ತಾಳಿಕೋಟೆ : ಪಟ್ಟಣದ ಶ್ರೀ ಪಂಚಾಚಾರ್ಯ ಸಹಕಾರಿ ಪತ್ತಿನ ಸಂಘ ನಿ,ದ ೨೬ನೇ ವರ್ಷದ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಇದೇ ದಿ. ೨೪ ಗುರುವಾರರಂದು ಬೆಳಿಗ್ಗೆ ೧೧ ಗಂಟೆಗೆ ಕರೆಯಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಮುತ್ತುರಾಜ ಜಹಾಗೀರದಾರ, ಪ್ರಧಾನ ವ್ಯವಸ್ಥಾಪಕ ಶ್ರೀಕಾಂತ ಹಿರೇಮಠ ಅವರು ತಿಳಿಸಿದ್ದಾರೆ.
ಅಂದು ಶ್ರೀ ಖಾಸ್ಗತೇಶ್ವರ ಸಭಾ ಭವನದಲ್ಲಿ ಜರುಗಲಿರುವ ಈ ಸಭೆಯಲ್ಲಿ ಸಂಘದ ಏಳಿಗೆ ಕುರಿತು ಚರ್ಚೆಗಳು ನಡೆಯಲಿದ್ದು ಕಾರಣ ಸದಸ್ಯರು, ಗ್ರಾಹಕರು ಪಾಲ್ಗೊಂಡು ಸಂಘದ ಶ್ರೇಯೋಭಿವೃದ್ದಿಗಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಅಧ್ಯಕ್ಷರಾದ ಮುತ್ತುರಾಜ ಜಹಾಗೀರದಾರ, ಪ್ರಧಾನ ವ್ಯವಸ್ಥಾಪಕ ಶ್ರೀಕಾಂತ ಹಿರೇಮಠ ಅವರು ತಿಳಿಸಿದ್ದಾರೆ.