ಮಹಾಲಿಂಗಪುರ: ’ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ’ ಅಂಗವಾಗಿ ಬುಧವಾರ ಮುಂಜಾನೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ ನಡೆಯಿತು.
ಜಿಲ್ಲಾ ಆರೋಗ್ಯ ಕೇಂದ್ರ, ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ,ಡಾ.ವಿ.ಪಿ.ಕನಕರೆಡ್ಡಿ ಮೇಮೋರಿಯಲ್ ರಕ್ತ ಸಂಗ್ರಹ ಕೇಂದ್ರ ಮತ್ತು ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಗ್ರೀನ್ ಬೇಸಿನ್ ಸಹಯೋಗದೊಂದಿಗೆ ಈ ಕಾರ್ಯಕ್ರಮ ನೆರವೇರಿತು.
ಈ ಶಿಬಿರಕ್ಕೆ ತೇರದಾಳ ಶಾಸಕರಾದ ಸಿದ್ದು ಸವದಿ ದೀಪ ಬೆಳಗಿಸಿ ಚಾಲನೆ ನೀಡಿದರು.ಈ ಸಮಯದಲ್ಲಿ ಮಾತನಾಡಿದ ಅವರು, ಸಮಯಕ್ಕೆ ರಕ್ತ ಸಿಗದೆ ಅನೇಕರು ಜೀವ ಕಳೆದುಕೊಂಡಿದ್ದಾರೆ. ಶಿಬಿರದ ಉದ್ದೇಶ ಸಂಕ?ದಲ್ಲಿರುವ ರೋಗಿಗಳಿಗೆ ಸಮಯಕ್ಕೆ ರಕ್ತ ದೊರಕಿ ಅವರ ಪ್ರಾಣ ಉಳಿಸುವುದಾಗಿದೆ.
ಆದ್ದರಿಂದ ಈ ರಕ್ತ ಸಂಗ್ರಹದ ದುರುಪಯೋಗ ಪಡಿಸಿಕೊಂಡು ವ್ಯವಹಾರ ರೀತಿ ವರ್ತಿಸಬಾರದೆಂದು ಬ್ಲಡ್ ಬ್ಯಾಂಕ್ ಸಿಬ್ಬಂದಿಗಳಿಗೆ ಕಿವಿ ಮಾತು ಹೇಳಿ, ಶಿಬಿರದಲ್ಲಿ ಭಾಗಿಯಾದ ಲಯನ್ಸ್ ಕ್ಲಬ್ ಸದಸ್ಯರು ಮತ್ತು ಇನ್ನಿತರರಿಗೆ ಅಭಿನಂದನೆ ಸಲ್ಲಿಸಿದರು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಸಿ.ಎಂ.ವಜ್ಜರಮಟ್ಟಿ ಪ್ರಾಸ್ತಾವಿಕ ಭಾ?ಣ ಮಾಡಿದರು.ಈ ಶಿಬಿರದಲ್ಲಿ ೪೦ ಕ್ಕೂ ಹೆಚ್ಚು ಜನರು ರಕ್ತದಾನದಲ್ಲಿ ಪಾಲ್ಗೊಂಡರು.ಈ ಸಂದರ್ಭದಲ್ಲಿ ಭಾಜಪ ಪಕ್ಷದ ನಾಯಕರಾದ ಶಂಕರಗೌಡ ಪಾಟೀಲ,ಈರಪ್ಪ ದಿನ್ನಿಮನಿ, ಶಿವಾನಂದ ಅಂಗಡಿ, ಬಸವರಾಜ ಯರಗಟ್ಟಿ,ರಾಜು ತಾಳಿಕೋಟಿ, ಪ್ರಕಾಶ ತಾಳಿಕೋಟಿ, ಹುಚ್ಚೇಶ ವಡ್ಡರ, ಮಹಾಂತೇಶ ತಿರಕನ್ನವರ ಮತ್ತು ಪಟ್ಟಣದ ಎರಡೂ ಲಯನ್ಸ್ ಕ್ಲಬ್ ಸದಸ್ಯರು ಮತ್ತು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಇದ್ದರು.