ರನ್ನ ಬೆಳಗಲಿ: ಕನ್ನಡದ ಮಹಾಕವಿ ರನ್ನರು ಗತಿಸಿ ಸಾವಿರ ವ?ಗಳಾದರೂ ಅವರ ಸಾಹಿತ್ಯ ಇಂದಿಗೂ ಅಜರಾಮರವಾಗಿದೆ ಎಂದು ಮಲ್ಲಿಕಾರ್ಜುನ ಅರಬಿ ಹೇಳಿದರು.ಶ್ರೀ ಸಿದ್ದಾರೂಢ ಸರ್ಕಾರಿ ಪ್ರೌಢಶಾಲೆ ರನ್ನಬೆಳಗಲಿಯಲ್ಲಿ ಆಯೋಜಿಸಿದ್ದ ’ತಿಂಗಳಿಗೊಂದು ರನ್ನ’ ಉಪನ್ಯಾಸ ಮಾಲಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ರನ್ನನ ಜೀವನಚರಿತ್ರೆ ಹಾಗೂ ಗದಾಯುದ್ಧ ಕುರಿತು ಅವರು ಮಾತನಾಡಿದರು.ರನ್ನನ ಸಾಹಸಭೀಮ ವಿಜಯಂ ಹತ್ತು ಆಶ್ವಾಸಗಳಲ್ಲಿ ಹರಡಿಕೊಂಡಿರುವ ವೀರರಸ ಪ್ರಧಾನ ಕೃತಿಯಾಗಿದ್ದು, ಭೀಮ-ದುರ್ಯೋಧನರ ಘನಘೋರ ಯುದ್ಧ ಹಾಗೂ ದುರ್ಯೋಧನನ ವಿಲಾಪವನ್ನು ಮನಮುಟ್ಟುವಂತೆ ವಿವರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರ ಮುಖ್ಯ ಗುರುಮಾತೆ ಎಸ್.ಎಸ್. ಉದಪುಡಿ ವಹಿಸಿದ್ದರು. ಎಂ.ಎ. ಮುಗಳಖೋಡ, ಎಂ.ಬಿ. ಮುರಗೋಡ, ಪಿ.ಕೆ. ಪವಾರ, ಅಕ್ಷತಾ ಕುಲಗೋಡ, ಬಿ.ಎಂ. ಹವಾಲ್ದಾರ, ಆನಂದ ಹೊಸಟ್ಟಿ, ಅನೀಲ ನಡವಿನಮನಿ, ಮಂಜುನಾಥ ಪೂಜಾರಿ ಹಾಗೂ ರವಿ ಹಿರೇಕಲಮಠ ಉಪಸ್ಥಿತರಿದ್ದರು. ಬಿ.ಪಿ. ಚೋಪಡೆ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನು ನೆರವೇರಿಸಿದರು.