LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
National News

ಇಂದು ವಿಶ್ವವಿಖ್ಯಾತ 'ಪುರಿ ಜಗನ್ನಾಥ'ನ ರಥೋತ್ಸವದ 'ಬಹುದ ಯಾತ್ರೆ'

ಪುರಿ, ಒಡಿಶಾ: ವಿಶ್ವವಿಖ್ಯಾತ 'ಪುರಿ ಜಗನ್ನಾಥ'ನ ರಥೋತ್ಸವದ 'ಬಹುದ ಯಾತ್ರೆ' ಇಂದು ಭಗವಂತನ ಶ್ರೀ ಮಂದಿರ ತಲುಪಲಿದೆ. ದೇವಾಲಯಕ್ಕೆ ಮೊದಲು ಭಗವಾನ್​​ ಜಗನ್ನಾಥರ ಒಡಹುಟ್ಟಿದವರಾದ ಬಲಭದ್ರ ದೇವರು, ಬಳಿಕ ಸಹೋದರಿ ದೇವಿ ಸುಭದ್ರಾ, ಕೊನೆಯಲ್ಲಿ ಜಗನ್ನಾಥ ದೇವರು ಆಗಮಿಸಲಿದ್ದಾರೆ. ಒಂಬತ್ತು ದಿನಗಳ ಕಾಲ ಗುಂಡಿಚಾ ದೇವಸ್ಥಾನದಲ್ಲಿ ನೆಲೆಸಿದ್ದ ದೇವರುಗಳನ್ನು ಭಕ್ತರು ಇಂದು ಭವ್ಯ ಮೆರವಣಿಗೆಯಲ್ಲಿ ದೇವರ ರಥವನ್ನು ಎಳೆಯಲಿದ್ದಾರೆ.


ಸಂಪ್ರದಾಯದ ಪ್ರಕಾರವೇ ಗುಂಡಿಚಾ ದೇವಸ್ಥಾನದಲ್ಲಿ ಎಲ್ಲ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ದೇವತೆಗಳ 'ಪಹಂಡಿ' ಮಧ್ಯಾಹ್ನ 12 ಗಂಟೆಗೆ ನೆರವೇರಲಿದೆ. ಸಂಜೆ 4 ಗಂಟೆಗೆ ರಥೋತ್ಸವ ನಡೆಯಲಿದೆ. ರಥ ಎಳೆಯುವ ಕಾರ್ಯ ಮುಗಿದ ನಂತರ ರಥದ ಮೇಲಿರುವ ಇತರ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತ (SJTA) ಪ್ರಕಾರ, ಎಲ್ಲ ಧಾರ್ಮಿಕ ಕ್ರಿಯೆಗಳನ್ನು ಸುಗಮವಾಗಿ ಮತ್ತು ಶಿಸ್ತುಬದ್ಧವಾಗಿ ನಡೆಸಲು ವಿಸ್ತಾರವಾದ ಸಿದ್ಧತೆಗಳನ್ನು ಮಾಡಲಾಗಿದೆ. ಆಡಳಿತವು ಸಕಾಲದಲ್ಲಿ ಆಚರಣೆಗೆ ಒತ್ತು ನೀಡುತ್ತಿದೆ.


ಪುರಿ ಜಗನ್ನಾಥ ದೇವಸ್ಥಾನದ ರತ್ನ ಭಂಡಾರದ ಬಾಗಿಲ ಬರೋಬ್ಬರಿ 46 ವರ್ಷಗಳ ಬಳಿಕ ನಿನ್ನೆ ತೆರೆಯಲಾಯಿತು. ಪೂಜೆ ಸಲ್ಲಿಸಿದ ಬಳಿಕ ಭಾನುವಾರ ಮಧ್ಯಾಹ್ನ 1.28ಕ್ಕೆ ಆ ರಹಸ್ಯ ಕೊಠಡಿಯ ಬಾಗಿಲು ಓಪನ್ ಮಾಡಲಾಗಿದೆ.

1978 ರಲ್ಲಿ ಕೊನೆಯದಾಗಿ ರತ್ನ ಭಂಡಾರದ ಬಾಗಿಲನ್ನು ತೆರೆಯಲಾಗಿತ್ತು. ಜುಲೈ 7 ಮತ್ತು 8 ರಂದು ಪುರಿಯಲ್ಲಿ ಜಗನ್ನಾಥ ದೇವರ ಮಹಾರಥೋತ್ಸವ ನಡೆದಿದೆ. ಪ್ರತಿ ಬಾರಿ 1 ದಿನವಿದ್ದ ಜಾತ್ರೆ ಈ ಬಾರಿ 2 ದಿನ ನಡೆಸಲಾಗಿದೆ. ಈ ಭವ್ಯ ರಥಯಾತ್ರೆಗೆ ದೇಶ-ವಿದೇಶದಿಂದ ಭಕ್ತರು ಸೇರಿದ್ದರು. ಈ ಬಾರಿ ಜಾತ್ರೆಯ ಮೊದಲ ದಿನ ಭಾನುವಾರದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಧಾನ ಜಗನ್ನಾಥ ರಥದ ಹಗ್ಗಗಳನ್ನು ಎಳೆಯುವ ಮೂಲಕ ಸಾಂಕೇತಿಕವಾಗಿ ಮಹಾ ಯಾತ್ರೆಗೆ ಚಾಲನೆ ನೀಡಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್