ನ್ಯಾ. ಹೇಮಂತ್ ಚಂದನ ಗೌಡರ್: ಕರ್ನಾಟಕ ಹೈಕೋರ್ಟ್‌ನಿಂದ ಮದ್ರಾಸ್ ಹೈಕೋರ್ಟ್‌ಗೆ ವರ್ಗಾವಣೆ, ನ್ಯಾ.ಕೃಷ್ಣನ್ ನಟರಾಜನ: ಕರ್ನಾಟಕ ಹೈಕೋರ್ಟ್‌ನಿಂದ ಕೇರಳ ಹೈಕೋರ್ಟ್‌ಗೆ ವರ್ಗಾವಣೆ, ನ್ಯಾ. ಎನ್. ಶ್ರೀನಿವಾಸ ಸಂಜಯ್ ಗೌಡ: ಕರ್ನಾಟಕ ಹೈಕೋರ್ಟ್‌ನಿಂದ ಗುಜರಾತ್ ಹೈಕೋರ್ಟ್‌ಗೆ ವರ್ಗಾವಣೆ, ನ್ಯಾ.ಕೃಷ್ಣ ದೀಕ್ಷಿತ್: ಕರ್ನಾಟಕ ಹೈಕೋರ್ಟ್‌ನಿಂದ ಒಡಿಶಾ ಹೈಕೋರ್ಟ್‌ಗೆ ವರ್ಗಾವಣೆ, ನ್ಯಾ.ಪೆರುಗು ಶ್ರೀಸುಧ: ತೆಲಂಗಾಣ ಹೈಕೋರ್ಟ್‌ನಿಂದ ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ, ನ್ಯಾ.ಕೆ.ಸುರೇಂದರ್: ತೆಲಂಗಾಣ ಹೈಕೋರ್ಟ್‌ನಿಂದ ಮದ್ರಾಸ್ ಹೈಕೋರ್ಟ್‌ಗೆ ವರ್ಗಾವಣೆ, ನ್ಯಾ.ಡಾ.ಕೆ.ಮನ್ಮಧ ರಾವ್: ಆಂಧ್ರಪ್ರದೇಶ ಹೈಕೋರ್ಟ್‌ನಿಂದ ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ, ಇತ್ತ ಸುಪ್ರೀಂಕೋರ್ಟ್ ಶಿಫಾರಸ್ಸಿಗೆ ಬೆಂಗಳೂರು ವಕೀಲರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ. ದಕ್ಷ ನ್ಯಾಯಮೂರ್ತಿಗಳನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸದಂತೆ ಒತ್ತಾಯಿಸಿದೆ.