ವಿಜಯನಗರ: : ನಗರದ ಭಾರತೀಯ ಜನತಾ ಪಕ್ಷದ ಮಂಡಲದ ವತಿಯಿಂದ ವಾಲ್ಮೀಕಿ ನಿಗಮದ ಹಣದ ಭ್ರಷ್ಟಾಚಾರದ ರೂವಾರಿಯಾದ ಬಿ ನಾಗೇಂದ್ರ ಅವರ ವಿರುದ್ದ ಅನಿರ್ದಿಷ್ಟಕಾಲ ಪ್ರತಿಭಟನೆಯನ್ನು ನಡೆಸಲಾಯಿತು.
ಜಿಲ್ಲಾಧ್ಯಕ್ಷರಾದ ಸಂಜೀವ್ ರೆಡ್ಡಿ ಅವರು ಮಾತನಾಡುತ್ತಾ ಬಿ ನಾಗೇಂದ್ರ ಅವರು ವಾಲ್ಮೀಕಿ ನಿಗಮದ ಹಣವನ್ನು ಚುನಾವಣೆಗೆ ಬಳಸಿ ಕೊಂಡಿರುವುದು ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಕಪ್ಪು ಚುಕ್ಕೆಯಂತೆ. ಬಡವರಿಗೆ ಸಿಗಬೇಕಾದ ಮನೆಗಳು, ಯುವಕರಿಗೆ ಸಾಲ ಸೌಲಭ್ಯಗಳು, ಭೂ ರಹಿತ ರೈತರಿಗೆ ಭೂಮಿ ಕೊಡುವುದಕ್ಕೆ ಖರ್ಚಾಗ ಬೇಕಿದ್ದ ಹಣವು ತೆಲಂಗಾಣದ ಕಾಂಗ್ರೆಸ್ ಪಾರ್ಟಿ, ಬಟ್ಟೆ ಅಂಗಡಿ, ಬಂಗಾರದ ಅಂಗಡಿ,ಬಾರ್, ಬೇನಾಮಿ ಅಕೌಂಟ್ ಗಳಿಗೆ ಕೋಟ್ಯಾಂತರ ರೂಪಾಯಿಗಳನ್ನು ಕಳಿಸಿದ್ದಾರೆ. ವಾಲ್ಮೀಕಿ ಹಗರಣದ ಬಗ್ಗೆ ಬಿಜೆಪಿಯು ಧ್ವನಿ ಎತ್ತಿದಾಗ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು 89 ಕೋಟಿ ಹಗರಣವಾಗಿದೆ ಎಂದು ಸದನದಲ್ಲಿ ಒಪ್ಪಿಕೊಂಡಿರುತ್ತಾರೆ.
ಇದರಲ್ಲಿ ಹೈಕಮಾಂಡ್ ಪಾಲು ಸಹ ಇರುವುದರಿಂದ ಬಿ ನಾಗೇಂದ್ರ ಇವರನ್ನು ಡಿಕೆ ಶಿವಕುಮಾರ್ ಅವರ ಸಂಪುಟದಲ್ಲಿ ಸಚಿವರಾಗಿ ಮಾಡಿದ್ದಾರೆ. ಆದ್ದರಿಂದ ಭಾರತೀಯ ಜನತಾ ಪಕ್ಷವು ಇಂದಿನಿಂದ ಸದನದ ಒಳಗೆ ಹಾಗೂ ಹೊರಗೆ ಮತ್ತು ಪ್ರತಿ ಜಿಲ್ಲೆಯಲ್ಲೂ ಬಿ ನಾಗೇಂದ್ರ ಇವರನ್ನು ಮಂತ್ರಿ ಸ್ಥಾನದಿಂದ ವಜಗೊಳಿಸಿ ಅದೇ ಸಮುದಾಯದ ಬೇರೆ ನಾಯಕರಿಗೆ ಸಚಿವ ಸ್ಥಾನವನ್ನು ಕೊಡುವವರೆಗೂ ಹೋರಾಟವನ್ನು ನಡೆಸುತ್ತೇವೆ. ಬಿ ನಾಗೇಂದ್ರ ಇವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲೇಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಒಬಿಸಿ ಮೋರ್ಚಾದ ಉಪಾಧ್ಯಕ್ಷರಾದ ಅಯ್ಯಾಳಿ ತಿಮ್ಮಪ್ಪ, ರಾಜ್ಯ ಎಸ್ ಟಿ ಮೋರ್ಚಾದ ಸದಸ್ಯರಾದ ಕಸೆಟ್ಟಿ ಉಮಾಪತಿ, ಬಳ್ಳಾರಿ ಜಿಲ್ಲಾ ಸಹಪ್ರಭಾರಿಗಳಾದ ಚನ್ನಬಸವನಗೌಡ ಪಾಟೀಲ್, ಜಿಲ್ಲಾ ಉಪಾಧ್ಯಕ್ಷರಾದ ಸಂದೀಪ್ ಸಿಂಗ್, ಪ್ರಧಾನ ಕಾರ್ಯದರ್ಶಿಯಾದ ಕೆ ಎಸ್ ರಾಘವೇಂದ್ರ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಕಿಚಡಿ ಕೊಟ್ರೇಶ್, ಮಂಡಲ ಅಧ್ಯಕ್ಷರಾದ ಶಂಕರ್ ಮೇಟಿ, ಪ್ರಧಾನ ಕಾರ್ಯದರ್ಶಿಗಳಾದ ನಟರಾಜ್ ಹಾಗೂ ಮಧುರ ಚನ್ನ ಶಾಸ್ತ್ರಿ,
ನಗರಸಭಾ ಅಧ್ಯಕ್ಷರಾದ ರೂಪೇಶ್ ಕುಮಾರ್, ಉಪಾಧ್ಯಕ್ಷರಾದ ಜೀವರತ್ನಂ, ಮಾಜಿ ಹುಡಾ ಅಧ್ಯಕ್ಷ ಆರ್ ಕೊಟ್ರೇಶ್, ಜಗದೀಶ್ ಕಮಟಗಿ, ಜಗನ್ನಾಥ, ಗಂಡಿ ಬಸಣ್ಣ, ಬಸವರಾಜ್ ನಾಲತವಾಡ, ಸೋಮಶೇಖರ್, ಸೂಗೂರು ಚಿದಾನಂದ, ವಾಲ್ಮೀಕಿ ಸಂಘದ ಅಧ್ಯಕ್ಷರಾದ ಜಂಬಯ್ಯ , ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರಾದ ಉಮಾದೇವಿ, ಪೂರ್ಣಿಮಾ, ಲಲಿತ, ಅರ್ಪಿತ ಗೌಡ, ಅನುಪಮ, ಜಯಶ್ರೀ, ಕಮಲ ಸೇರಿದಂತೆ ಅನೇಕ ಮುಖಂಡರು, ಶಕ್ತಿಕೇಂದ್ರ, ಮಹಾ ಶಕ್ತಿ ಕೇಂದ್ರ, ಭಾಜಪ ಕಾರ್ಯಕರ್ತರು,
ಉಪಸ್ಥಿತರಿದ್ದರು.