ಅಗ್ನಿ ಶಾಮಕ ದಿನಾಚರಣೆ

Pratibha Boi
ಅಗ್ನಿ ಶಾಮಕ ದಿನಾಚರಣೆ
WhatsApp Group Join Now
Telegram Group Join Now

ಇಂಡಿ : ಆಕಸ್ಮಿಕ ಬೆಂಕಿ ತಗುಲಿದರೆ ಅದನ್ನು ತಡೆಯುವದು ಅಗ್ನಿ ಶಾಮಕ ಇಲಾಖೆಯ ಕರ್ತವ್ಯ ಕಾರಣ ಸಾರ್ವಜನಿಕರು ಅಂತಹ ಸಮಯದಲ್ಲಿ ೧೦೧ ಕ್ಕೆ ಫೋನು ಮೂಲಕ ಕರೆ ಮಾಡಬೇಕು ಎಂದು ಅಗ್ನಿ ಶಾಮಕ ಇಲಾಖೆಯ ಅಧಿಕಾರಿ ದೇವದಾನಮ್ಮ ಹೇಳಿದರು.

ನಗರದ ಅಗ್ನಿ ಶಾಮಕ ಇಲಾಖೆಯಲ್ಲಿ ನಡೆದ ಅಗ್ನಿ ಶಾಮಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನೆಗಳಿಗೆ ಹುಲ್ಲಿನ ಮದುಗಳಿಗೆ ಮರದ ರಾಶಿಗೆ ಬೆಂಕಿ ಬಿದ್ದಾಗ ಸಾಕಷ್ಟು ಮರಳು ನೀರನ್ನು ಸುರಿವಿರಿ. ಸೀಮೆ ಎಣ್ಣೆ ಪೆಟ್ರೋಲ ಅಥವಾ ಇತರೆ ಎಣ್ಣೆ ಪದಾರ್ಥಗಳಿಗೆ ಬೆಂಕಿ ಬಿದ್ದಾಗ ತಗುಲಿದಾಗ ನೀರನ್ನು ಸುರಿಯಬೇಡಿ ನೀರು ಭಾರವಾಗಿರುವದರಿಂದ ಬೆಂಕಿಯು ಬೇರೆ ಕಡೆಗೆ ಹರಡುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಮರಳನ್ನು ಬಳಸಿ. ವಿದ್ಯುತ್ ಒಲೆಗಳಲ್ಲಿ ಕೆಲಸ ಮಾಡುವಾಗ ಮರದ ಹಲಗೆ ಮೇಲೆ ನಿಂತು ಕೆಲಸ ಮಾಡಬೇಕು ವಿದ್ಯುತ ಬೆಂಕಿ ತಗುಲಿದಾಗ ಬೇಗನೆ ಮೇನ್ ಸ್ವೀಚ್ ಆಫ್ ಮಾಡಬೇಕು.ನಂತರ ಬೆಂಕಿ ಆರಿಸಲು ಮರಳು ಅಥವಾ ಮಣ್ಣನ್ನು ಬಳಸಿ, ಮಷಿನರಿ ಯಂತ್ರದ ಸಾಮಾನುಗಳನ್ನು ಕಾರು ಇಂಜಿನಿಗೆ ಬೆಂಕಿ ತಗುಲಿದಾಗ ನೀರನ್ನು ಸುರಿಯಬೇಡಿ ಬದಲಾಗಿ ಮರಳು ಮಣ್ಣು ಬಳಸಿ ಎಂದು ವಿವಿಧ ಪ್ರಕಾರಗಳನ್ನು ವಿವರಿಸಿದರು.
ಅಗ್ನಿಶಾಮಕ ಸಿಬ್ಬಂದಿ ಸೇವಾ ನಿರತರಿದ್ದಾಗ ಪ್ರಾಣ ತ್ಯಾಗ ಮಾಡಿದ ಸ್ಮರಣಾರ್ಥ ತಿಳುವಳಿಕೆ ಮೂಡಿಸುವದು ಉದ್ದೇಶವಾಗಿದೆ ಎಂದರು.
ಧರೆಪ್ಪ ಪೂಜಾರಿ, ಸಂತೋಷ ಪೂಜಾರಿ ರಿಯಾಜ ಯಾದಗಿರಿ ಬಬ್ಲು ಮಾಣಿಕ ಬಸವರಾಜ ನಾವಿ ಅನಿಲ್ ಚವ್ಹಾಣ ಮತ್ತಿತರಿದ್ದರು.
ಫೋಟೊ ಕ್ಯಾಫ್ಸನ್ ೧೭ ಇಂಡಿ ೦೩ : ಇಂಡಿ ನಗರದ ಅಗ್ನಿ ಶಾಮಕ ಇಲಾಖೆಯಲ್ಲಿ ನಡೆದ ಅಗ್ನಿ ಶಮಕ ದಿನಾಚರಣೆಯಲ್ಲಿ ದೇವದಾನಮ್ಮ ಮಾತನಾಡಿದರು.

 

 

WhatsApp Group Join Now
Telegram Group Join Now
Share This Article