LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಹಳ್ಳಿಗಳಲ್ಲೇ ಹೆಣ್ಣು ಮಕ್ಕಳು ಹೆಚ್ಚು ಶೋ?ಣೆಗೆ ಒಳಗಾಗುತ್ತಿದ್ದಾರೆ : ನ್ಯಾ. ಸವಿತಾ ಮುಕ್ಕಲ್


ಮೂಡಲಗಿ : ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಿಗಿಂತ ಹಳ್ಳಿಗಳಲ್ಲೇ ಹೆಣ್ಣು ಮಕ್ಕಳು ಹೆಚ್ಚು ಶೋ?ಣೆಗೆ ಒಳಗಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ನ್ಯಾಯಾಧೀಶೆ ಸವಿತಾ ಮುಕ್ಕಲ್ ಕಳವಳ ವ್ಯಕ್ತಪಡಿಸಿದರು.
ಬುಧವಾರದಂದು ಪಟ್ಟಣದ ಆರ್.ಡಿ.ಎಸ್ ಕಾಲೇಜಿನ ಸಭಾವನದಲ್ಲಿ ಮೂಡಲಗಿಯ ತಾಲೂಕಾ ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಪೋಲಿಸ್ ಇಲಾಖೆ, ಶಿಕ್ಷಣ ಇಲಾಖೆ ಮೂಡಲಗಿ ಇವರ ಸಹಯೋಗದಲ್ಲಿ ಜರುಗಿದ ಹಿರಿಯ ನಾಗರಿಕರ ದಿನ ಹಾಗೂ ಸೈಬರ್ ಅಪರಾಧ ದಿನ ಅಂಗವಾಗಿ ಕಾನೂನು ಅರಿವು ಕಾರ್ಯಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶೋ?ಣೆಗೆ ಒಳಗಾದ ಹೆಣ್ಣುಮಕ್ಕಳು ಯಾವುದಕ್ಕೂ ಹೆದರದೆ ಪಾಲಕರ ಜೊತೆ ಮುಕ್ತವಾಗಿ ಮಾತನಾಡಿ ಕಾನೂನು ನೆರವು ಪಡೆಯಬೇಕು, ಸಾಮಾಜಿಕ ಜಾಲತಾಣಗಳಲ್ಲಿ ಅನಾವಶ್ಯಕವಾಗಿ ತಮ್ಮ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳುವುದನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ಸಂಘದ ಅಧ್ಯಕ್ಷರಾದ ಬಿ.ಎಂ.ಸಣ್ಣಕ್ಕಿ ಮಾತನಾಡಿ ವಿಶ್ವಸಂಸ್ಥೆಯು ಅ.೧ ಹಿರಿಯ ನಾಗರೀಕರ ದಿನವಾಗಿ ಘೋ?ಣೆ ಮಾಡಿದೆ. ಹಣ ಆಸ್ತಿಯನ್ನು ತಂದೆ-ತಾಯಿಯಿಂದ ಕಸಿದುಕೊಂಡು ವೃದ್ಯಾಪ್ಯದಲ್ಲಿ ನಿರ್ಗತಿಕರನ್ನಾಗಿ ಮಾಡಿ ವೃದ್ಧಾಶ್ರಮಗಳಿಗೆ ಕಳಿಸಬಾರದು. ಅಪಾರ ಅನುಭವವುಳ್ಳ ಹಿರಿಯರು ನಮ್ಮ ಸಂಸ್ಕೃತಿಗಳ ಪ್ರತೀಕವಾಗಿದ್ದು, ಅವರ ಪಾಲನೆ ನಮ್ಮ ಕರ್ತವ್ಯವಾಗಿದೆ. ಶೋ?ಣೆಗೆ ಒಳಗಾದವರು ಹಿರಿಯ ನಾಗರೀಕರ ಸಹಾಯವಾಣಿ ಸಂಖ್ಯೆ ೧೩೫೬೭(ದೇಶಾದ್ಯಂತ) ಹಾಗೂ ೧೦೯೦(ರಾಜ್ಯ) ಸಂಪರ್ಕಿಸಿ ಸಹಾಯ ಪಡೆಯಬಹುದಾಗಿದೆ ಎಂದರು.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ನ್ಯಾಯವಾದಿ ಸಂಘದ ಉಪಾಧ್ಯಕ್ಷರಾದ ಲಕ್ಷ್ಮಣ ಅಡಿಹುಡಿ ಮಾತನಾಡಿ, ಡಿಜಿಟಲ್ ತಂತ್ರಜ್ಞಾನ ಬಳಸಿ ಮಾಡುವ ಕಾನೂನು ಬಾಹಿರ ಚಟುವಟಿಕೆಗಳು ಸೈಬರ ಅಪರಾಧಗಳಾಗಿವೆ. ಅನಕ್ಷರಸ್ಥರರಿಗಿಂತ ಸ್ಮಾರ್ಟ್ ಫೋನ್ ಬಳಸುತ್ತಿರುವ ವಿದ್ಯಾವಂತರೆ ಮೋಸ ಹೋಗುತ್ತಿದ್ದಾರೆ. ಸೈಬರ್ ವಂಚನೆಗಳಿಗೆ ತುತ್ತಾದವರು ಆತಂಕಕ್ಕೆ ಒಳಗಾಗದೆ ಸೈಬರ್ ಸಹಾಯವಾಣಿ ಸಂಖ್ಯೆ ೧೯೩೦ ಗೆ ಕರೆ ಮಾಡುವ ಮೂಲಕ ತಮ್ಮ ದೂರು ದಾಖಲಿಸಿ ಸಹಾಯ ಪಡೆಯಬಹುದಾಗಿದೆ. ಅನಾಮಧೇಯ ಕರೆ, ಲಿಂಕ್ ಹಾಗೂ ಆನ್ಲೈನ್ ಗೇಮ್ ಗಳಿಂದ ವಿದ್ಯಾರ್ಥಿಗಳು ಎಚ್ಚರವಿರಬೇಕು ಎಂದು ಕಿವಿಮಾತು ಹೇಳಿದರು. ನ್ಯಾಯವಾದಿ ಸಂಘದ ಕಾರ್ಯದರ್ಶಿಗಳಾದ ಎಸ್.ಬಿ.ತುಪ್ಪದ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂಧರ್ಭದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸಂತೋ? ಪಾರ್ಶಿ, ಎಎಸ್‌ಐ ಆಯ್.ಜೆ.ವಾಳಕೆ, ನ್ಯಾಯವಾದಿಗಳಾದ ಆರ್.ಬಿ ಮುಂಡಿಗನಾಳ, ಜ್ಯೋತಿ ಕೊಡತೆ, ಪ್ರಾಂಶುಪಾಲ ಶಿವಲಿಂಗ ಸತ್ತಿಗೇರಿ ಸೇರಿದಂತೆ ಅನೇಕ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಎಸ್.ಬಿ.ಗೋಟುರೆ ಸ್ವಾಗತಿಸಿದರು, ಅಕ್ಷತಾ ಹೊಸಮನಿ ನಿರೂಪಿಸಿ, ರಾಜೇಂದ್ರ ಪತ್ತಾರ್ ವಂದಿಸಿದರು. 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಚೀವ ಎಂ.ಬಿ. ಪಾಟೀಲರ ಜನ್ಮದಿನದ ಅಂಗವಾಗಿ  ಡಾ.ಪ್ರಭುಗೌಡ ಅಭಿಮಾನಿಗಳಿಂದ ಹಣ್ಣು-ಹಂಪಲು ವಿತರಣೆ*ಗುರುಭವನ ಉದ್ಘಾಟನೆ: ಲಕ್ಷ್ಮೀ ಹೆಬ್ಬಾಳಕರ್ ಭಾಗಿ* ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ ಶ್ರೀ ಅಕ್ಷೋಭ್ಯ ತೀರ್ಥರ ೨೧೫ನೇ ಆರಾಧನಾ ಮಹೋತ್ಸವಹಳ್ಳಿಗಳಲ್ಲೇ ಹೆಣ್ಣು ಮಕ್ಕಳು ಹೆಚ್ಚು ಶೋ?ಣೆಗೆ ಒಳಗಾಗುತ್ತಿದ್ದಾರೆ : ನ್ಯಾ. ಸವಿತಾ ಮುಕ್ಕಲ್ಶತಾಯುಷಿ ದಂಪತಿಗಳ ಜನ್ಮಶತಮಾನೋತ್ಸವಕರವೇ ಹೋರಾಟಕ್ಕೆ ಸ್ಪಂದಿಸಿದ ಶಾಸಕರು ಹಾಗೂ ಜಿಲ್ಲಾಧಿಕಾರಿಗಳುರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಗೆ ಆದರ್ಶಗೌಡ ಹಳೆಹಡಗಲಿ ಆಯ್ಕೆಕಬ್ಬಿಗೆ ಹೆಚ್ಚಿನ ದರಕ್ಕೆ ಕೇಂದ್ರದ ಸಭೆಯಲ್ಲಿ ಪ್ರಸ್ತಾವನೆ, ದೆಹಲಿಯಲ್ಲಿ ಕೇಂದ್ರ ತಂಡದೊAದಿಗೆ ಸಭೆ. ರೈತರ ಹಿತಾಸಕ್ತಿ ಕಾಪಾಡಲು ಬದ್ದ ಸಹಕಾರಿ ಸಚಿವ ಲಕ್ಷö್ಮಣ ಸವದಿಇಂಗಳಗಿ ಪಿಕೆಪಿಎಸ್ ಅಧ್ಯಕ್ಷರಾಗಿ ಉಮೇಶ ಚವ್ಹಾಣ್ ಭರ್ಜರಿ ಗೆಲುವು