ಹೋಮ್ ವರ್ಕ್ ಸಮೇತ ಮಕ್ಕಳಿಗೆ ಬೀಳ್ಕೊಡುಗೆ

Pratibha Boi
ಹೋಮ್ ವರ್ಕ್ ಸಮೇತ ಮಕ್ಕಳಿಗೆ ಬೀಳ್ಕೊಡುಗೆ
WhatsApp Group Join Now
Telegram Group Join Now

ಮಹಾಲಿಂಗಪುರ : ಸಮೀಪದ ನಂದಗಾಂವ ವಸ್ತಿ (ಗುರವ್ ತೋಟದ) ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ೫ನೇ ತರಗತಿ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಬೀಳ್ಕೊಡುವ ಸಮಾರಂಭ ಹಮ್ಮಿಕೊಳ್ಳಲಾಯಿತು. ಫಲಿತಾಂಶ ಘೋಷಣೆ, ಪಾಲಕರೊಂದಿಗೆ ಸಮಾಲೋಚನೆ, ಸಮುದಾಯದತ್ತ ಕಾರ್ಯಕ್ರಮ, ರಜೆಯಲ್ಲಿ ಮಕ್ಕಳಿಗೆ ಹೋಂವರ್ಕ್ ಬುಕ್ ವಿತರಿಸುವ, ಶಾಲಾ ದಾಖಲಾತಿ ಆರಂಭಿಸುವ ಹಾಗೂ ರಜೆಯಲ್ಲೂ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ತರಗತಿ ಹಮ್ಮಿಕೊಳ್ಳುವ ಪ್ರಕ್ರಿಯೆ ನಡೆಸಲಾಯಿತು. ಉಪನ್ಯಾಸಕ ಶಿವಲಿಂಗ ಸಿದ್ನಾಳ ಅಭ್ಯಸ ಪರಿಕರಗಳನ್ನು ವಿತರಿಸಿದರು. ಶಾಲೆಯ ಮುಖ್ಯ ಶಿಕ್ಷಕ ವೀರಣ್ಣ ಗೊಂದಿ, ಸ್ಕೌಟ್ಸ್ ಕ್ಯಾಪ್ಟನ್ ಎಸ್.ಜಿ.ಜುಟನಟ್ಟಿ, ಶಿಕ್ಷಕ ಸೋಮು ಕಂಬಳಿ, ಎಸ್‌ಡಿಎಂಸಿ ಪದಾಧಿಕಾರಿಗಳು, ಗ್ರಾಮಸ್ಥರು, ಪಾಲಕರು ಪಾಲ್ಗೊಂಡಿದ್ದರು.

 

WhatsApp Group Join Now
Telegram Group Join Now
Share This Article