ತಾಳಿಕೋಟೆ, ಬಿಳೇಭಾವಿ-ನಾಗೂರ ಗ್ರಾಮದ ಶ್ರೀ ಅಕ್ಷೋಭ್ಯ ತೀರ್ಥರ ಹಾಗೂ ಶ್ರೀ ವಿದ್ಯಾನಿಧಿ ತೀರ್ಥರ ಸೇವಾ ಸಮಿತಿ ಆಶ್ರಯದಲ್ಲಿ ಬಿಳೇಭಾವಿ ಗ್ರಾಮದಲ್ಲಿ ಶ್ರೀ ಶ್ರೀ ಶ್ರೀ ೧೦೦೮ ಅಕ್ಷೋಭ್ಯ ತೀರ್ಥರ ೨೧೫ನೇ ಆರಾಧನಾ ಮಹೋತ್ಸವವನ್ನು ಅ.೯ ಮತ್ತು ೧೦ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಕಣ್ಣಮಠದ ಪೀಠಾಧಿಕಾರಿಗಳಾದ ಶ್ರೀ ಶ್ರೀ ಶ್ರೀ ೧೦೦೮ ಶ್ರೀ ವಿದ್ಯಾಕಣ್ವ ವಿರಾಜ ತೀರ್ಥರು ಪೀಠಾಧಿಪತಿಗಳು ಕಣ್ವಮಠ ಹುಣಸಿಹೊಳಿ ಇವರ ದಿವ್ಯ ಸಾನ್ನಿಧ್ಯದಲ್ಲಿ ಆರಾಧನಾ ಮಹೋತ್ಸವದ ಕಾರ್ಯಕ್ರಮಗಳು ನಡೆಯಲಿದ್ದು ಅ.೯ರಂದು ಶುಕ್ರವಾರ ೧೧ ಗಂಟೆಗೆ ಮಧ್ಯಾರಾಧನೆ ನಡೆಯಲಿದ್ದು, ರಾಜ್ಯ ಪ್ರಶಸ್ತಿ ವಿಜೇತ ಸಂಗೀತಗಾರರಾದ ಬಾಗಲಕೋಟೆಯ ವಿದ್ವಾನ್ ಶ್ರೀ ಅನಂತ ಕುಲಕರ್ಣಿ ಅವರಿಂದ ದಾಸವಾಣಿ ಕಾರ್ಯಕ್ರಮ ಜರುಗಲಿದೆ. ನಂತರ ತಾಳಿಕೋಟೆಯ ಶ್ರೀ ಗಾಯತ್ರಿ ಮಹಿಳಾ ಭಜನಾ ಮಂಡಳಿ ಹಾಗೂ ಶ್ರೀ ಮಹಾಲಕ್ಷ್ಮೀ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಅ.೧೦ರಂದು ಶನಿವಾರ ಉತ್ತರಾರಾಧನೆ ಹಾಗೂ ಪಿತೃಕಾರ್ಯ ನೆರವೇರಲಿದ್ದು, ಕೂಡೇಕಲ್ಲಿನ ಶ್ರೀ ಜಗನ್ನಾಥ ಜೋಶಿ ಹಾಗೂ ಶ್ರೀ ಗಂಗಾಧರ ಜೋಶಿ ಅವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ೯೪೪೮೪೧೧೨೮೦, ೯೭೪೩೧೫೯೪೧೧ ಸಂಪರ್ಕಿಸಲು ಬಿಳೇಭಾವಿ-ನಾಗೂರ ಗ್ರಾಮದ ಶ್ರೀ ಅಕ್ಷೋಭ್ಯ ತೀರ್ಥರ ಹಾಗೂ ಶ್ರೀ ವಿದ್ಯಾನಿಧಿ ತೀರ್ಥರ ಸೇವಾ ಸಮಿತಿ ಪ್ರಕಟಣೆ ಮೂಲಕ ತಿಳಿಸಿದೆ.