LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ರೈತರ ಆಸ್ತಿಯಾಗಿ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ: ಶಾಸಕ ಯಶವಂತರಾಯಗೌಡ ಪಾಟೀಲ

ಇಂಡಿ: ನಮ್ಮ ಭಾಗದ ಜನ ಯಾವುದು ಅಸಾಧ್ಯ ಎಂದು ಭಾವಿಸಿದ್ದರು ಅದನ್ನು ಸರ್ಕಾರದಿಂದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ೪೦ಕೋಟಿ ಇಕ್ವಿಟಿ ಶೇರ ಹಣ ಪಡೆದು ಸಾಧ್ಯವಾಗಿಸಿದ್ದೆನೆ. ಅದರ ಫಲವಾಗಿ ಇಂದು ನೂರಾರು ಕೊಟಿ ಬೆಲೆ ಬಾಳುವ ಶ್ರೀ ಭಿಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಆಸ್ತಿಯನ್ನಾಗಿ ಮಾಡಿದ್ದೆನೆ. ಈ ಕಾರಖಾನೆ ಮೂಲ ಮಾಲಿಕರು ಯಾರಾದರು ಇದ್ದರೆ ಅದು ಶೇರುದಾರ ರೈತರಾಗಿದ್ದಾರೆ ಎಂದು ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ಸೋಮವಾರರಂದು ಮರಗೂರ-ಧೂಳಖೇಡದ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಹಮ್ಮಿಕೊಂಡ ೮ನೇ ವಾರ್ಷಿಕ ಸರ್ವ ಸಾಧಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತರು ತಮ್ಮ ನಿರ್ಧಾರವನ್ನು ಬದಲಾಯಿಸಿ ರಿಕವರಿ ಬರುವಂತ ಕಬ್ಬಿನ ತಳಿಯನ್ನು ನಾಟಿ ಮಾಡಬೇಕು. ೧೨ ತಿಂಗಳು ಪೂರ್ಣವಾಗದೆ ಇರುವ ಕಬ್ಬು ಸಾಗಿಸುವುದರಿಂದ ರಿಕವರಿ ಬರುವುದಿಲ್ಲ. ಇದರಿಂದ ಕಾರ್ಖಾನೆ ಸಂಕಷ್ಟ ಅನುಭವಿಸಬೇಕಾಗುತ್ತದೆ. ರೈತರೆ ಈ ಕಾರ್ಖಾನೆ ಮೂಲ ಮಾಲಿಕರಾಗಿದ್ದು ಇದನ್ನು ಉಳಿಸಿ ಬೆಳಸಿಕೊಂಡು ಹೊಗುವ ಮಹತ್ತರ ಜವಾಬ್ದಾರಿ ನಿಮ್ಮ ಮೇಲಿದೆ ಎಂದು 
ಬಾಕ್ಸ್: ರಾಜ್ಯದ ಬಹುತೇಕ ಸಕ್ಕರೆ ಕಾರ್ಖಾನೆಗಳು ಅಳುವಿನ ಅಂಚಿನಲ್ಲಿವೆ. ಸೌಹಾರ್ದ ಬ್ಯಾಂಕ್‌ಗಳ ಮೂಲಕ ಪಡೆದ ಸಾಲಕ್ಕೆ ಬಡ್ಡಿ ಹೆಚ್ಚಿಗೆ ಇರುವುದರಿಂದ ಸಾಲದ ಬಡ್ಡಿ ಕಂತು ಕಟ್ಟುವುದು ಕಷ್ಟವಾಗುತ್ತದೆ. ಹಾಗಾಗಿ ಸಕ್ಕರೆ ಉದ್ಯಮ ನಷ್ಟದಲ್ಲಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅವರ ನೇರವಿಗೆ ಬರಬೇಕು. ಒಂದು ವೇಳೆ ಬರದೆ ಇದ್ದಲ್ಲಿ ಸಕ್ಕರೆ ಉದ್ಯಮ ಸಾಲದ ಸುಳಿಯಲ್ಲಿ ಸಿಲುಕಿ ಮುಚ್ಚುವ ಹಂತಕ್ಕೆ ಬಂದು ತಲುಪಿವೆ. ಅದಕ್ಕಾಗಿ ಸರ್ಕಾರಗಳು ಅವರಿಗೆ ಸಹಾಯ ಹಸ್ತ ಚಾಚಬೇಕಿದೆ. ಅಂದಾಗ ಮಾತ್ರ  ಕಾರ್ಖಾನೆಗಳು ಉಳಿಯಲು ಸಾದ್ಯ ಯಶವಂತರಾಯಗೌಡ ಪಾಟೀಲ. ಅಧ್ಯಕ್ಷ ಹಾಗೂ ಶಾಸಕರು.
ಈ ಭಾಗದಲ್ಲಿರುವ ಅನ್ಯ ಸಕ್ಕರೆ ಕಾರ್ಖಾನೆಗಳಿಗಿಂತಲು ಹೆಚ್ಚಿನ ಬಿಲ್ಲನ್ನು ಸಕಾಲಕ್ಕೆ  ನೀಡಿದ್ದವೆ.  ಆದರೆ ರೈತರು ನಮ್ಮ ಕಾರ್ಖಾನೆ ಎಂದು ಒಪ್ಪಿಕೊಳ್ಳುವುದಿಲ್ಲ ಅಲ್ಲಿವರೆಗೆ ಕಾರ್ಖಾನೆ ನಷ್ಟ ಅನುಭವಿಸಬೇಕಾಗುತ್ತದೆ. ಒಂದು ವೇಳೆ ಹೀಗೆ  ಮುಂದು ವರೆದಲ್ಲಿ ಮುಂಬರುವ ದಿನಗಳಲ್ಲಿ ಮುಚ್ಚುವ ಸ್ಥಿತಿ ಬರುತ್ತದೆ. ಹಾಗೆ ಆಗಬಾರದು ಎಂದಾದರೆ ಕಬ್ಬು ಬೆಳೆದ ರೈತರು ಇದು ನಮ್ಮ ಕಾರ್ಖಾನೆ ಇದನ್ನು ಉಳಿಕೊಂಡು ಹೊಗಬೇಕು ಎಂದು ಭಾವಿಸಿದಾಗ ಮಾತ್ರ ಸಾದ್ಯವಾಗುತ್ತದೆ. ಕಾರ್ಖಾನೆಗೆ ಗುಣಮಟ್ಟದ ಕಬ್ಬು ಪೂರೈಕೆ ಮಾಡಬೇಕೆಂದು ಮನವಿ ಮಾಡಿದರು.
ಹೀರಿಯ ನಿರ್ದೇಶಕ ಎಂ.ಆರ್.ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಸಾವಿರಾರು ಸಂಖ್ಯೇಯಲ್ಲಿ ಇಂಡಿ-ಸಿಂದಗಿ ಭಾಗದ ರೈತರು  ಭಾಗವಹಿಸಿದ್ದರು.
 ವೇದಿಕೆಯಲ್ಲಿ ಕಾರ್ಖಾನೆಯ ಉಪಾಧ್ಯಕ್ಷ ರೇವಗೊಂಡಪ್ಪಗೌಡ ಪಾಟೀಲ, ನಿರ್ದೇಶಕರಾದ ಬಿ.ಎಮ್.ಕೊರೆ, ಅಪ್ಪು ನಡುಗೇರಿ, ಸಿದ್ದಣ್ಣ ಬಿರಾದಾರ, ಜೆಟ್ಟೆಪ್ಪ ರವಳಿ, ಸುರೇಶಗೌಡ ಪಾಟೀಲ, ಅಶೋಕ ಗಜಾಕೋಶ, ಬಸವರಾಜ ಧನಶ್ರೀ, ವಿಶ್ವನಾಥ.ಮ.ಬಿರಾದಾರ, ದುಂಡಪ್ಪ ಖೇಡ, ಸಿದ್ದುಗೌಡ ಪಾಟೀಲ, ವಿರ್ಶವನಾಥ.ಎಸ್.ಬಿರಾದಾರ, ವ್ಯವಸ್ಥಾಪಕ ನಿರ್ದೇಶಕಿ ಎಸ್.ಕೆ. ಎಸ್.ಕೆ. ಭಾಗ್ಯಶ್ರೀ ಉಪಸ್ಥಿತರಿದ್ದರು.

 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST