ಬಳ್ಳಾರಿ, ಏ.15..: ನಗರದ ಪ್ರತಿಷ್ಠಿತ ವೀ.ವಿ.ಸಂಘದ ವೀರಶೈವ ಮಹಾವಿದ್ಯಾಲಯದ ಹಮ್ಮಿಕೊಂಡಂತ ಡಾ.ಭೀಮರಾವ್ ಅಂಬೇಡ್ಕರ್ ಯವರ 135ನೇ ಜಯಂತಿ ಸರಳವಾಗಿ ಮತ್ತು ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೀರಶೈವ ಕಾಲೇಜಿನ ಪ್ರಾಚಾರ್ಯರಾದ ಜಿ.ಮಲ್ಲನಗೌಡ ಮಾತನಾಡುತ್ತ ಈ ದಿನದಂದು, ದೇಶದಲ್ಲಿ ಸಮಾನತೆ ಮತ್ತು ನ್ಯಾಯದ ಅಡಿಪಾಯ ಹಾಕಿದ ಅವರ ಕಾರ್ಯವನ್ನು ನಾವು ಗೌರವಿಸುತ್ತೇವೆ. ಅಂಬೇದ್ಕರ್ ಜಯಂತಿಯ ದಿನದಂದು, ಬಾಬಾ ಸಾಹೇಬ್ ಅವರ ಶ್ರೇಷ್ಠ ಮತ್ತು ಸ್ಪೂರ್ತಿದಾಯಕ ಆಲೋಚನೆಗಳನ್ನು ನಿಮ್ಮ ಪ್ರೀತಿಪಾತ್ರ್ರರೊಂದಿಗೆ ಹಂಚಿಕೊಳ್ಳುವ ಮೂಲಕ, ನೀವು ಅವರನ್ನು ಅಂಬೇಡ್ಕರ್ ಜಯಂತಿಯಂದು ಅಭಿನಂದಿಸುವುದಲ್ಲದೆ, ಭಾರತೀಯ ಸಂವಿಧಾನದ ಸೃಷ್ಟಿಕರ್ತನನ್ನು ವಿಶೇಷವಾಗಿ ಸ್ಮರಿಸಿಕೊಳ್ಳಬಹುದು ಎಂದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಕನ್ನಡ ವಿಭಾಗದ ಡಾ.ಶ್ಯಾಮೂರ್ತಿ.ಜಿ ಮಾತನಾಡುತ್ತ ಡಾ.ಭೀಮರಾವ್ ಅಂಬೇಡ್ಕರ್ ಅವರು ಭಾರತೀಯ ಸಂವಿಧಾನದ ಶಿಲ್ಪಿ, ಮಹಾನ್ ಸಮಾಜ ಸುಧಾರಕ ಮತ್ತು ದಲಿತರ ಹಕ್ಕುಗಳ ರಕ್ಷಕ . ಅವರು ತಮ್ಮ ಇಡೀ ಜೀವನವನ್ನು ಜಾತಿವಾದ ತಾರತಮ್ಯ ಮತ್ತು ಸಾಮಾಜಿಕ ಅನ್ಯಾಯದ ವಿರುದ್ದ ಹೋರಾಡುತ್ತಾ ಕಳೆದರು ಮತ್ತು ಸಂವಿಧಾನದಲ್ಲಿ ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳನ್ನು ಒದಗಿಸುವಲ್ಲಿ ಮಹತ್ವದ ಕೊಡೆಗೆಯನ್ನು ನೀಡಿದರು ಎಂದು ತಿಳಿಸಿದರು. ಈ ಕಾರ್ಯಕ್ರಮಕ್ಕೆ ವೀರಶೈವ ಮಹಾವಿದ್ಯಾಲಯದ ಡಾ.ಶರಣಬಸವ , ಡಾ.ಕವಿತ.ಎಂ, ಡಾ.ವಿನೋದ್ ಕುಮಾರ್ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.


