LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಯುಗಾದಿ ಬಿಸಿ: ಗಗನಕ್ಕೇರಿದ ಹೂವು, ಹಣ್ಣು ಮತ್ತು ತರಕಾರಿ ಬೆಲೆ

ಬೆಂಗಳೂರು, ಏಪ್ರಿಲ್​ 08:ಯುಗಾದಿ ಪ್ರತಿವರ್ಷ ಬಹಳ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷ ಹಬ್ಬದ ಸಮಯದಲ್ಲಿ ಮಾರುಕಟ್ಟೆ ಜನ ಜಂಗಳಿಯಿಂದ ಕೂಡಿರುತ್ತದೆ. ಖರೀದಿ ಭರಾಟೆ ಜೋರಾಗಿರುತ್ತದೆ. ಆದರೆ ಈ ವರ್ಷ ಮಾರಕಟ್ಟೆಯಲ್ಲಿ ಹೇಳಿಕೊಳ್ಳುವಷ್ಟು ಜನರಿಲ್ಲ. ಬಿಸಿಲಿಗೆ ಹೆದರಿ ಜನರು ಮಾರುಕಟ್ಟೆಗಳಿಗೆ ಬರಲು ಹಿಂದೇಟು ಹಾಕುತ್ತಿರುವುದು ಒಂದು ಕಡೆಯಾದರೆ, ಬರಗಾಲದಿಂದ ನೀರಿಲ್ಲದೆ ಹಣ್ಣು, ಹೂವು, ತರಕಾರಿ ಬೆಳೆ ಕಡಿಮೆಯಾಗಿದೆ. ಇದರಿಂದ ಹೂವು, ಹಣ್ಣು ಮತ್ತು ತರಕಾರಿ ಬೆಲೆ ಗಗನಕ್ಕೆ ಏರಿದೆ.

ಎರಡು ವಾರಗಳ ಮಾರುಕಟ್ಟೆಯಲ್ಲಿ ಕೆಜಿ ಬೀನ್ಸ್​ಗೆ 50 ರಿಂದ 60 ರೂ. ಇತ್ತು. ಇದೀಗ ಬೀನ್ಸ್ ಬೆಲೆ 70 ರೂ.ಗೆ ಏರಿಕೆಯಾಗಿದೆ. 40 ರಿಂದ 50 ರೂ. ವರೆಗೆ ಮಾರಾಟವಾಗುತ್ತಿದ್ದ ಕ್ಯಾರೆಟ್ 60 ರೂ. ಕ್ಕೆ ಮಾರಾಟವಾಗುತ್ತಿದೆ. ಇತರೆ ತರಕಾರಿಗಳಾದ ಕ್ಯಾಪ್ಸಿಕಂ, ಬದನೆ, ಟೊಮೇಟೊ ಬೆಲೆ ಕೆಜಿಗೆ 10 ರೂ. ಏರಿಕೆಯಾಗಿದೆ.

ಹೂವಿನ ಬೆಲೆ





















































ಹೂವು ದರ (ರೂ. ಗಳಲ್ಲಿ)
ಮಲ್ಲಿಗೆ 500-600
ಸೇವಂತಿಗೆ 300-350
ಗುಲಾಬಿ 250
ಚೆಂಡು 150
ಕಾಕಡ 800
ಕನಕಾಂಬರ 800-1000
ಸುಗಂದರಾಜ 300
ಆಸ್ಟ್ರೀಲಿಯಾ 600
ತುಳಸಿ 1 ಮಾರ್​​ಗೆ 100
ಬೇವು 1 ಕಟ್​​ಗೆ 20-30
ಮಾವಿನ ಎಲೆ 30

ಹಣ್ಣಿನ ಬೆಲೆ

























































ಅನಾನಸ್​ (ಜೋಡಿ 80
ಸೇಬು 220
ದ್ರಾಕ್ಷಿ 100
ಸಪೋಟ 100
ಮೂಸಂಬಿ 100
ಕಿತ್ತಲೆ 140
ಕಿವಿ (3ಕ್ಕೆ) 100
ಡ್ಯ್ರಾಗನ್​ ಫ್ರೂಟ್​​ 1ಕ್ಕೆ 80
ದಾಳಿಂಬೆ 200
ಬಟರ್​ ಫ್ರೂಟ್​ 200
ಮರಸೇಬು 200
ಏಲಕ್ಕಿ ಬಾಳೆ 80
ಪಚ್ಚಬಾಳೆ 40

ತರಕಾರಿ ಬೆಲೆ














































































ತರಕಾರಿ ದರ (ರೂ. ಗಳಲ್ಲಿ)
ಬೀನ್ಸ್​ 60-80
ಮೂಲಂಗಿ 40-30
ಬದನೆಕಾಯಿ 35-25
ಊಟಿ ಗಜ್ಜರಿ 35-40
ಹಾಗಲಕಾಯಿ 40-60
ಈರುಳ್ಳಿ 20-25
ಬೀಟ್‍ರೂಟ್ 30-40
ನವಿಲುಕೋಸು 35-40
ಬೆಂಡೆಕಾಯಿ 30-50
ಬೆಳ್ಳುಳ್ಳಿ 180-300
ಆಲೂಗಡ್ಡೆ 25-30
ಹೀರೆಕಾಯಿ 35-40
ಟೊಮೆಟೊ 20-25
ಮೆಣಸಿನಕಾಯಿ 60-65
ಕೊತ್ತಂಬರಿ 20-30
ಕ್ಯಾಪ್ಸಕಮ್​​ 20-45
ನುಗ್ಗೆಕಾಯಿ 60-80


ಬೆಂಗಳೂರಿನ ಸುತ್ತಮುತ್ತಲಿನ ಪ್ರಮುಖ ತೋಟಗಾರಿಕೆ ವಲಯದಲ್ಲಿ ಕೃಷಿಯ ಚಟುವಟಿಕೆ ಸುಮಾರು 50% ರಷ್ಟು ಕಡಿಮೆಯಾಗಿದೆ. ತರಕಾರಿಗಳು, ಹಣ್ಣುಗಳು ಮತ್ತು ಹೂವುಗಳ ಬೆಲೆಗಳು ಈಗ ಸ್ವಲ್ಪ ಏರಿಕೆಯಾಗಿದೆ. ಮಳೆಯಾಗದ ಹಿನ್ನೆಲೆಯಲ್ಲಿ, ಮುಂಬರುವ ವಾರಗಳಲ್ಲಿ ಈ ಬೆಲೆಗಳು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹೊಸಪೇಟೆ ಸಕ್ಕರೆ ಕಾರ್ಖಾನೆ ಆರಂಭಿಸಿ, ಇಲ್ಲದಿದ್ದರೆ ರಾಜೀನಾಮೆ ನೀಡಿ: ರೈತ ಸಂಘ ಎಚ್ಚರಿಕೆಇಂದು ಯರಗಟ್ಟಿಯಲ್ಲಿ ಜಿಲ್ಲಾ ಮಟ್ಟದ ಪ್ರಜಾಸೇವೆ ಅಂದೋಲನ ಸಭೆಕಾಗವಾಡದ ಮಲ್ಲಿಕಾರ್ಜುನ ವಿದ್ಯಾಲಯದಲ್ಲಿ ಡಿಜಿಟಲ್ ಸ್ಮಾರ್ಟ್ ಕ್ಲಾಸ್ ಉದ್ಘಾಟನೆವಿಕಾಸ ಯುವಕ ಮಂಡಳದ ತಿಲಕ ಪ್ರಶಸ್ತಿ ಪ್ರಕಟ. : ಸ್ಲಂ ನಲ್ಲಿ ಅರಳಿದ ತಿಲಕರ ಆಶಯ  ವಂದೇ ಮಾತರಂ ಗೀತೆಯನ್ನು ಮೊಟಕುಗೊಳಿಸಿರುವ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ ಪ್ರತಿಭಟನೆ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್ರನ್ನ ಅಜರಾಮರ: ಮಲ್ಲಿಕಾರ್ಜುನ ಅರಬಿ೧೦೦ ಮೀಟರ್ ಓಟದಲ್ಲಿ ದ್ವಿತೀಯ: ಜಿಲ್ಲಾ ಮಟ್ಟಕ್ಕೆ ಚೇತನ ನ್ಯಾಮಗೌಡಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆ