ಗದಗ ಐಎಂಎ ಶತಮಾನೋತ್ಸವ ಸಂಭ್ರಮ : ವಿದ್ಯಾರ್ಥಿಗಳಿಗೆ ವಿಸ್ಮಯ ಬೇಸಿಗೆ ಶಿಬಿರ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ವೃದ್ಧಿಸಲಿ : ಬುರಡಿ

MK HasiruKranti
ಗದಗ ಐಎಂಎ ಶತಮಾನೋತ್ಸವ ಸಂಭ್ರಮ : ವಿದ್ಯಾರ್ಥಿಗಳಿಗೆ ವಿಸ್ಮಯ ಬೇಸಿಗೆ ಶಿಬಿರ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ವೃದ್ಧಿಸಲಿ : ಬುರಡಿ
WhatsApp Group Join Now
Telegram Group Join Now
ಗದಗ, ಎ. ೧೫ : ಬೇಸಿಗೆಯ ಈ ರಜೆಯು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಬೌದ್ಧಿಕ ವಿಕಸನ, ಸೃಜನಶೀಲತೆ  ಹಾಗೂ ಕೌಶಲ್ಯವನ್ನು ವೃದ್ಧಿಸುವಂತಾಗಲಿ ಎಂದು ಗದಗ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೆಶಕ ಆರ್.ಎಸ್.ಬುರಡಿ ಹೇಳಿದರು.
ಅವರು ಬುಧವಾರ ಬೆಟಗೇರಿಯ ಖಗೋಳ ತಾರಾಲಯದಲ್ಲಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಗದಗ ಶಾಖೆ ತನ್ನ ಶತಮಾನೋತ್ಸವದ ಅಂಗವಾಗಿ ಜಿಲ್ಲಾ ಪಂಚಾಯತ, ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ, ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ವಿನೂತನ ಹಾಗೂ ಪ್ರಯೋಜನಕಾರಿ ವಿಸ್ಮಯ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ವಿಜ್ಞಾನಾಸಕ್ತಿ, ಸೃಜನಾತ್ಮಕತೆ ಹಾಗೂ ಜೀವನ ಕೌಶಲ್ಯಗಳನ್ನು ಬೆಳೆಸುವ ಹಿರಿದಾದ ಸದುದ್ದೇಶದಿಂದ ಗದಗ ಐಎಂಎ ಶತಮಾನೋತ್ಸವ ಸಂಭ್ರಮಾಚರಣೆಯನ್ನು ಈ ರೀತಿಯಾಗಿ ಮಕ್ಕಳ ಸದುಪಯೋಗಕ್ಕಾಗಿ ಯೋಜನೆ ರೂಪಿಸಿರುವದು ಅಭಿನಂದನೀಯ ಎಂದರು.
ಸರ್ಕಾರೇತರ ಸಂಘ ಸಂಸ್ಥೆಗಳು ಶಾಲಾ ಮಕ್ಕಳಿಗಾಗಿ ಉಚಿತ ಖಗೋಳ ವೀಕ್ಷಣೆ ಅಧ್ಯಯನ, ಪ್ರಾಣಿಸಂಗ್ರಹಾಲಯ ವೀಕ್ಷಣೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವದು ಅಭಿನಂದನಾರ್ಹ. ವಿದ್ಯಾರ್ಥಿಗಳಿಗೆ ಉಚಿತವಾಗಿ ತಾರಾಲಯದಲ್ಲಿ ಖಗೋಳ ವಿಸ್ಮಯ ಹಾಗೂ ಪ್ರಾಣಿ ಸಂಗ್ರಹಾಲಯ ವೀಕ್ಷಣೆಯನ್ನು ಉಚಿತವಾಗಿ ಹಾಗೂ ಪೋಷಕರಿಗೆ ಶೇ. ೫೦ ರಷ್ಟು ರಿಯಾಯ್ತಿ ಶುಲ್ಕದಲ್ಲಿ ಖಗೋಳ ವಿಸ್ಮಯ ವೀಕ್ಷಣೆಗೆ ಐಎಂಎ ವ್ಯವಸ್ಥೆ ಮಾಡಿರುವದು ಶ್ಲ್ಯಾಘನೀಯ ಎಂದರು.
ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಯನ್ನು ಮೂಡಿಸಿ ಮೂಢನಂಬಿಕೆಗಳನ್ನು ದೂರ ಮಾಡಿ ಅವರಲ್ಲಿ ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವನೆಯನ್ನು ಬೆಳೆಸುವ ಕೆಲಸವು ನಡೆಯಬೇಕು ಎಂದರು.
ಮುಖ್ಯ ಅತಿಥಿ ಗದಗ ಐಎಂಎ ಅಧ್ಯಕ್ಷ ಡಾ.ಶ್ರೀಧರ ಕುರಡಗಿ ಗದಗ ಐಎಂಎ ಶತಮಾನೋತ್ಸವದ ಸಂಭ್ರಮವನ್ನು ಸಮಾಜಮುಖಿ, ಜನಮುಖಿ ಕಾರ್ಯಕ್ರಮಗಳನ್ನು ಈ ವರ್ಷದಾದ್ಯಂತ ಹಮ್ಮಿಕೊಂಡಿದೆ. ಸಾಮಾಜಿಕ ಕಳಕಳಿಯೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ತಪಾಸಣೆ, ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಕೈಜೋಡಿಸುವಿಕೆ ಹೀಗೆ ಮುಂತಾದ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಹೈಟೆಟ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಐಎಂಎ ಈ ಶಿಬಿರ ರೂಪಿಸಿದೆ ಎಂದರು.
ಖಗೋಳದ ವಿಸ್ಮಯವನ್ನ ಮಕ್ಕಳು ಅರಿಯಬೇಕು. ತಾರಾಲಯವು ಮಕ್ಕಳ ಕಲಿಕೆಗೆ, ಜ್ಞಾನ ವಿಕಸನಕ್ಕೆ ವೇದಿಕೆಯಾಗಲಿ ಮಕ್ಕಳಿಗೆ ಕುತೂಹಲ ಹಾಗೂ ರೂಮಾಂಚನ ಉಂಟು ಮಾಡಲಿ, ಇದರೊಂದಿಗೆ ಪ್ರಾಣಿ ಸಂಗ್ರಹಾಲಯದ ವೀಕ್ಷಣೆಯ ಅವಕಾಶವನ್ನೂ ಒದಗಿಸಿದ್ದು ವಿಜ್ಞಾನ ವಿಸ್ಮಯದೊಂದಿಗೆ ಸಸ್ಯ ಹಾಗೂ ಪ್ರಾಣಿ ಜಗತ್ತನ್ನು ತಿಳಿಯುವಲ್ಲಿ ಮಕ್ಕಳು ಮುಂದಾಗಬೇಕು ಎಂದು ಡಾ.ಕುರಡಗಿ ಹೇಳಿದರು.
ವೇದಿಕೆಯ ಮೇಲೆ ಗದಗ ಐಎಂಎ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಡಾ.ಎಸ್.ಆರ್.ನಾಗನೂರ, ಲಾಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆನಂದ ಪೊತ್ನೀಸ್, ಗದಗ-ಬೆಟಗೇರಿ ಲಾಯನ್ಸ್ ಕ್ಲಬ್ ಅಧ್ಯಕ್ಷ ರಾಜು ವೇರ್ಣೆಕರ, ಬಿಂಕದಕಟ್ಟಿ ಪ್ರಾಣಿಸಂಗ್ರಹಾಲಯದ ಉಸ್ತುವಾರಿ ಅಧಿಕಾರಿ ರಾಮಪ್ಪ ಪೂಜಾರ, ಎಂ.ಎಚ್.ಕಂಬಳಿ, ಶಿವಕುಮಾರ ಕುರಿ ಉಪಸ್ಥಿತರಿದ್ದರು.
ಸರೋಜಿನಿ ಬಂಡಿವಡ್ಡರ ಪ್ರಾರ್ಥಿಸಿದರು, ಎಸ್.ಪಿ.ಪ್ರಭಯ್ಯನಮಠ ಸ್ವಾಗತಿಸಿದರು, ಮೊಹ್ಮದ್‌ಶಫಿ ಯರಗುಡಿ ನಿರೂಪಿಸಿದರು  ಕೊನೆಗೆ ಎಂ.ಎಚ್.ಸವದತ್ತಿ ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ.ಶಶಿಧರ ರೇಶ್ಮೆ, ಡಾ.ಪ್ಯಾರಅಲಿ ನೂರಾನಿ, ಡಾ.ಸುನೀತಾ ಕುರಡಗಿ, ಡಾ.ಪ್ರಭಾ ದೇಸಾಯಿ, ರೇಣುಕಪ್ರಸಾದ ಹಿರೇಮಠ, ರಮೇಶ ಶಿಗ್ಲಿ, ನೇಹಾ ಖಟವಟೆ, ಶಿಕ್ಷಣ ಇಲಾಖೆಯ ಮೇಲುಸ್ತುವಾರಿ ಅಧಿಕಾರಿಗಳು, ವೈದ್ಯಕೀಯ ವಿದ್ಯಾರ್ಥಿಗಳು, ವಿವಿದ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೋಂಡಿದ್ದರು.
= = =
ಶಾಲಾ ಮಕ್ಕಳಿಗೆ ಮೇ. ೩ರವರೆಗೆ ಉಚಿತವಾಗಿರುವ ಈ ಶಿಬಿರವು ಪ್ರತಿ ದಿನ ನಾಲ್ಕು ಬ್ಯಾಚ್‌ಗಳಲ್ಲಿ ತರಗತಿಗಳು ನಡೆಯಲಿವೆ. ಮುಂಜಾನೆ ೧೦:೩೦ ರಿಂದ ೧೨, ಮಧ್ಯಾಹ್ನ ೧೨:೩೦ ರಿಂದ ೧:೩೦, ಮಧ್ಯಾಹ್ನ ೨ ರಿಂದ ೩ ಹಾಗೂ ಸಂಜೆ ೩:೩೦ ರಿಂದ ೪:೩೦ ಗಂಟೆಯವರೆಗೆ. ಸಾರ್ವಜನಿಕರಿಗೆ ತಾರಾಲಯದಲ್ಲಿ ಖಗೋಳ ವೀಕ್ಷಣೆಗೆ  ೧೦೦ ರೂ. ಬದಲಾಗಿ ೫೦ ರೂ.ನಿಗದಿಗೊಳಿಸಿದೆ. ನೋಂದಣಿಗಾಗಿ ೯೫೩೮೯೮೫೮೨೫, ೭೩೫೩೯೭೯೭೨೨, ೭೬೭೬೯೮೨೮೫೦, ೯೪೪೮೮೦೫೬೭೯ ಮೊಬೈಲ್‌ಗೆ ಸಂಪರ್ಕಿಸಬಹುದು.
= = =
WhatsApp Group Join Now
Telegram Group Join Now
Share This Article