ಸಂಕೇಶ್ವರ : ಸಮೀಪದ ಸೋಲಾಪುರ ಗ್ರಾಮದ ನಿವೃತ್ತ ಪ್ರಧಾನ ಗುರುಗಳಾದ ಶಿವಲಿಂಗ ಸಿದ್ದಪ್ಪ ಖವನೆ ಅವರ ಧರ್ಮ ಪತ್ನಿ ವಿಜಯಲಕ್ಷ್ಮಿ ನರಸಪ್ಪ ಕಲ್ಲೋಳಿ ಅವರು ಕಳೆದ 30 ವರ್ಷಗಳ ಕಾಲ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಸೋಲಾಪುರ ಗ್ರಾಮದ ತುಕ್ಕಾಯಿವಾಡಿಯ ಕೆ. ಎಚ. ಪಿ. ಎಸ. ಪ್ರಾಥಮಿಕ ಶಾಲೆಯಲ್ಲಿ ವಯೋ ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಗ್ರಾಮದ ಮಹಾದೇವ ಮಂದಿರದ ಆವರಣದಲ್ಲಿ ಜರುಗಿದ ಬೀಳ್ಕೊಡುಗೆ ಹಾಗೂ ಸತ್ಕಾರ ಸಮಾರಂಭದ ದಿವ್ಯ ಸಾನಿಧ್ಯವನ್ನು ಕಮತ್ಯಾನಟ್ಟಿಯ ಪ್ರಭುಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯರು ಮತ್ತು ಬೈಲಹೊಂಗಲದ ನಯಾನಗರ ಮಠದ ಅಭಿನವ ಸಿದ್ದಲಿಂಗ ಸ್ವಾಮಿಗಳು ವಹಿಸಿದ್ದರು.
ಪೂಜ್ಯರಿಂದ ಹಾಗೂ ಖವನೆ ದಂಪತಿಗಳಿಂದ ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು . ಬಳಿಕ ಖವನೆ ದಂಪತಿಗಳಿಂದ ವೇದಿಕೆ ಮೇಲೆ ಇರುವ ಪೂಜ್ಯರಿಗೆ ಗುರುವಂದನಾ ಕಾರ್ಯಕ್ರಮವು ಹಿರಿಯರ ಉಪಸ್ಥಿತಿಯಲ್ಲಿ ಭಕ್ತಿ ಪೂರ್ವಕವಾಗಿ ನೆರವೇರಿಸಲಾಯಿತು.
ಬಳಿಕ ನಯಾನಗರ ಮಠದ ಶ್ರೀಗಳು ಮಾತನಾಡಿ - ಶಿಕ್ಷಣದಲ್ಲಿ , ಪಾಠ ಮಾಡುವುದರಲ್ಲಿ ಮತ್ತು ದೇವರ ಭಕ್ತಿಯಲ್ಲಿ ಖವನೆ ದಂಪತಿಗಳು ಅಂದರೆ ಬಹಳ ಸರಳ ಸಜ್ಜನ ಸಂಸ್ಕಾರಿ ಜೀವಿಗಳು ಎಂದರು. ಕಮತ್ಯಾನಟ್ಟಿ ಪೂಜ್ಯರು ಮಾತನಾಡಿ - ಸಾವಿರಾರು ಜನ ವಿದ್ಯಾರ್ಥಿಗಳ ಜೀವನದಲ್ಲಿ ಜ್ಞಾನದ ಬೆಳಕನ್ನ ಛೆಲ್ಲಿದ ಸ್ರೇಯಸ್ಸು ಖವನೆ ದಂಪತಿಗಳಿಗೆ ಸಲ್ಲುತ್ತದೆ ಎಂದರು.
ಈ ವೇಳೆ ಖವನೆ ದಂಪತಿಗಳಿಗೆ ಸತ್ಕಾರ ನೆರೆವೆರಿಸುವುದಕ್ಕೆ ಗ್ರಾಮದ ಹಿರಿಯರಾದ ಶಶಿರಾಜ ಪಾಟೀಲ , ಮಹಾದೇವ ಕ್ಷಿರಸಾಗರ , ಅಶೋಕ ಮಸ್ತಿ , ರಾಜು ಕೋರಿ , ಅನಿಲ ಖಾನಾಯಿ , ವಿಜಯ ತೋಡಕರ , ಆಶೀಮ ಮದಾರಖಾನ , ರಾಮಚಂದ್ರ ಗೋಲಭಾವಿ , ಮಹಾದೇವಿ ಗೋಲಭಾವಿ , ಸಂದೀಪ ಗೋಲಭಾವಿ , ನವೀನ ಖವನೆ , ಪ್ರವೀಣ ಖವನೆ , ಅನಿತಾ ಖವನೆ ಸೇರಿ ಕನ್ನಡ ಪರ ಸಂಘಟನೆ , ರೈತ ಸಂಘಟನೆ , ಶಿಕ್ಷಕ ವೃಂದ ಸೇರಿದಂತೆ ಗ್ರಾಮದ ಗುರುಹಿರಿಯರು ಹಾಜರಿದ್ದರು.