LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bijapur

ಸೆ.೨೭ರಂದು ಸರ್ವಧರ್ಮ ವಧು-ವರರ ಪರಿಚಯ ಕಾರ್ಯಕ್ರಮ

 

 

 

ತಾಳಿಕೋಟೆ : ಶ್ರೀ ಭಗೀರಥ ಸರ್ವಧರ್ಮ ವಧು-ವರರ ಉಚಿತ ಮಾಹಿತಿ ಕೇಂದ್ರದ ವತಿಯಿಂದ ಸರ್ವಧರ್ಮ ವಧು-ವರರು ಹಾಗೂ ಪಾಲಕರ ಪರಿಚಯ ಕಾರ್ಯಕ್ರಮವನ್ನು ಸೆ.೨೭ರಂದು ಭಾನುವಾರ ಪಟ್ಟಣದ ಶ್ರೀ ಬಾಲಾಜಿ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.

 ವಿವಾಹವಾಗಲು ಇಚ್ಛಿಸುವ ವಿವಿಧ ಧರ್ಮಗಳ ವಧು-ವರರು ಹಾಗೂ ಅವರ ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಸ್ಪರ ಪರಿಚಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತ ವಧು-ವರರು ತಮ್ಮ ಇತ್ತೀಚಿನ ಎರಡು ಭಾವಚಿತ್ರಗಳು ಹಾಗೂ ಸ್ವವಿವರದೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೇಂದ್ರದ ಗೌರವಾಧ್ಯಕ್ಷ ಬಸಯ್ಯ ಹಿರೇಮಠ ಮನವಿ ಮಾಡಿದ್ದಾರೆ.

 ಕಾರ್ಯಕ್ರಮದ ಯಶಸ್ಸಿಗಾಗಿ ಕೇಂದ್ರದ ಸದಸ್ಯರು ಪೂರ್ವಭಾವಿ ಸಭೆ ನಡೆಸಿ ಸಿದ್ಧತೆಗಳ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಕೇಂದ್ರದ ಕಾರ್ಯದರ್ಶಿ ಸುನೀಲ್‌ಕುಮಾರ ಯರಕ್ಯಾಳ, ಸದಸ್ಯರು ಉಪಸ್ಥಿತರಿದ್ದರು.

 ಹೆಚ್ಚಿನ ಮಾಹಿತಿಗಾಗಿ: ಬಸಯ್ಯ ಹಿರೇಮಠ (೯೧೬೪೮೨೩೭೪೩), ಶಿವಾಜಿ ಯಡ್ರಾಮಿ (೯೬೧೧೮೨೨೦೩೯), ವೀರಭದ್ರ ಗಣಾಚಾರಿ (೯೭೩೧೫೭೬೧೫೧), ಪೀರ್ ಅಹ್ಮದ್ ಖಾಜಿ (೯೭೪೩೬೮೫೮೫೮) ಅವರನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST