ದೇವಾಲಯ ಸಂಸ್ಕೃತಿ ಅಲ್ಲಗಳೆದಿದ್ದ ಬಸವಣ್ಣ: ಸತ್ಯಂಪೇಟೆ

Pratibha Boi
ದೇವಾಲಯ ಸಂಸ್ಕೃತಿ ಅಲ್ಲಗಳೆದಿದ್ದ ಬಸವಣ್ಣ: ಸತ್ಯಂಪೇಟೆ
??????????????
WhatsApp Group Join Now
Telegram Group Join Now
ಜಮಖಂಡಿ: ದೇಹವೇ ದೇಗುಲ. ಕಾಲೆ ಕಂಬ. ಶಿರವೆ ಹೊನ್ನ ಕಳಸವೆಂದು ದೇವಾಲಯದ ಬಗ್ಗೆ ಹೊಸ ಕಲ್ಪನೆಯನ್ನು ನೀಡುವ ಮೂಲಕ ಬಸವಣ್ಣನವರು ದೇವಾಲಯ ಸಂಸ್ಕೃತಿಯನ್ನು ಅಲ್ಲಗಳೆದಿದ್ದರು ಎಂದು ಶಹಾಪುರದ ಬಸವಮಾರ್ಗ ಪ್ರತಿಷ್ಠಾನದ ಅಧ್ಯಕ್ಷ, ಶರಣ ವಿಶ್ವರಾಧ್ಯ ಸತ್ಯಂಪೇಟೆ ಹೇಳಿದರು.
  ಬಸವ ಜಯಂತಿ ನಿಮಿತ್ತ ನಗರದ ಐತಿಹಾಸಿಕ ಓಲೆಮಠದ ಆಶ್ರಯದಲ್ಲಿ ಜರುಗುತ್ತಿರುವ ಆರು ದಿನಗಳ ಓಲೆಮಠದ ಜಾತ್ರಾಮಹೋತ್ಸವದ ಗುರುವಾರ ಸಂಜೆಯ ಕಾರ್ಯಕ್ರಮದಲ್ಲಿ ಅವರು ‘ವಚನಗಳಲ್ಲಿ ದೇವರ ಕಲ್ಪನೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು.
  ಬಸವಣ್ಣನವರು ಸ್ವರ್ಗ-ನರಕಗಳ ಬಗೆಗಿನ ಹುಸಿ ಕಲ್ಪನೆಗಳನ್ನು ತೊಡೆದು ಹಾಕಿದ್ದರು. ಎತ್ತೆತ್ತ ನೋಡಿದರೂ ಕೂಡಲಸಂಗಮ ದೇವನಿರುತ್ತಾನೆ. ನಂಬಬಲ್ಲ ಭಕ್ತನಿಗೆ ದೇವನೊಬ್ಬನೆ. ಕಲ್ಲು ದೇವರಲ್ಲ. ಮಣ್ಣು ದೇವರಲ್ಲ. ನೀರು ತೀರ್ಥವಲ್ಲ. ಕೂಳು ಪ್ರಸಾದವಲ್ಲ. ಸರಿ-ತಪ್ಪು ಅರಿಯುವುದು ಪ್ರಸಾದವೆಂದರು.
  ಘಟಪ್ರಭಾದ ಕೆಂಪಯ್ಯ ಮಠದ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ದೇವರನ್ನು ಯಾರೂ ನೋಡಿಲ್ಲ. ಆದರೆ, ದೇವರನ್ನು ಪೂಜಿಸಿ ದೇವರಾದವರು ಇದ್ದಾರೆ. ದೇವರು, ಮೋಕ್ಷ, ಸಂಸ್ಕಾರ ಎಂದರೇನು ಎಂದು ತಿಳಿಸಿಕೊಡುವ ತಾಯಿಯೇ ದೇವರು ಎಂದು ಆಶೀರ್ವಚನ ನೀಡಿದರು.
  ಮುತ್ತೂರಿನ ರಾಚೋಟೇಶ್ವರ ಮಠದ ಗುರುಸಿದ್ಧ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮುತ್ತೂರಿನ ಮಹಾಲಕ್ಷಿö್ಮÃ ದೇವಸ್ಥಾನದ ಅಧ್ಯಕ್ಷ ಮುತ್ತಣ್ಣ ಹಿಪ್ಪರಗಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ಸೂರ್ಯವಂಶಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಅಜಯ ಕಡಪಟ್ಟಿ ಮಾತನಾಡಿದರು.
  ಹುನ್ನೂರಿನ ಅಡವಿ ಸಿದ್ಧೇಶ್ವರ ಮಠದ ವಿಶ್ವನಾಥ ಶಾಸ್ತಿçÃಗಳು, ಪಡಕನೂರಿನ ಷಡಕ್ಷರಿ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮಹಾಪ್ರಸಾದದ ದಾಸೋಹ ಸೇವೆಗೈದ ಗುರುಲಿಂಗಪ್ಪ ಮುತ್ತಕ್ಕನವರ ಅವರನ್ನು ಓಲೆಮಠದ ಪರವಾಗಿ ಸನ್ಮಾನಿಸಲಾಯಿತು.
  ಕುಂಚನೂರಿನ ಎಂ.ಬಿ. ನ್ಯಾಮಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ ಕೋಳಿ, ಬಿಜೆಪಿ ಯುವ ಮೋರ್ಚಾದ ಸುನೀಲ ಭೋವಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ ತಳಕೇರಿ, ಉದ್ಯಮಿ ರಾಜೇಶ್ವರಿ ಹಿರೇಮಠ, ಅರ್ಜುನ ದಳವಾಯಿ, ಎಚ್.ಎಂ. ಶೆಟ್ಟರ, ಶಂಕರ ಹನಗಂಡಿ, ಎಸ್.ಜಿ. ಹವಾಲ್ದಾರ, ಮಹಾಂತೇಶ ಅಂಗಡಿ, ಮಹಾನಂದ ಪಾಯಗೊಂಡ, ಸುಮಂಗಲಾ ಮನಗೊಂಡ, ಗೀತಾ ಹಿರೇಮಠ, ರಾಜೇಶ್ವರಿ ನ್ಯಾಮಗೌಡ, ಶಾಂತಾ ನ್ಯಾಮಗೌಡ, ಮಹಾದೇವ ಕಂಕಾಳೆ, ಬಸವರಾಜ ಕಲಶೆಟ್ಟಿ ಇತರರು ಇದ್ದರು.
  ಸಾನಿಯಾ ಹುನಗುಂದ ಭರತನಾಟ್ಯ, ಬಾಲಕಿ ಪ್ರಣತಿ ರೇವತಗಾಂವ ನೃತ್ಯ ಪ್ರದರ್ಶನ ನೀಡಿದರು. ಎಸ್.ವೈ. ಪಾಟೀಲ, ಬಿಆರ್‌ಪಿ ದಾನಮ್ಮ ಪಂಚಕಟ್ಟಿಮಠ ನಿರೂಪಿಸಿದರು. ಓಲೆಮಠದ ಆನಂದ ದೇವರು ಶ್ರೀಗಳು ಶರಣು ಸಮರ್ಪಿಸಿದರು.
WhatsApp Group Join Now
Telegram Group Join Now
Share This Article