LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bellary

*ಸನ್ನಿಧಿಯಲ್ಲಿ  ಸಾಂಸ್ಕೃತಿಕ ಕಾರ್ಯಕ್ರಮ 2026* 

ಸಂಡೂರು : 27: ಜಿಲ್ಲೆ ಸಂಡೂರು ತಾಲೂಕಿನ ಎಂ.ಬಸಾಪುರ ಗ್ರಾಮದಲ್ಲಿ ಶ್ರೀ ಸುಗ್ಲಮ್ಮ ದೇವಿ ಮೂರ್ತಿ ಪ್ರಾಣಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಹಾಗೂ ಶ್ರೀ ದುರ್ಗಮ್ಮ ದೇವಿ ಭವ್ಯ ಗೋಪುರ ಕಳಸ ಪ್ರತಿಷ್ಠಾಪನೆಯ ಪ್ರಯುಕ್ತ  ರಂಗನೇಸರ ಸಾಂಸ್ಕೃತಿಕ ಕಲಾ ಸಂಘದಿಂದ *ಸನ್ನಿಧಿ ಸಂಸ್ಕೃತಿಕ ಕಾರ್ಯಕ್ರಮ* ಗ್ರಾಮದಲ್ಲಿ ನಡೆದವು.
ಹಳ್ಳಿಗಳಲ್ಲಿ ಹಿಂದಿನ ಕಾಲದಲ್ಲಿ ಬಯಲಾಟ ಮತ್ತು ಸಾಮಾಜಿಕ ನಾಟಕ ನಡೆಯುತ್ತಿದ್ದವು. ಆದರೆ ಇಂದಿನ ಜನಗಳು ಅದನ್ನೇ ಮರೆತಿದ್ದಾರೆ. ಕಾಲಕಾಲಕ್ಕೆ ಮೊದಲು ಮಳೆ ಬೆಳೆ ಚನಾಗಿತ್ತು. ವರ್ಷಕ್ಕೆ ಒಂದಾದರೂ ಬಯಲಾಟ ನೋಡುತ್ತಿದ್ದೆವು. ಈಗ ಅದು ಕೂಡ ಕಾಣಲಾಗಿದೆ. ಹಳ್ಳಿಗಳ ಜನರ ಮನಸ್ಸು ಪ್ರೀತಿ, ವಿಶ್ವಾಸ,ನಂಬಿಕೆ ಮೇಲೆ ಗ್ರಾಮೀಣ ಜನರು ಒಳಗೊಂಡಿರುತ್ತಾರೆ. ಜನಪದ ಗೀತೆಗಳು,ಕುಣಿತ ಇವೆಲ್ಲವೂ ಗ್ರಾಮೀಣ ಜನತೆಯ ಮನರಂಜನೆಗಳು  ಕಾಣುತ್ತಿದ್ದರು. ನಮ್ಮ ಗ್ರಾಮದ ದೇವತೆಗಳ ಭವ್ಯ ಗೋಪುರ ಮತ್ತು ಪ್ರಾಣ ಪ್ರತಿಷ್ಠಾಪನೆಗಳ ನಿಮಿತ್ತ ಅದ್ಬುತ ಕಾರ್ಯಕ್ರಮವನ್ನು ಚಂದ್ರು ಅವರು ನಮ್ಮೂರಿನಲ್ಲಿ ಸಂಘಟನೆ ಮಾಡಿದ್ದಾರೆ ಎಂದು ಹೊಸಗೇರಪ್ಪರವರು ಮಾಜಿ ತಾಲೂಕು ಪಂಚಾಯ್ತಿ ಸದಸ್ಯರು ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಅನೇಕ ಕಲೆಗಳು ಇಂದಿಗೂ ಜೀವಂತವಾಗಿವೆ. ಏಕೆಂದರೆ ಗ್ರಾಮೀಣ ಭಾಗದಲ್ಲಿ  ಪ್ರಾಚೀನ ಕಾಲದಿಂದಲೂ ದೇವರ ಆಚರಣೆಯಿಂದಲೇ ಎಲ್ಲಾ ಕಲೆಗಳು ಹುಟ್ಟಿಕೊಂಡಿದ್ದು, ಸಂಗೀತ, ನೃತ್ಯ, ನಾಟಕ ಆಚರಣೆಗಳು  ಇಂದಿಗೂ ಗ್ರಾಮೀಣ ಭಾಗದಲ್ಲಿ ಜೀವಂತವಾಗಿದೆ. ಮತ್ತು ಅತಿ ಹೆಚ್ಚು ಕಲೆಗಳನ್ನು ಬೆಳೆಸುವ ಮತ್ತು ಪ್ರೋತ್ಸಾಹ ನೀಡುವುದು ಗ್ರಾಮೀಣ ಭಾಗದಲ್ಲಿಯೇ, ಅದಕ್ಕಾಗಿ ನಾವು ಮತ್ತು ನಮ್ಮ ಸಂಘ ಸಂಸ್ಥೆಗಳು  ಕಾರ್ಯಕ್ರಮಗಳನ್ನ  ಹಳ್ಳಿಗಳಲ್ಲಿಯೇ ಮಾಡಬೇಕಾಗಿದೆ, ಎಂದು ರಂಗ ನೇಸರ ಸಾಂಸ್ಕೃತಿಕ ಕಲಾ ಸಂಘದ ಕಾರ್ಯದರ್ಶಿ ಚಂದ್ರ ಶೇಖರ್ ಬಸಾಪುರ ಅವರು ತಿಳಿಸಿದರು.
 *ಸಾಂಸ್ಕೃತಿಕ ಕಾರ್ಯಕ್ರಮಗಳು* 
ಜಾನಪದ ಗೀತೆಗಳನ್ನ ಡಿ. ಜಿ. ತಿರುಮಲ ಯು.ರಾಜಾಪುರ. ತತ್ವಪದವನ್ನು ವೀರೇಶಪ್ಪ ಬಸಾಪುರ. ಸೂರ್ಯ ಕಲಾ ಟ್ರಸ್ಟ್  ಗುರುಗಳಾದ ಅಭಿಷೇಕ್ ವತಿಯಿಂದ ಜಾನಪದ ನೃತ್ಯ ಹಾಗೂ ಸಮೂಹ ನೃತ್ಯವನ್ನ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಾಮದ ಮುಖಂಡರಾದ ಹಾಗೂ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಬಿ.ಆರ್ . ತಿಪ್ಪೇಸ್ವಾಮಿ, ಕೆ. ಎಸ್. ಕೆಂಚಪ್ಪ, ಹುಚ್ಚಪ್ಪ, ರಾಮಣ್ಣ , ಗಾಂಧಿ ಬಸಣ್ಣ, ಹಾಗೂ ರಂಗ ನೇಸರ ಸಾಂಸ್ಕೃತಿಕ ಪದಾಧಿಕಾರಿಗಳಾದ ಶೀಲಪ್ಪ, ಬಿ. ಆರ್. ಸಿದ್ಧಪ್ಪ ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆವಿ.ಶ್ರೀ.ಕೃ. ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜತಾಳಿಕೋಟೆ ತಾಲೂಕು ಕೂಡ ಶೀಘ್ರ ಬರಪೀಡಿತ ಪಟ್ಟಿಗೆ : ಶಾಸಕ ನಾಡಗೌಡತೇರದಾಳ ಹಾಗೂ ರಬಕವಿ /ಬನಹಟ್ಟಿ ತಾಲೂಕುಗಳು ಬರಗಾಲ ಪಟ್ಟಿಗೆ, ಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ.ರೋಗಿಗಳಿಗೆ ಹಾಲುಹಣ್ಣು ವಿತರಿಸಿ ಬಿಜೆಪಿ ಕಾರ್ಯಕರ್ತರಿಂದ ’ಸೇವಾ ಸಂಕಲ್ಪಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಫಾರಂ-2 ಇ-ಖಾತಾ ಮಾಡಿಕೊಡಲು ಆಗ್ರಹಸೆ.20ರಂದು ಬಳ್ಳಾರಿಯಲ್ಲಿ ಹಿಂದೂ ಮಹಾ ಗಣಪತಿ ಭವ್ಯ ಶೋಭಾಯಾತ್ರೆಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ ಸಿಎಂ ಕನಸು; ಜನರಿಗೆ ತೊಂದರೆ ನೀಡಿದರೆ ಕ್ರಮ: ನಾರಾ ಭರತ್ ರೆಡ್ಡಿ