ಬೆಳಗಾವಿ: ಜಗಜ್ಯೋತಿ, ಸಮಾನತೆಯ ಹರಿಕಾರ, ವಿಶ್ವ ಗುರು ಅಣ್ಣ ಶ್ರೀ ಬಸವೇಶ್ವರ ಜಯಂತಿ ನಿಮಿತ್ತ,ಇದೆ ರವಿವಾರ ದಿನಾಂಕ ೧೯ ರಂದು ಬೃಹತ್ ಬೈಕ್ ರ್ಯಾಲಿಯನ್ನು ಬೆಳಗಾವಿ ಮಹಾನಗರದಲ್ಲಿ ಆಯೋಜಿಸಲಾಗಿದೆ ಎಂದು ಬಸವ ಜಯಂತಿ ಉತ್ಸವ-೨೦೨೬ ಸಮಿತಿಯ ಸಂಚಾಲಕರಾದ ಬಸವರಾಜ ರೊಟ್ಟಿ ಹೇಳಿದರು.
ಅವರು ಗುರುವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಪರಿಷತ್ತಿನಲ್ಲಿ ಮಾತನಾಡಿ ದಿ. ೧೯-೦೪-೨೦೨೬ ರಂದು ಬೆಳಗಿನ ೮:೦೦ ಗಂಟೆಗೆ ಶಹಾಪೂರ ಗೋವಾವೇಸ ಬಸವೇಶ್ವರ ಸರ್ಕಲ್ ದಿಂದ ಆರಂಭವಾಗುವ ಈ ರ್ಯಾಲಿಯಲ್ಲಿ ಸುಮಾರು ೨ ಸಾವಿರಕ್ಕೂ ಅಧಿಕ ಬೈಕ್ ಗಳು ಮತ್ತು ಭಾಗಿಯಾಗಲಿವೆ. ಬಸವಣ್ಣನವರು ಸಾರಿದ ಸಮಾನತೆಗಾಗಿ ಈ ರ್ಯಾಲಿಯನ್ನು ಆಯೋಜಿಸಲಾಗಿದ್ದು ಸಮಾಜದ ಸಮಸ್ತ ಜನ ಇದರಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದವರು ವಿನಂತಿಸಿದರು.ಶ್ರೀ ಬಸವೇಶ್ವರ ಸರ್ಕಲ್ ನಲ್ಲಿ ಉಪಹಾರ ವ್ಯವಸ್ಥೆ ಕಲ್ಪಿಸಲಾಗಿದ್ದು,
ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಸ್ವಾಮೀಜಿಯವರು, ಬೆಳಗಾವಿಯ ಸಂಸದ ಜಗದೀಶ್ ಶೆಟ್ಟರ್ , ಕೆಎಲ್ಇ ಸಂಸ್ಥೆಯ ಗೌರವ ಕಾರ್ಯಧ್ಯಕ್ಷ ಡಾ.
ಪ್ರಭಾಕರ್ ಕೋರೆ, ವಿ ಪ ಸದಸ್ಯ ಚನ್ನರಾಜ ಹಟ್ಟಿಹೊಳಿ, ಜಿಲ್ಲೆಯ ಶಾಸಕರು ಜಯಂತಿಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬೆಳಗಾವಿಯ ಮಹಾಪೌರ ಶ್ರೀಮತಿ. ಪ್ರೀತಿ ಕಾಮಕರ್, ಉಪಮಹಾಪೌರ ಹನುಮಂತ ಕೊಂಗಾಲಿ, ಶಾಸಕರಾದ ಅಭಯ್ ಪಾಟೀಲ್, ರಾಜು ಸೇಠ ಮತ್ತು ನಗರ ಸೇವಕರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದವರು ವಿವರಿಸಿದರು.
ರ್ಯಾಲಿಯೂ ಬಸವೇಶ್ವರ ಸರ್ಕಲದಿಂದ ಆರಂಭವಾಗಿ ತಿಳಕವಾಡಿ, ಅನುಗೋಳ, ವಡಗಾವ್ ,ಖಾಸಬಾಗ್, ಶಹಪುರ್ , ಕಪಿಲೇಶ್ವರ ರೋಡ್, ಕರ್ನಾಟಕ ಚೌಕ್, ರವಿವಾರಪೇಟೆ, ಖಡೆ ಬಾಜಾರ್, ಮಾರುತಿ ಗಲ್ಲಿ , ರಾಮದೇವ್ ಗಲ್ಲಿ, ಕಾಲೇಜು ರಸ್ತೆ , ಚೆನ್ನಮ್ಮ ಸರ್ಕಲ್, ಸಿವಿಲ್ ಆಸ್ಪತ್ರೆ, ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜು ರಸ್ತೆ , ಲಿಂಗಾಯಿತ ಭವನ, ಶ್ರೀನಗರ ಗಾರ್ಡನ್, ರಾಣಿ ಚೆನ್ನಮ್ಮ ಸೊಸೈಟಿ, ಸಾಯಿ ಮಂದಿರ, ಬಾಲ ಭವನ, ಲೌಡೇಲ ಸ್ಕೂಲ್, ಮಹಾಂತೇಶ್ ನಗರ ಬಸ್ ನಿಲ್ದಾಣ, ಪಿ & ಟಿ ಕ್ವಾಟರ್ಸ್, ಸಿದ್ನಾಳ ಕ್ರಾಸ್ , ಕೆಎಂಎಫ್ ಡೈರಿ, ದತ್ತ ಮಂದಿರ, ಲಿಂಗಾಯಿತ ಸಂಘಟನೆ ಮೈದಾನದವರೆಗೆ ಬಂದು ಫ.ಗು. ಹಳಕಟ್ಟಿ ಭವನದಲ್ಲಿ ಕೊನೆಗೊಳ್ಳಲಿದೆ. ಇಲ್ಲಿಯೇ ಪಾಲ್ಗೊಂಡ ಎಲ್ಲರಿಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲರಿಗೂ ಸಮವಸ್ತ್ರ ಕಲ್ಪಿಸಲಾಗುವದು.ಈ ಬೃಹತ್ ರ್ಯಾಲಿಯಲ್ಲಿ ಸಮಸ್ತ ಜನರು ಭಾಗವಹಿಸಿ ಯಶಸ್ವಿಗೊಳಿಸಬೇಕು ಶ್ರೀ ಬಸವ ಜಯಂತಿಯಂದು ಒಟ್ಟಾರೆ ೨೫೦೦೦ ಜನ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪ್ರಶ್ನೆ ಒಂದಕ್ಕೆ ಉತ್ತರಿಸಿದ ಶ್ರೀಮತಿ ರತ್ನಪ್ರಭಾ ಬೆಲ್ಲದ ಅವರು ನಾವೆಲ್ಲ ಒಂದಾಗಿದ್ದು ಬಸವಪರ ಸಂಘಟನೆಗಳೆಲ್ಲ ಸೇರಿ ಬಸವ ಜಯಂತಿ ಆಚರಿಸಲಾಗುತ್ತದೆ. ಈ ವಿಷಯದಲ್ಲಿ ಯಾವುದೇ ಬಿನ್ನ ಅಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾ ಪರಿಷತ್ತಿನಲ್ಲಿ ಶ್ರೀಮತಿ. ರತ್ನಪ್ರಭಾ ಬೆಲ್ಲದ,ಈರಣ್ಣ ದೇಯಣ್ಣವರ್, ಕಿರಣ್ ಅಗಡಿ, ರಮೇಶ್ ತುಬಚಿ, ಶಂಕರ ಗುಡಸ, ಎಸ್.ಜಿ. ಸಿದ್ನಾಳ, ಆನಂದ್ ಗುಡಸ, ಪ್ರೇಮ ಚೌಗಲಾ , ಮನೋಹರ ಪುಡಕಲಕಟ್ಟಿ, ಬಾಲಚಂದ್ರ ಬಾಗಿ,ಅಶೋಕ್ ಬೆಂಡಿಗೇರಿ, ಮುರಗೆಪ್ಪ ಬಾಳಿ ಮತ್ತು ಸಿ.ಎಂ.ಬೂದಿಹಾಳ ಸೇರಿದಂತೆ ಎಲ್ಲ ಬಸವ ಸಂಘಟನೆ ಅಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.


