ವಿಎಸ್‌ಕೆ ವಿವಿ: ಡಾ.ಬಿ.ಆರ್ ಅಂಬೇಡ್ಕರ್ 135ನೇ ಜಯಂತಿ ಭೌತಿಕ ಆಸ್ತಿಗಿಂತ ಬೌದ್ಧಿಕ ಆಸ್ತಿಗಳ ಕೊಡುಗೆ: ಪ್ರೊ.ದಳವಾಯಿ

MK HasiruKranti
ವಿಎಸ್‌ಕೆ ವಿವಿ: ಡಾ.ಬಿ.ಆರ್ ಅಂಬೇಡ್ಕರ್ 135ನೇ ಜಯಂತಿ ಭೌತಿಕ ಆಸ್ತಿಗಿಂತ ಬೌದ್ಧಿಕ ಆಸ್ತಿಗಳ ಕೊಡುಗೆ: ಪ್ರೊ.ದಳವಾಯಿ
WhatsApp Group Join Now
Telegram Group Join Now

ಬಳ್ಳಾರಿ,ಏ.15 ಬುದ್ಧನ ಪಂಚಶೀಲತತ್ವಗಳು, ವಿಸರಣಗಳನ್ನು ಸದಾಕಾಲ ಆರಾಧಿಸಿದ ಬಾಬಾ ಸಾಹೇಬ ಡಾ.ಬಿ.ಆರ್ ಅಂಬೇಡ್ಕರ್‌ರವರು ದೇಶದ ದಮನಿತರ ಏಳ್ಗೆಗೆ ಹಗಲು ರಾತ್ರಿ ತಮ್ಮ ಜೀವನ ಮುಡಿಪಾಗಿಟ್ಟಿದ್ದರು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ವೆಂಕಟಗಿರಿ ದಳವಾಯಿ ಅವರು ಹೇಳಿದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಂವಿಧಾನ ಶಿಲ್ಪಿಯ ಆಚಾರ-ವಿಚಾರಗಳನ್ನು ದೇಶದ ಬುದ್ಧಿಜೀವಿಗಳು ಸರಿಯಾಗಿ ತಿಳಿದುಕೊಳ್ಳದೆ ಕೇವಲ ಸಂವಿಧಾನಕ್ಕೆ ಮತ್ತು ಒಂದು ವರ್ಗಕ್ಕೆ ಅವರನ್ನು ಸೀಮಿತಗೊಳಿಸಿ ಒಬ್ಬ ಗುಣವಾಚಕರನ್ನಾಗಿ ಅಂಬೇಡ್ಕರ್‌ರನ್ನು ಬಿಂಬಿಸಲಾಗಿದೆ. ಅಪಾರ ದೂರದೃಷ್ಟಿ ಹೊಂದಿದ್ದ ಇವರು ಹಣಕಾಸು, ಶಿಕ್ಷಣ, ಕೃಷಿ, ನೀರಾವರಿ, ವಿದೇಶಾಂಗ ನೀತಿ ಆಲೋಚನೆಗಳನ್ನು ಬಿತ್ತಿದವರು ಎಂದರು.
ಭೌತಿಕ ಆಸ್ತಿಗಿಂತ ಬೌದ್ಧಿಕ ಆಸ್ತಿಗಳ ಕೊಡುಗೆಯನ್ನು ಅಂಬೇಡ್ಕರ್ ಅವರು ದೇಶಕ್ಕೆ ಕೊಡುಗೆ ನೀಡಿದವರು. ಅಂತರಾಷ್ಟಿçÃಯ ದುಂಡು ಮೇಜಿನ ಸಮ್ಮೇಳನದಲ್ಲಿ ದೇಶದ ಶೋಷಿತ ವರ್ಗದ ಜನತೆಗೆ ಆಹಾರ, ವಸತಿ ಜೊತೆಗೆ ಶಿಕ್ಷಣದ ಅವಶ್ಯಕತೆ ಕುರಿತು ಪ್ರಸ್ತಾಪಿಸಿದ್ದರು. ಜಾತಿ ವ್ಯವಸ್ಥೆö, ವರ್ಣಬೇಧ ನೀತಿ ವಿರುದ್ದ ಹೋರಾಡಿ ಸಾಮಾಜಿಕ ನ್ಯಾಯ, ಭ್ರಾತೃತ್ವ ಎಲ್ಲರಿಗೂ ಸಮಾನವಾಗಿರಬೇಕು ಎಂದು ಪ್ರತಿಪಾದಿಸಿದರು.
ಬಾಲ್ಯದಿಂದಲೇ ಶಿಕ್ಷಣ ಪಡೆಯಲು ಅಂಬೇಡ್ಕರ್ ಅವರು ಪಟ್ಟಿದ್ದ ಕಷ್ಟವನ್ನು ಇತರರು ಅನುಭವಿಸದಿರಲಿ ಹಾಗೂ ಉನ್ನತ ಶಿಕ್ಷಣದ ಕನಸು ದೇಶದ ಎಲ್ಲ ಸಮುದಾಯದವರಿಗೆ ಒದಗುವಂತಾಗಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ವಿಶ್ವವಿದ್ಯಾಲಯಗಳು ಬಾಬಾಸಾಹೇಬರ ಸಮಾಜ ಸುಧಾರಣೆಯ ತತ್ವ, ಅವರಲ್ಲಿದ್ದ ಪಾಂಡಿತ್ಯದ ನೋಟಗಳನ್ನು ವಿವಿಧ ಆಯಾಮಗಳಲ್ಲಿ ಪರಾಮರ್ಶಿಸಿ ಅಂತರಾಷ್ಟಿçÃಯ ಮಟ್ಟದಲ್ಲಿ ಇವುಗಳ ಕುರಿತು ಚರ್ಚೆ ನಡೆಸಬೇಕು ಎಂದು ಹೇಳಿದರು.
ಅಂಬೇಡ್ಕರ್ ಅವರ ತತ್ವಗಳನ್ನು ದೇಶದ ಹಲವು ಮೇಲ್ಜಾತಿಯ ವಿಚಾರವಂತರು ಅವರನ್ನು ಬೆಂಬಲಿಸಿದ್ದರು.  ಸ್ವಾತಂತ್ರö್ಯ ಪೂರ್ವದಿಂದಲೂ, ಸ್ವಾತಂತ್ರö್ಯ ನಂತರವೂ ಬಾಬಾ ಸಾಹೇಬರ ಆಧುನಿಕತೆಯ ಪರಿಭಾಷೆ ಎಂದಿಗೂ ಬದಲಾಗಲಿಲ್ಲ. ದೇಶ-ವಿದೇಶಗಳಲ್ಲಿ ಅನೇಕ ಉನ್ನತ ಸ್ಥಾನಮಾನಗಳನ್ನು ಅಂಬೇಡ್ಕರ್ ಅವರು ಪಡೆದರೂ ಕೊನೆಯಲ್ಲಿ ಅವರು 22 ಲಕ್ಷ ರೂ. ಸಾಲವನ್ನು ಹೊತ್ತಿದ್ದರು. ಇದರಲ್ಲಿ 11 ಲಕ್ಷ ಪುಸ್ತಕಗಳ ವೆಚ್ಚವು ಇತ್ತೆಂದು ತಿಳಿಸಿದರು.
24ಸಾವಿರ ಪುಟಗಳ ಸಂವಿಧಾನ ರಚಿಸಿ ಲಕ್ಷಾಂತರ ಪುಸ್ತಕಗಳನ್ನು ಓದಿದ್ದ ಅಂಬೇಡ್ಕರ್ ಅವರ ಕುರಿತು ಇಂದಿನ ಯುವಜನತೆ ಓದಲೇಬೇಕು ಎಂದರು.
ಕುಲಸಚಿವ ಪ್ರೊ.ಎನ್.ಎಂ ಸಾಲಿ ಅವರು ಮಾತನಾಡಿ, ಅಂಬೇಡ್ಕರ್ ಅವರ ಜಯಂತಿಯನ್ನು ಶಿಕ್ಷಕವರ್ಗದವರು ಆತ್ಮಾವಲೋಕನ ಮಾಡಿಕೊಳ್ಳುವ ದಿನವಾಗಿ ಆಚರಿಸಬೇಕು. ಅಧಿಕಾರ, ಸ್ಥಾನಮಾನ ದೊರೆತಾಗ ಸಮಾಜದ ಸಮುದಾಯದ ಅಭಿವೃದ್ಧಿಗಾಗಿ ಬಳಕೆ ಮಾಡಿಕೊಳ್ಳಬೇಕು. ಅಂಬೇಡ್ಕರ್ ಅವರಂತೆ ಸ್ವಾಭಿಮಾನ ಹಾಗೂ ವ್ಯಕ್ತಿ ಗೌರವವನ್ನು ಪ್ರತಿಯೊಬ್ಬರು ಹೊಂದಬೇಕು ಎಂದು ಕರೆ ನೀಡಿದರು.
ವಿವಿಯ ವಿತ್ತಾಧಿಕಾರಿ ಸ್ಫೂರ್ತಿ ಕೆ.ಜಿ ಅವರು ಮಾತನಾಡಿ, ದೇಶದ ಆರ್ಥಿಕತೆ, ಆರ್ಥಿಕ ನೀತಿಗಳ ರಚನೆಯಲ್ಲಿ ಅಂಬೇಡ್ಕರ್ ಅವರು ಮುಖ್ಯಪಾತ್ರ ವಹಿಸಿದ್ದರು. ಬ್ಯಾಂಕಿAಗ್, ಫೈನಾನ್ಸ್ ಮತ್ತು ರೂಪಾಯಿ ವ್ಯವಸ್ಥೆ, ಕಾರ್ಮಿಕ ಸೇವಾ ಅವಧಿ, ಕಾರ್ಮಿಕ ನಿಧಿ, ಸೇವಾ ಅವಧಿಯನ್ನು ಶಾಶ್ವತಗೊಳಿಸುವಲ್ಲಿ ಅಂಬೇಡ್ಕರ್ ಅವರ ಪಾತ್ರ ನಿರ್ಣಾಯಕವಾಗಿತ್ತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಅವರು, ಸಂವಿಧಾನದಲ್ಲಿರುವ ಪ್ರತಿಯೊಂದು ಶಬ್ದದ ಹಿಂದೆ ಬಾಬಾ ಸಾಹೇಬರ ಅಪಾರ ಸಂಶೋಧನೆ ಇದೆ. ಸಂವಿಧಾನದ ಪ್ರತಿಯೊಂದು ಪುಟಗಳ ಕುರಿತು ಅಧ್ಯಯನ ನಡೆಸಿದರೆ ವರ್ಷಪೂರ್ತಿ ವಿಚಾರ ಸಂಕಿರಣಗಳನ್ನು ನಡೆಸಬಹುದು. ಅಂಬೇಡ್ಕರ್ ಅವರ ಕುರಿತು ಉತ್ತಮ ಸಂಶೋಧನಾ ಪ್ರಬಂಧಕ್ಕೆ ವಿವಿ ವತಿಯಿಂದ 10 ಸಾವಿರ ರೂ ನಗದು ಬಹುಮಾನ ನೀಡುವುದಾಗಿ ಘೋಷಿಸಿದರು.
ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕರು ಮತ್ತು ಕಾರ್ಯಕ್ರಮದ ಸಂಚಾಲಕರಾದ ಪ್ರೊ.ಗೌರಿ ಮಾಣಿಕ ಮಾನಸ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.
ಕಾರ್ಯಕ್ರಮ ಆರಂಭಕ್ಕೂ ಮೊದಲು ವಿವಿಯ ಆವರಣದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಗಣ್ಯರು ಮಾಲಾರ್ಪಣೆ ಮಾಡಿ ಮೆರವಣಿಗೆ ನಡೆಸಲಾಯಿತು.
ಡಾ.ಚಲವಾದಿ ಸಿ.ಐ ನಿರೂಪಿಸಿದರು. ಡಾ.ಕವಿತಾ ಸಾಗರ್ ವಂದಿಸಿದರು. ಡಾ.ಅಣ್ಣಾಜಿ ಕೃಷ್ಣರೆಡ್ಡಿ ಮತ್ತು ತಂಡದವರಿAದ ಕ್ರಾಂತಿಗೀತೆಗಳನ್ನು ಹಾಡಿದರು.
ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

WhatsApp Group Join Now
Telegram Group Join Now
Share This Article