ಏ. 27 ರಿಂದ ನೇಸರಗಿ ಶ್ರೀ ವೀರಭದ್ರೇಶ್ವರ ಜಾತ್ರೆ ಪ್ರಾರಂಭ. ಏ.29 ರಂದು ಸಾಮೂಹಿಕ ಉಚಿತ ಗುಗ್ಗಳೋತ್ಸವ.

Pratibha Boi
ಏ. 27 ರಿಂದ ನೇಸರಗಿ ಶ್ರೀ ವೀರಭದ್ರೇಶ್ವರ ಜಾತ್ರೆ ಪ್ರಾರಂಭ.  ಏ.29 ರಂದು ಸಾಮೂಹಿಕ ಉಚಿತ ಗುಗ್ಗಳೋತ್ಸವ.
WhatsApp Group Join Now
Telegram Group Join Now
ನೇಸರಗಿ. ಇಲ್ಲಿನ ಪ್ರತಿಷ್ಠಿತ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವವು ಸೋಮವಾರ ದಿ. 27-04-2026 ರಿಂದ  ಪ್ರಾರಂಭವಾಗಿ  ಶುಕ್ರವಾರ ದಿ. 01-05-2026 ರ ವರೆಗೆ ಅದ್ದೂರಿಯಾಗಿ ಜರುಗಲಿದೆ.
   ಏ 27 ರಂದು ಬ್ರಾಹ್ಮೀ ಮಹೂರ್ಥದಲ್ಲಿ ಶ್ರೀ ವೀರಭದ್ರೇಶ್ವರ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಸಂಜೆ 4 ಘಂಟೆಗೆ ಕಳಸರೋಹಣ ನೆರವೇರುವದು. ಏ 28 ರಂದು ಸಾಯಂಕಾಲ 4 ಘಂಟೆಗೆ ಊರಿನ ದೈವದ ವತಿಯಿಂದ ಗ್ರಾಮದೇವಿಗೆ ಉಡಿ ತುಂಬುವದು, ಏ 29 ರಂದು ನೇಸರಗಿ ಮಲ್ಲಾಪೂರ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು ಹಾಗೂ ಹಣಬರಹಟ್ಟಿ ಹಿರೇಮಠದ ಶ್ರೀ ಬಸವಲಿಂಗ ಶಿವಾಚಾರ್ಯ ಅವರುಗಳ ಸಾನಿಧ್ಯದಲ್ಲಿ ಪೂಜಾ ಅಭಿಷೇಕ ಪ್ರಾರಂಭವಾಗಿ ಡಾ. ಎಸ್ ಬಿ ಗೆಜ್ಜಿ ಕುಟುಂಬಸ್ಥರಿಂದ ಉಚಿತ ಸಾಮೂಹಿಕ ರವಿ ಗುಗ್ಗಳೋತ್ಸವ ನೆರವೇರಲಿದೆ. ಮೂಡಲಗಿ ತಾಲೂಕಿನ ಕಲ್ಲೋಳಿ ಮತ್ತು ನೇಸರಗಿ ಸುತ್ತಮುತ್ತಲಿನ ಗ್ರಾಮಗಳ ಉಡಗಿ ಪುರವಂತರಿಂದ ಒಡಪು ಮತ್ತು ಜೈ ಹನುಮನ ಸಂಬಾಳ ಮಜಲ್ ಇವರಿಂದ ವೀರಗಾಸೆ ಹಾಗೂ ಕುಣಿತದ ವಿಶೇಷ ಕಾರ್ಯಕ್ರಮ ಜರುಗುವವು. ಸೈನಿಕರ ಸಂಘ ನೇಸರಗಿ ಇವರ ವತಿಯಿಂದ ಅಂಬಾರಿ ಸಮೇತ ಆಣೆ ಮೆರವಣಿಗೆ ಹಾಗೂ ಕಮಿತಿ ವತಿಯಿಂದ ಗೊಂಬೆ ಕುಣಿತ ಕಾರ್ಯಕ್ರಮ,ರಥ ಚಲಿಸುವ ಬೀದಿಗಳಲ್ಲಿ ರಂಗೋಲಿ ಹಾಕಿ, ಮದ್ಯಾಹ್ನ  3 ಘಂಟೆಗೆ ಮಹಾ ರಥೋತ್ಸವ ಅದ್ದೂರಿಯಾಗಿ ಜರುಗುವದು.ಏ 29 ರಂದು ರಾತ್ರಿ 10 ಘಂಟೆಗೆ ಶ್ರೀ ರಾಮಲಿಂಗೇಶ್ವರ ನಾಟ್ಯ ಸಂಘ ಅನಿಗೋಳ, ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರು ಮತ್ತು ಶ್ರೀ ಗೋವಿಂದಪ್ಪ ಭೀಮಶೇಪ್ಪ ಪರಂಡಿ ಹಾಗೂ ಸಂಗಡಿಗರಿಂದ ಶ್ರೀಮನ್ ನಿಜಗುಣ ಶಿವಯೋಗಿ ಸಣ್ಣಾಟ ನೆರವೇರಲಿದೆ.  ಏ 30 ರಂದು ಮದ್ಯಾಹ್ನ 3 ಘಂಟೆಗೆ ವೀರಭದ್ರೇಶ್ವರ ದೇವಸ್ಥಾನದ ಓಣಿಯಲ್ಲಿ ತೆರೆಬಂಡಿಯನ್ನು  ಇಬ್ಬರು ಹುಡುಗರು ಸೇರಿ  ಪುನಾಗಾಡಿ ಜಗ್ಗುವ ಸ್ಪರ್ಧೆ ಏರ್ಪಡಿಸಲಾಗಿದೆ.ಮೇ 1 ಸಾಯಂಕಾಲ 6 ಘಂಟೆಗೆ ಕಳಸ ಇಳಿಸುವದು, 7 ಘಂಟೆಗೆ ಗುಡಿ ಓಣಿಯ ಹುಡುಗರಿಂದ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರುಗುವದು.ಉಚಿತ ರವಿ ಗುಗ್ಗಳೋತ್ಸವ ಭಾಗವಹಿಸುವವರು  ಸೋಮವಾರ ದಿ. 27-04-2026 ರ ಒಳಗಾಗಿ ಪುರವಂತರ ಕಮಿಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಿ ಹೆಚ್ಚಿನ ಮಾಹಿತಿಗಾಗಿ ಮೊ. ನಂ. 9535883527,7026211363 ಈ ನಂಬರಗೆ ಸಂಪರ್ಕಿಸಲು ಜಾತ್ರಾ ಕಮಿಟಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article