ರಾಮದುರ್ಗ: ತಾಲೂಕಾ ಪ್ರದೇಶ ಕುರುಬರ ಸಂಘ, ಹಾಲುಮತ ಮಹಾಸಭಾ ಮತ್ತು ತಾಲೂಕು ಕುರುಬ ನೌಕರರ ಸಂಘದ ನೇತೃತ್ವದಲ್ಲಿ ನ.೨೭ ರಂದು ಪಟ್ಟಣದಲ್ಲಿ ಸಂತಶ್ರೇಷ್ಠ ಶ್ರೀಭಕ್ತ ಕನಕದಾಸರ ೫೩೯ನೇ ಜಯಂತ್ಯೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕಾಧ್ಯಕ್ಷ ಪಡಿಯಪ್ಪ ಕ್ವಾರಿ ಹೇಳಿದರು.
ಸ್ಥಳೀಯ ಪ್ರೆಸ್ಕ್ಲಬ್ನಲ್ಲಿ ಬುಧವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೧೦ ಗಂಟೆಗೆ ಪಟ್ಟಣದ ಹೊರ ವಲಯದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮೆರವಣೆಗೆ ಪ್ರಾರಂಭಗೊಂಡು ಪಟ್ಟಣದ ಹುತಾತ್ಮ ವೃತ್ತದಿಂದ ಜುನಿಪೇಠ , ನವಿಪೇಠ ಮಾರ್ಗ ಒಳಗೊಂಡು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಟ್ಟಣದ ಹೊರವಲಯದಲ್ಲಿರುವ ಪ್ರಗತಿ ಸಭಾ ಭವನಕ್ಕೆ ಆಗಮಿಸಿ ಸಮಾವೇಶಗೊಳ್ಳಿದೆ.
ಯಾದವಾಡ ಮಾಳಿಂಗರಾಯ ಆಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸುವರು. ಶಾಸಕ ಅಶೋಕ ಪಟ್ಟಣ ಅವರು ಸಮಾರಂಭ ಉದ್ಘಾಟಿಸುವರು. ಪ್ರದೇಶ ಕುರುಬರ ಸಂಘದ ತಾಲೂಕು ಅಧ್ಯಕ್ಷ ಪಡಿಯಪ್ಪ ಕ್ವಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಹಾರೂಗೇರಿಯ ಸಾಹಿತಿ, ಜನಪದ ಕಲಾವಿದ ಸಿದ್ರಾಮ ಶಿವಮಲ್ಲ ಶೇಗುಣಸಿ ಅವರು ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ತಾಲೂಕಿನ ಇನ್ನಿತರ ಮಠಾಧೀಶರು, ಮುಖ್ಯ ಅತಿಥಿಗಳಾಗಿ ಕುರುಬ ಸಮಾಜದ ಅನೇಕ ಮುಖಂಡರು ಮತ್ತಿತರರು ಪಾಲ್ಗೊಳ್ಳಿದ್ದಾರೆ. ಅಲ್ಲದೇ ಸಮುದಾಯದ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರದೇಶ ಕುರುಬರ ಸಂಘದ ನಿರ್ದೇಶಕ ಅಶೋಕ ಮೆಟಗುಡ್ಡ, ಮುಖಂಡರಾದ ಬಸವರಾಜ ಸೋಮಗೊಂಡ, ಕೆಂಪಣ್ಣ ಕ್ವಾರಿ, ಈರಣ್ಣ ಕಾಮಣ್ಣವರ, ಸಿದ್ದಪ್ಪ ಮಾಕನ್ನವರ, ಬಾಳನಗೌಡ ಬಾಗೋಜಿ, ನಾಗೇಶ ಚಂದರಗಿ, ಕರಿಯಪ್ಪ ಕ್ವಾರಿ, ಎಫ್.ಸಿ. ಕೊಳ್ಳಾರ, ಹಣಮಂತ ಕಿತ್ತೂರ, ದ್ಯಾಮಣ್ಣ ಹಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.