ಕಾಗವಾಡ :ರಕ್ತದಾನ ಜೀವ ಉಳಿಸುವ ಮಹಾದಾನ ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಲಿ – ವೈದ್ಯಾಧಿಕಾರಿ ಶ್ರೀರಂಗ ಕೋಳಿ
ಕಾಗವಾಡ: ರಕ್ತದಾನವು ಜೀವ ಉಳಿಸುವ ಮಹಾದಾನವಾಗಿದ್ದು, ಪ್ರತಿಯೊಬ್ಬ ಆರೋಗ್ಯವಂತ ಯುವಕರು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಯಲ್ಲಿ ಕೈಜೋಡಿಸಬೇಕು ಎಂದು ವೈದ್ಯಾಧಿಕಾರಿ ಶ್ರೀರಂಗ ಕೋಳಿ ಹೇಳಿದರು.
ತಾಲೂಕಾ ಸಾರ್ವಜನಿಕ ಆಸ್ಪತ್ರೆ ಕಾಗವಾಡ ಹಾಗೂ ಅಥಣಿ ರಕ್ತ ಕೇಂದ್ರ ಅಥಣಿ ಇವರ ಸಂಯುಕ್ತಾಶ್ರಯದಲ್ಲಿ ನವೆಂಬರ್ 25ರಂದು ಕಾಗವಾಡದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಮುಖಂಡರಾದ ರಮೇಶ ಚೌಗುಲೆ ಅವರು ಸ್ವತಃ ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಕ್ತದಾನವು ಅತ್ಯಂತ ಶ್ರೇಷ್ಠವಾದ ಸಾಮಾಜಿಕ ಸೇವೆಯಾಗಿದ್ದು, ನಾವು ನೀಡುವ ರಕ್ತವು ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆ ಹಾಗೂ ವಿವಿಧ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಜೀವ ಉಳಿಸಲು ಸಹಕಾರಿಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನದ ಮಹತ್ವವನ್ನು ಅರಿತು ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ವೈದ್ಯಾಧಿಕಾರಿ ಶ್ರೀರಂಗ ಕೋಳಿ ಮಾತನಾಡಿ, ತುರ್ತು ಸಂದರ್ಭಗಳಲ್ಲಿ ರಕ್ತದ ಕೊರತೆಯಿಂದ ಯಾವುದೇ ರೋಗಿಯ ಜೀವಕ್ಕೆ ಅಪಾಯ ಉಂಟಾಗಬಾರದು. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಆರೋಗ್ಯವಂತ ವ್ಯಕ್ತಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವುದೇ ರಕ್ತದ ಅವಶ್ಯಕತೆ ನೀಗಿಸುವ ಪ್ರಮುಖ ಮಾರ್ಗವಾಗಿದೆ. ಯುವಜನತೆ ರಕ್ತದಾನದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಿಬಿರದಲ್ಲಿ ರಕ್ತದಾನ ಮಾಡಿದ ದಾನಿಗಳಿಗೆ ಕಾಕಾ ಪಾಟೀಲ ಹಾಗೂ ನಾಥಗೌಡ ಪಾಟೀಲ. ಅವರು ಪ್ರಮಾಣಪತ್ರಗಳನ್ನು ವಿತರಿಸಿ ಅಭಿನಂದಿಸಿದರು. ರಕ್ತದಾನಿಗಳ ಸೇವಾ ಮನೋಭಾವವನ್ನು ಶ್ಲಾಘಿಸಿದ ಅವರು, ಇತರರೂ ಇಂತಹ ಪುಣ್ಯದ ಕಾರ್ಯಕ್ಕೆ ಮುಂದಾಗುವಂತೆ ಪ್ರೇರೇಪಿಸಿದರು.
ಶಿಬಿರದಲ್ಲಿ ಆರೋಗ್ಯ ಸಿಬ್ಬಂದಿ ಹಾಗೂ ಅಥಣಿ ರಕ್ತ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದು, ರಕ್ತದಾನಿಗಳ ಆರೋಗ್ಯ ತಪಾಸಣೆ ಮತ್ತು ರಕ್ತ ಸಂಗ್ರಹ ಪ್ರಕ್ರಿಯೆಗೆ ಅಗತ್ಯ ಸಹಕಾರ ನೀಡಿದರು. ಇ ವೇಳೆ ಕಾರ್ಯಕ್ರಮ ನಿರೋಪಣೆಮಾಡಿದ. ಗವೀಶ ರಾಮದುರ್ಗ.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಪ್ರಸನ್ನ ಕಲ್ಯಾಣಶೆಟ್ಟಿ,ಡಾ.ಸೂರಜ ಹೋನಕಾಂಬಳೆ,ಡಾ.ಸೌಮ್ಯ ಪಾಟೀಲ, ಮೀನಾಕ್ಷಿ ಬಟಕಿ, ಜಾವೇದ ಮುಂಜಾವರ ಹನುಮಂತ ಕಾಂಬಳೆ, ರವಿ ಸಾಲೋಟಗೆ,ಗೋವಿಂದ ಪೂಜಾರಿ ವೀರೇಂದ್ರ ಚೌಗಲೆ, ರಿಯಾಜ ಹಕಿಮ್ಮ್, ಶಿವಪ್ರಸಾದ ಪಾಟೀಲ, ರಿತೇಶ ಭೋಜಗಾರ,ಶಾಂತಾ ಕುಮಟ್ಟಳ್ಳಿ, ವೀಣಾ ಮುಲಿಮಣಿ, ಸಾವಿತ್ರಿ ಬಿರಾದರ,ವಿಶಾಲಕ್ಹ್ಮೀ ಮಾನಕರ, ಚಂದ್ರಕಲಾ ಲಚ್ಯಾಣ,ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ, ರಕ್ತದಾನಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.