Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಂಜಾಬ್​ ಸರ್ಕಾರದ ವಿರುದ್ಧ ದಿಢೀರ್‌ ಪ್ರತಿಭಟನೆಗಳಿದ ಸಾವಿರಾರು ರೈತರು


ಚಂಡೀಗಢ: ಕೃಷಿ ನೀತಿ ಅನುಷ್ಠಾನಗೊಳಿಸುವಲ್ಲಿ ಎಎಪಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಪಂಜಾಬ್​ನ ಭಾರ್ತಿ ಕಿಸಾನ್​ ಯುನಿಯೂನ್​-ಬಿಕೆಯು (ಉಗ್ರಹನ್​) ಮತ್ತು ಸಂಯುಕ್ತ ಕಿಸಾನ್​ ಮೋರ್ಚಾ (ಎಸ್​ಕೆಎಂ) ಸೇರಿದಂತೆ 37 ರೈತ ಸಂಘಟನೆಯ ಸಾವಿರಾರು ರೈತರು ಧರಣಿ ಆರಂಭಿಸಿದ್ದಾರೆ.


ಸೋಮವಾರದಿಂದ ರಾಜ್ಯದಲ್ಲಿ ಮೂರು ದಿನಗಳ ಮಳೆಗಾಲದ ವಿಧಾನಸಭಾ​ ಅಧಿವೇಶನ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಬಿಕೆಯು ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದೆ. ಎಸ್‌ಕೆಎಂನ ರೈತರು ಕೂಡ ಬಿಕೆಯು ಜೊತೆ ಪ್ರತಿಭಟನೆಗೆ ಮುಂದಾಗಿದ್ದಾರೆ.


ಕೃಷಿ ನೀತಿ ಅಳವಡಿಕೆಯ ಜೊತೆಗೆ ಬಿಕೆಯು, ಭೂರಹಿತ ಕಾರ್ಮಿಕರು ಮತ್ತು ರೈತರಿಗೆ ಭೂ ಹಂಚಿಕೆಯಲ್ಲಿ ವಿಳಂಬ ಮತ್ತು ಕೃಷಿ ಮತ್ತು ಕಾರ್ಮಿಕರ ಸಾಲಮನ್ನಾದಂತಹ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸುತ್ತಿದೆ. ಕೃಷಿ ನೀತಿಗೆ ಬೆಂಬಲ ವ್ಯಕ್ತಪಡಿಸಿ, ಡೆಮಾಕ್ರಟಿಕ್​​ ಟೀಚರ್ಸ್​​ ಫ್ರಂಟ್​​ ಹಾಗೂ ಗುತ್ತಿಗೆ ನೌರರ ಸಂಘಗಳು ಕೂಡ ಪ್ರತಿಭಟನಾ ರ್ಯಾಲಿಗೆ ಕೃಷಿ ಸಂಘಟನೆಗಳಿಗೆ ಬೆಂಬಲ ವ್ಯಕ್ತಪಡಿಸಿವೆ.

Advertisement

ಎಸ್​​ಕೆಎಂ ಕೃಷಿ ನೀತಿ ಜೊತೆಯಲ್ಲಿ ಪಂಜಾಬ್​ನಾದ್ಯಂತ ಕಾಲುವೆ ನೀರನ್ನು ಸಮರ್ಪಕವಾಗಿ ವಿತರಣೆ ಮಾಡುವ ಮತ್ತು ವಾಘಾ ಮತ್ತು ಹುಸೇನಿವಾಲಾ ಗಡಿಗಳ ಮೂಲಕ ಪಾಕಿಸ್ತಾನದೊಂದಿಗೆ ವ್ಯಾಪಾರ ಪುನರಾರಂಭಿಸುವ ಬೇಡಿಕೆಗಳನ್ನೂ ಮುಂದಿಟ್ಟಿದೆ.






ರಾಸಾಯನಿಕ ಮುಕ್ತ ಬೆಳೆಗಳ ಉತ್ತೇಜನ, ಆತ್ಮಹತ್ಯೆಗೆ ಶರಣಾದ ಕೃಷಿ ಕುಟುಂಬಕ್ಕೆ ಪರಿಹಾರ ಮತ್ತು ರಾಜ್ಯದಲ್ಲಿರುವ ಮಾದಕ ವಸ್ತು ಸಮಸ್ಯೆ ನಿವಾರಣೆಗಾಗಿ ನಾವು ಬೇಡಿಕೆ ಇಟ್ಟಿದ್ದೇವೆ ಎಂದು ಪಂಜಾಬ್​ ಖೇತ್​ ಮಜ್ದೂರ್​​ ಯೂನಿಯನ್​ನ ಪ್ರಧಾನ ಕಾರ್ಯದರ್ಶಿ ಲಚ್ಚಮಾನ್​ ಸಿಂಗ್​ ಸೆವೆವಾಲಾ ತಿಳಿಸಿದ್ದಾರೆ.


ವಿಧಾನಸೌಧದವರೆಗೆ ರೈತರು ಮೆರವಣಿಗೆ ನಡೆಸಿ, ನಮ್ಮ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳು ಮತ್ತು ಪ್ರತಿಪಕ್ಷ ನಾಯಕರಿಗೆ ಮನವಿ ಮಾಡಲಾಗುವುದು ಎಂದು ಬಿಕೆಯು ಪ್ರಧಾನ ಕಾರ್ಯದರ್ಶಿ ಸುಖದೇವ್​ ಸಿಂಗ್​ ಕೊರಿಕಲನ್​ ಹೇಳಿದ್ದಾರೆ.



Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*