ನೇಸರಗಿ: ಸೊಮಾವರದಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೇಸರಗಿ ಹಾಗೂ ದೇಶನೂರ ವಲಯದ ವತಿಯಿಂದ ನೇಸರಗಿ ಪೊಲೀಸ ಠಾಣೆಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ಆಚರಣೆ ನೆರವೇರಿಸಲಾಯಿತು.
ಈ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಪೊಲೀಸ ಠಾಣೆಯ ಮೇಲಾಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ತಾಲೂಕು ಯೋಜನಾಧಿಕಾರಿಗಳಾದ ವಿಜಯ ಕುಮಾರ ಮಾತನಾಡಿ ಕ್ಷೇತ್ರದಿಂದ ನಡೆದು ಬರುತ್ತಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು ಹಾಗೂ ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿರುವ ಪೋಲಿಸ ಸಿಬ್ಬಂದಿಗಳಿಗೆ ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ರಾಕಿ ಕಟ್ಟುವುದರ ಮೂಲಕ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ನೇಸರಗಿ ಸಿ ಪಿ ಐ ರಾಘವೇಂದ್ರ ಹವಾಲ್ದಾರ, ಪಿ ಎಸ್ ಐ ವಾಯ್ ಎಲ್. ಶೀಗಿಹಳ್ಳಿಮತ್ತು ಪೊಲೀಸ್ ಠಾಣೆಯ ಸಿಬ್ಬಂದಿ, ವಲಯದ ಮೇಲ್ವಿಚಾರಕರಾದ ಪ್ರವೀಣ ದೊಡಮನಿ, ದೇಶನೂರು ವಲಯದ ಮೇಲ್ವಿಚಾರಕರಾದ ಫಕೀರೇಶ ವಲಯದ ಎಲ್ಲಾ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.