ಮಹಾಲಿಂಗಪುರ: ಸ್ಥಳೀಯ ಬುದ್ನಿ ಪಿಡಿ ಬಡಾವಣೆಯ ೭೦೦ ವ?ಕ್ಕೂ ಅಧಿಕ ಇತಿಹಾಸವಿರುವ ಐತಿಹಾಸಿಕ ವಿಠ್ಠಲ ರುಕ್ಮಿಣಿ ಮಹಾ ರಥೋತ್ಸವ ಮಂಗಳವಾರ ಸಂಜೆ ೭ ಅದ್ದೂರಿಯಾಗಿ ನೆರವೇರಿತು. ಪಟ್ಟಣ ಮತ್ತು ಸುತ್ತಮುತ್ತಲಿನ ಸದ್ಭಕ್ತರು ಶ್ರೀ ಕೃ? ರಥೋತ್ಸವಕ್ಕೆ ಬೆಂಡು, ಬೆತ್ತಾಸ ಹಾರಿಸಿ ಭಕ್ತಿ ಮೆರೆದರು, ಭವ್ಯರಥೋತ್ಸವ, ಉಚ್ಚಾಯಿ, ಕಂಡ್ಯಾಳ ಬಾಸಿಂಗ, ಡೊಳ್ಳುಕುಣಿತ ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳ ಪ್ರದರ್ಶನ ಗಮನ ಸೆಳೆಯಿತು. ಮಧ್ಯರಾತ್ರಿಯವರೆಗೆ ರಥೋತ್ಸವ ಜರುಗಿ ಮೂಲ ಸ್ಥಾನಕ್ಕೆ ಮರಳಿತು. ಸಾವಿರಾರು ಭಕ್ತರು ಸಂಜೆಯಿಂದ ಜರುಗಿದ ಮಹಾಪ್ರಸಾದ ಸೇವಿಸಿದರು. ಮೊದಲ ಬಾರಿ ನಿರಂತರ ಆರು ದಿನಗಳವರೆಗೆ ಜರುಗಿದ ಜಾತ್ರೋತ್ಸವ ಮತ್ತು ರಥೋತ್ಸವ ಕಾರ್ಯಕ್ರಮ ಬುಧವಾರ ಸಂಜೆ ಕಳಸ ಇಳಿಸಿ ಮಹಾಪ್ರಸಾದೊಂದಿಗೆ ಮುಕ್ತಾಯವಾಯಿತು. ನೂತನವಾಗಿ ನಿರ್ಮಿಸಿರುವ ಉಚ್ಚಾಯಿ, ಈ ಬಾರಿ ನೂತನವಾಗಿ ಹಮ್ಮಿಕೊಂಡ ರೊಟ್ಟಿ ಬುತ್ತಿ ಮೆರವಣಿಗೆ ಗಮನ ಸೆಳೆದವು.
ಜಾತ್ರಾ ಕಮಿಟಿ ಅಧ್ಯಕ್ಷ ಕೃ?ಗೌಡ ಪಾಟೀಲ, ಉಪಾಧ್ಯಕ್ಷ ಮಹಾಲಿಂಗಪ್ಪಗೌಡ ಪಾಟೀಲ, ಯಲ್ಲನಗೌಡ ಪಾಟೀಲ,ಮಹಾಲಿಂಗಪ್ಪ ತಟ್ಟಿಮನಿ, ಶಂಕರಗೌಡ ಪಾಟೀಲ, ಸುನಿಲಗೌಡ ಪಾಟೀಲ, ವಿಜುಗೌಡ ಪಾಟೀಲ, ಲಕ್ಷ್ಮಣ ಮಾಂಗ ರಥೋತ್ಸವಕ್ಕೆ ಚಾಲನೆ ನೀಡಿದರು.
ಕಮಿಟಿ ಸಹ ಕಾರ್ಯದರ್ಶಿ ರಾಜು ಮುದುಕಪ್ಪಗೋಳ, ಖಜಾಂಚಿ ಸದಾಶಿವ ಶೇಗುಣಸಿ, ಸದಸ್ಯರಾದ ಶ್ರೀಮಂತ ಒಂಟಗೋಡಿ, ವಿಠ್ಠಲಗೌಡ ಪಾಟೀಲ, ಕುಮಾರ ಪವಾರ, ಮಹಾಲಿಂಗ ಪಾಟೀಲ, ನಾರಾಯಣಗೌಡ ಪಾಟೀಲ, ಅಪ್ಪಸಾಬ ನಾಲಬಂದ, ಶ್ರೀಶೈಲ ಮಠಪತಿ, ವಿಠ್ಠಲ ಮೇಟಿ, ಸಿದ್ದಪ್ಪ ಮಿರ್ಜಿ, ಬೇಬವ್ವ ಯಾದವಾಡ ಇತರರಿದ್ದರು.