LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bijapur

ಇಂಗಳಗಿ ಪಿಕೆಪಿಎಸ್ ಅಧ್ಯಕ್ಷರಾಗಿ ಉಮೇಶ ಚವ್ಹಾಣ್ ಭರ್ಜರಿ ಗೆಲುವು

ಇಂಡಿ: ತಾಲೂಕಿನ ಇಂಗಳಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ (ಪಿಕೆಪಿಎಸ್) ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಉಮೇಶ ಚವ್ಹಾಣ್ ಅವರು ೭ ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಪ್ರಭಾಕರ ವಾಲಿಕಾರ್ ಅವರು ೬ ಮತಗಳನ್ನು ಪಡೆದರು.
ಈ ಹಿಂದೆ ಅಧ್ಯಕ್ಷರಾಗಿದ್ದ ಪ್ರಭು ಹೊಸಮನಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಸಂಘದ ೧೨ ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಿದ್ದು, ಸಹಕಾರಿ ಸಂಘದ ಮೇಲ್ವಿಚಾರಕರಿಗೂ ಒಂದು ಮತದಾನದ ಹಕ್ಕು ಇತ್ತು. ಚುನಾವಣೆಯಲ್ಲಿ ಉಮೇಶ ಚವ್ಹಾಣ್ ಅವರ ಗೆಲುವಿನೊಂದಿಗೆ ಅಣ್ಣಪ್ಪ ಅಹಿರಸಂಗ್ ನೇತೃತ್ವದ ಬಣಕ್ಕೆ ಮಹತ್ವದ ಯಶಸ್ಸು ದೊರೆತಿದೆ. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬೆಂಬಲಿಗರು ಹಾಗೂ ಕಾರ್ಯಕರ್ತರಲ್ಲಿ ಸಂಭ್ರಮದ ವಾತಾವರಣ ಕಂಡುಬಂದಿತು.ನೂತನ ಅಧ್ಯಕ್ಷ ಉಮೇಶ ಚವ್ಹಾಣ್ ಅವರು ಪಿಕೆಪಿಎಸ್ ಮೂಲಕ ರೈತರಿಗೆ ಅಗತ್ಯವಾದ ಸಹಕಾರ ನೀಡುವುದು, ರೈತರಿಗೆ ಸಮಯಕ್ಕೆ ಸರಿಯಾಗಿ ಸಾಲ ಸೌಲಭ್ಯ ಹಾಗೂ ಕೃಷಿಗೆ ಸಂಬಂಧಿಸಿದ ಸೇವೆಗಳು ದೊರೆಯುವಂತೆ ನೋಡಿಕೊಳ್ಳುವುದು ಮತ್ತು ಸಂಘವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಉದ್ದೇಶ ಹೊಂದಿದ್ದಾರೆ. ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ಸಂಘದ ಸದಸ್ಯರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುವುದೇ ತಮ್ಮ ಪ್ರಮುಖ ಆದ್ಯತೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಅಣ್ಣಪ್ಪ ಅಹಿರಸಂಗ್ ಅವರು ಮಾತನಾಡಿ ಪಿಕೆಪಿಎಸ್ ರೈತರಿಗಾಗಿ ಇರುವ ಪ್ರಮುಖ ಸಹಕಾರಿ ಸಂಸ್ಥೆಯಾಗಿದ್ದು, ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸಂಘದ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಬೇಕು. ರೈತರಿಗೆ ಕೃಷಿ ಸಾಲ, ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಅಗತ್ಯ ಸೌಲಭ್ಯಗಳು ಸಮರ್ಪಕವಾಗಿ ದೊರೆಯುವಂತೆ ಸಂಘದ ಮೂಲಕ ಕ್ರಮ ಕೈಗೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ರೈತರ ಸಂಕಷ್ಟದ ಸಂದರ್ಭದಲ್ಲಿ ಪಿಕೆಪಿಎಸ್ ರೈತರ ಬೆನ್ನಿಗೆ ನಿಂತು ಕೆಲಸ ಮಾಡಬೇಕು. ಸಂಘವು ಕೇವಲ ಆಡಳಿತಾತ್ಮಕ ಸಂಸ್ಥೆಯಾಗಿರದೆ, ರೈತರ ಆರ್ಥಿಕ ಪ್ರಗತಿಗೆ ನೆರವಾಗುವ ರೈತರ ವಿಶ್ವಾಸದ ಕೇಂದ್ರವಾಗಬೇಕು ಎಂಬ ಅಭಿಪ್ರಾಯವೂ ಈ ಸಂದರ್ಭದಲ್ಲಿ ವ್ಯಕ್ತವಾಯಿತು. ನೂತನ ಅಧ್ಯಕ್ಷ ಉಮೇಶ ಚವ್ಹಾಣ್ ಅವರಿಗೆ ಸಂಘದ ಸದಸ್ಯರು, ಮುಖಂಡರು ಹಾಗೂ ಬೆಂಬಲಿಗರು ಅಭಿನಂದನೆ ಸಲ್ಲಿಸಿ, ರೈತಪರ ಕಾರ್ಯಗಳಿಗೆ ಶುಭ ಹಾರೈಸಿದರು.ಮಾಜಿ ಅಧ್ಯಕ್ಷ ಪ್ರಭು ಹೊಸಮನಿ, ಉಪಾಧ್ಯಕ್ಷರು ಶ್ರೀಮಂತ ಗುಂದವಾನ, ಸಿದ್ದಪ್ಪ ಪೂಜಾರಿ, ವಿಠ್ಠಲ ಹರಿಜನ, ಉಮೇಶ ಚವ್ಹಾಣ, ಮಹಿಬೂಬ ಜಮಾದಾರ,  ಶಿಲವಂತಿ ಪೂಜಾರಿ, ಇದ್ದರು.ಈ ಸಂದರ್ಭದಲ್ಲಿ ಅಶೋಕ ಬಳಬಟ್ಟಿ, ಅಶೋಕ ಬಳ್ಳಬಟ್ಟಿ ಸುಭಾಷ್ ತುರತ, ಜಕಪ್ಪ ಪೂಜಾರಿ, ಮಹಿಬೂಬ್ ಪಟೇಲ್, ಗುರುರಾಜ ಕುಂಬಾರ, ಶಕೀಲ್ ಮಣೂರ, ಗುಡುಸಾಹೇಬ ಅಹಿರಸಂಗ, ದಯಾನಂದ ಬನಸೂಡೆ, ಸೈಫನ್ ಮುಲ್ಲಾ, ವಿಠ್ಠಲ ಹೊನಮಣಿ, ಸತೀಶ್ ಸಿತಿಮಣಿ, ಹಸನ ಮುಜಾವರ, ಜಾವಪ್ಪಾ ವಾಗ್ಮೋಡ, ಸುನಿಲ್ ಬನಸೂಡೆ, ಲೋಕೇಶಿಂಗ್ ರಾಠೋಡ್ ಸೇರಿದಂತೆ ಅನೇಕರು ಇದ್ದರು. ಇಂಗಳಗಿ ಪಿಕೆಪಿಎಸ್ ಅಧ್ಯಕ್ಷರಾಗಿ ಉಮೇಶ ಚವ್ಹಾಣ್ಗೆ ಭರ್ಜರಿ ಜಯ ೭ ಮತ ಪಡೆದು ಆಯ್ಕೆ; ರೈತರ ಹಿತಕ್ಕೆ ಆದ್ಯತೆ ನೀಡುವ ಭರವಸೆ

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಚೀವ ಎಂ.ಬಿ. ಪಾಟೀಲರ ಜನ್ಮದಿನದ ಅಂಗವಾಗಿ  ಡಾ.ಪ್ರಭುಗೌಡ ಅಭಿಮಾನಿಗಳಿಂದ ಹಣ್ಣು-ಹಂಪಲು ವಿತರಣೆ*ಗುರುಭವನ ಉದ್ಘಾಟನೆ: ಲಕ್ಷ್ಮೀ ಹೆಬ್ಬಾಳಕರ್ ಭಾಗಿ* ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ ಶ್ರೀ ಅಕ್ಷೋಭ್ಯ ತೀರ್ಥರ ೨೧೫ನೇ ಆರಾಧನಾ ಮಹೋತ್ಸವಹಳ್ಳಿಗಳಲ್ಲೇ ಹೆಣ್ಣು ಮಕ್ಕಳು ಹೆಚ್ಚು ಶೋ?ಣೆಗೆ ಒಳಗಾಗುತ್ತಿದ್ದಾರೆ : ನ್ಯಾ. ಸವಿತಾ ಮುಕ್ಕಲ್ಶತಾಯುಷಿ ದಂಪತಿಗಳ ಜನ್ಮಶತಮಾನೋತ್ಸವಕರವೇ ಹೋರಾಟಕ್ಕೆ ಸ್ಪಂದಿಸಿದ ಶಾಸಕರು ಹಾಗೂ ಜಿಲ್ಲಾಧಿಕಾರಿಗಳುರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಗೆ ಆದರ್ಶಗೌಡ ಹಳೆಹಡಗಲಿ ಆಯ್ಕೆಕಬ್ಬಿಗೆ ಹೆಚ್ಚಿನ ದರಕ್ಕೆ ಕೇಂದ್ರದ ಸಭೆಯಲ್ಲಿ ಪ್ರಸ್ತಾವನೆ, ದೆಹಲಿಯಲ್ಲಿ ಕೇಂದ್ರ ತಂಡದೊAದಿಗೆ ಸಭೆ. ರೈತರ ಹಿತಾಸಕ್ತಿ ಕಾಪಾಡಲು ಬದ್ದ ಸಹಕಾರಿ ಸಚಿವ ಲಕ್ಷö್ಮಣ ಸವದಿಇಂಗಳಗಿ ಪಿಕೆಪಿಎಸ್ ಅಧ್ಯಕ್ಷರಾಗಿ ಉಮೇಶ ಚವ್ಹಾಣ್ ಭರ್ಜರಿ ಗೆಲುವು