ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಇಂಗ್ಲೀಷ್ ಐದು ಭಾಷೆಗಳಲ್ಲಿ ನಾಟಕಗಳು ಪ್ರದರ್ಶಿಸಿದರು. ಮಹಾತ್ಮಾ ಗಾಂಧಿ, ಸರೋಜನಿ ನಾಯ್ಡು, ಹಾಗೂ ವಿಶ್ವಕವಿ ರವೀಂದ್ರನಾಥ್ ಠಾಗೋರ್ ಮುಂತಾದವರು ರಾಘವರ ನಾಟಕಗಳು ನೋಡಿ ಮೆಚ್ಚಗೆ ಪಡೆದುಕೊಂಡರು ಇಂತಹ ವಿಶ್ವವಿಖ್ಯಾತ ನಟ ಬಳ್ಳಾರಿ ರಾಘವ ರವರ ಹೆಸರಿನಲ್ಲಿ ಕರ್ನಾಟಕ ಸರ್ಕಾರ ಪ್ರಶಸ್ತಿ ನೀಡಬೇಕೆಂದು ಆಗ್ರಹಿಸಿದರು. ಕಾರ್ಯಕ್ರಮ ನಿರ್ವಹಣೆಯನ್ನು ಗೌರವ ಕಾರ್ಯದರ್ಶಿಗಳಾದ ಎನ್.ಪ್ರಕಾಶ್,ರವರು ನಿರ್ವಹಿಸಿದರು. ಪ್ರಾರ್ಥನೆ ಶ್ರೀಮತಿ ಕೋಲಾಚಲಂ ಸಂದ್ಯಾ ಹಾಗೂ ವಂದನರ್ಪಣೆ ಪಿ ಎಂ ನಟರಾಜ್ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಕೆ ಚನ್ನಪ್ಪ, ಅಧ್ಯಕ್ಷರಾದ ಕೆ ಕೊಟೆಶ್ವರ ರಾವ್,ಉಪಾಧ್ಯಕ್ಷ ರಾದ ಹೆಚ್ ವಿಷ್ಣುವರ್ಧನ್ ರೆಡ್ಡಿ, ಬಾಣಾಪುರ ರಮೇಶ ಗೌಡ, ಚೆಲ್ಲಾ ಅಮರೇಂದ್ರ ನಾಥ ಚೌದರಿ, ಜಿ ಆರ್ ವೆಂಕಟೇಶಲು, ಕೆ ಪೊಂಪನಗೌಡ, ಬಿ.ಎಂ ಬಸವರಾಜ,ಸುರೇಂದ್ರ ಬಾಬು, ಪಿ.ಶ್ರೀನಿವಾಸಲು, ಕೃಷ್ಣ,ಶೇಷ ರೆಡ್ಡಿ, ರಮಣಪ್ಪ ಭಜಂತ್ರಿ ಹಾಗೂ ಕಲಾವಿದರು ಭಾಗವಹಿಸಿದ್ದರು.ನಂತರ ರಂಗಲೋಕ
ಗ್ರಾಮೀಣಾಭಿವೃದ್ಧಿ ಸಂಸ್ಥೆ, ಮಸಾರಿ ನೆಲ್ಕುದುರಿ ತಂಡದಿಂದ ಹಾಗೂ ಬಿ.ಎಂ. ಪ್ರಭು, ಮರಿಯಮ್ಮನಹಳ್ಳಿ ಅವರ ರಚನೆ- ನಿರ್ದೇಶನದಲ್ಲಿ *ರೈತರ ಧ್ವನಿ* ಕನ್ನಡ ನಾಟಕ ಅದ್ಭುತವಾಗಿ ಪ್ರದರ್ಶನಗೊಂಡು ಪ್ರೇಕ್ಷಕರ ಮನಸೂರೆ ಗೊಂಡಿತು.


