ಪೂಜಾ ಪುಳ್ಯಾಗೋಳ ವಿರಚಿತ ಕಲ್ಪನೆಯ ಕವನಗಳು ಕೃತಿ ಲೋಕಾರ್ಪಣೆ ಪೂಜಾ ತುಂಬಾ ಸಣ್ಣಾಕಿ ಇದ್ದರೂ ಆಕೆಯ ವಿಚಾರ ತುಂಬಾ ದೊಡ್ಡವು : ಸಹಜಾನಂದ ಶ್ರೀಗಳು

MK HasiruKranti
ಪೂಜಾ ಪುಳ್ಯಾಗೋಳ ವಿರಚಿತ ಕಲ್ಪನೆಯ ಕವನಗಳು ಕೃತಿ ಲೋಕಾರ್ಪಣೆ ಪೂಜಾ ತುಂಬಾ ಸಣ್ಣಾಕಿ ಇದ್ದರೂ ಆಕೆಯ ವಿಚಾರ ತುಂಬಾ ದೊಡ್ಡವು : ಸಹಜಾನಂದ ಶ್ರೀಗಳು
WhatsApp Group Join Now
Telegram Group Join Now

 

ಮಹಾಲಿಂಗಪುರ: ಪೂಜಾ ತುಂಬಾ ಸಣ್ಣಾಕಿ ಇದಾಳ ಆದರೆ ಆಕೆಯ ವಿಚಾರ ತುಂಬಾ ದೊಡ್ಡಾವು ಅದಾವು ಎಂದು ಸ್ಥಳೀಯ ಬ್ರಹ್ಮಾನಂದ ಸಿದ್ಧಾರೂಢ ಮಠದ ಸಹಜಾನಂದ ಶ್ರೀಗಳು ಹೇಳಿದರು.
ಕನ್ನಡ ಸಾಹಿತ್ಯ ಪರಿ?ತ್ ಮಹಾಲಿಂಗಪುರ ವಲಯ ಘಟಕ ಹಾಗೂ ಸಿದ್ಧಾರೂಢ ಆಶ್ರಮದ ಸಂಯುಕ್ತಾಶ್ರಯದಲ್ಲಿ ಜರುಗಿದ ಪೂಜಾ ಪುಳ್ಯಾಗೋಳ ವಿರಚಿತ ’ಕಲ್ಪನೆಯ ಕವನಗಳು’ ಎಂಬ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪೂಜಾ ವಯಸ್ಸಿನಲ್ಲಿ ಚಿಕ್ಕವಳಾದರೂ ಅವಳ ವಿಚಾರಗಳು ತುಂಬಾ ದೊಡ್ಡವಿವೆ. ವರ್ಣನೆ, ಕಲ್ಪನೆ, ವಿಚಾರಗಳ ಜೊತೆ ಬದುಕಿನ ಬಗ್ಗೆ ಅತ್ಯಂತ ಕಾಳಜಿ ಮತ್ತು ಜವಾಬ್ದಾರಿಯನ್ನು ವ್ಯಕ್ತಪಡಿಸಿದ್ದಾರೆ, ಬದುಕು ಗಾಜಿನಂತೆ, ಕಲ್ಲಿನ ಮೇಲೆ ಗಾಜು ಬಿದ್ದರು, ಗಾಜಿನ ಮೇಲೆ ಕಲ್ಲು ಬಿದ್ದರೂ ಹಾಳಾಗುವುದು ಬದುಕು ಎಂಬ ಪೂಜಾಳ ಮಾತು ಅಕ್ಷರಶಃ ಸತ್ಯ ಎಂದರು.
ಶಿಕ್ಷಕಿ ಸಪನಾ ಅನಿಗೋಳ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಬೆಳೆದು ಸರ್ಕಾರಿ ಶಾಲೆಗಳಲ್ಲಿ ಕಲಿತು ಇಂದು ಚೊಚ್ಚಲ ಕವನ ಸಂಕಲನದೊಂದಿಗೆ ಸಾಹಿತ್ಯ ಲೋಕಕ್ಕೆ ಪಾದರ್ಪಣೆ ಮಾಡಿದ ಪೂಜಾಳ ಕಾರ್ಯ ಶ್ಲಾಘನೀಯ ಎಂದರು.
ಪತ್ರಕರ್ತ ನಾರನಗೌಡ ಉತ್ತಂಗಿ ಮಾತನಾಡಿ, ಪೂಜಾ ಹಳ್ಳಿಗಾಡಿನಲ್ಲಿ ಬೆಳೆದ ಚಿಕ್ಕ ಹುಡುಗಿಯಾದರೂ ಅವಳು ರಚಿಸಿದ ಸಾಹಿತ್ಯ ಅತ್ಯಂತ ಪ್ರಭುದ್ಧವಾಗಿದ್ದು ಮಹಾನ್ ಕವಿಗಳ ಸಾಲಿನಲ್ಲಿ ನಿಲ್ಲುತ್ತಾಳೆ. ನಿರಾಡಂಬರ ಮತ್ತು ಸರಳ ಶಬ್ದಗಳ ಬಳಕೆಯಿಂದಾಗಿ ಎಲ್ಲ ಕವನಗಳು ಪ್ರತಿಯೊಬ್ಬರ ಹೃದಯವನ್ನು ಮುಟ್ಟುವಲ್ಲಿ ಮತ್ತು ಮೀಟುವಲ್ಲಿ ಯಶಸ್ವಿಯಾಗುತ್ತವೆ. ಇ? ಚಿಕ್ಕ ವಯಸ್ಸಿನಲ್ಲಿ ಸಮಾಜದ ಪ್ರತಿಯೊಂದು ವಿ?ಯದ ಮೇಲೆ ಬೆಳಕು ಚೆಲ್ಲಿರುವುದು ಅವಳ ಅತ್ಯದ್ಭುತ ಪ್ರತಿಭೆಗೆ ಸಾಕ್ಷಿ ಎಂದರು.
ಸಹಜಾನಂದ ಶ್ರೀಗಳು ಗ್ರಂಥ ಲೋಕಾರ್ಪಣೆಗೊಳಿಸಿದರು, ಸಿದ್ಧಾರೂಢರ ಪ್ರವಚನ ಜರುಗಿತು. ಸಿದ್ಧರಾಮಸ್ವಾಮಿ, ಮಹೇಶ ಇಟಕನ್ನವರ, ಕನ್ನಡ ಸಾಹಿತ್ಯ ಪರಿ?ತ್ ವಲಯ ಘಟಕದ ಅಧ್ಯಕ್ಷ ಬಸವರಾಜ ಮೇಟಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಶ್ರೀಶೈಲಪ್ಪ ವಜ್ರಮಟ್ಟಿ, ಹನುಮಂತ ಶಿರೋಳ, ಕವಿಯತ್ರಿ ಪೂಜಾ ಪುಳ್ಯಾಗೋಳ ಅಜ್ಜ ಹನುಮಂತ, ಅಜ್ಜಿ ಮಾನವ್ವ, ತಂದೆ ಮಹಾಲಿಂಗಪ್ಪ, ತಾಯಿ ರೇಣುಕ, ಚಿಕ್ಕಪ್ಪ ಮಲ್ಲಪ್ಪ, ಚಿಕ್ಕಮ್ಮ ಲಕ್ಷ್ಮಿ, ಪಾರವ್ವ, ಬಸಪ್ಪ ಇತರರಿದ್ದರು.
ಬಸವರಾಜ ಮೇಟಿ ಪ್ರಸಾದ್ ವ್ಯವಸ್ಥೆ ಮಾಡಿದ್ದರು.
ಶಿಕ್ಷಕರಾದ ಎಸ್.ಕೆ.ಗಿಂಡೆ, ಹುಮಾಯೂನ್ ಸುತಾರ ನಿರೂಪಿಸಿದರು.
೧೩ ಎಂ ಎಲ್ ಪಿ ೦೨

WhatsApp Group Join Now
Telegram Group Join Now
Share This Article