LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

"ಪರಿಪೂರ್ಣ ಹಾಗೂ ಪರಿಪಕ್ವವಾದ ವ್ಯಕ್ತಿತ್ವ ನಿರ್ಮಾಣವೇ ಶಿಕ್ಷಣದ ಉದ್ದೇಶ"


ಮೂಡಲಗಿ : ವಿದ್ಯಾರ್ಥಿಗಳಲ್ಲಿ ಪರಿಪೂರ್ಣ ಹಾಗೂ ಪರಿಪಕ್ವವಾದ ವ್ಯಕ್ತಿತ್ವ ನಿರ್ಮಾಣವೇ ಒಟ್ಟಾರೆ ಶಿಕ್ಷಣದ ಉದ್ದೇಶವಾಗಿದೆ ಎಂದು ಗೋಕಾಕಕ ಜೆ ಇ ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿರಾಜ್ ವಿ. ಮೋದಿ ಅಭಿಪ್ರಾಯಪಟ್ಟರು.
ಬುಧವಾರದಂದು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ, ವಾಣಿಜ್ಯ ಹಾಗೂ ಬಿಸಿಎ ಮಹಾವಿದ್ಯಾಲಯದ ೨೦೨೬-೨೭ನೇ ಸಾಲಿನ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತ, ಹೆಚ್ಚಿನ ಅಂಕ ಪಡೆದು ಸರ್ಕಾರಿ ನೌಕರಿ ಗಿಟ್ಟಿಸುವ ಕನಸು ಕಾಣುವ ಕಾಲ ಇದಲ್ಲ. ನಿಮ್ಮ ಪದವಿ ಶಿಕ್ಷಣದೊಂದಿಗೆ ಜೀವನ ಹಾಗೂ ಔದ್ಯೋಗಿಕ ಕೌಶಲ್ಯಗಳ ತರಬೇತಿಗಳನ್ನು ಪಡೆದು, ಸ್ವಯಂ ಉದ್ಯೋಗವನ್ನು ಪ್ರಾರಂಭಿಸಿ, ಹೆತ್ತ ತಂದೆ-ತಾಯಿ ಹಾಗೂ ಕುಟುಂಬದ ಹೊಣೆಗಾರಿಕೆಯನ್ನು ನಿಬಾಯಿಸುವ  ಸಿದ್ಧತೆಯನ್ನು ಈಗಿನಿಂದಲೇ ಪ್ರಾರಂಭಿಸಿ, ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮೂಡಲಗಿ ಶಿಕ್ಷಣ ಸಂಸ್ಥೆಯ ಚೇರ್ಮನ್ ವೆಂಕಟೇಶ್ ಆರ್. ಸೋನವಾಲ್ಕರ ಮಾತನಾಡಿ, ಕಾಲೇಜಿನಲ್ಲಿರುವ ಸೌಲಭ್ಯ ಹಾಗೂ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಾಧನೆ ಮಾಡಿದರೆ, ನಿಮ್ಮ ಭವಿ? ಉನ್ನತ ಮಟ್ಟದಲ್ಲಿ ರೂಪುಗೊಳ್ಳುವುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸುಮಾರು ೩೭ ವ?ಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕಾಲೇಜಿನ ಬೋಧಕೇತರ ಸಿಬ್ಬಂದಿ ಅರ್ಜುನ್ ಗಸ್ತಿ ಹಾಗೂ ರಾ?ಮಟ್ಟದ ಕ್ರೀಡೆಗಳಿಗೆ ಆಯ್ಕೆಯಾದ ಕಾಲೇಜಿನ ವಿದ್ಯಾರ್ಥಿಗಳಾದ ಸಿದ್ರಾಯಪ್ಪ, ಪೊಂಜಿ ಮತ್ತು ಪೂಜಾ ಮಠಪತಿ ಅವರನ್ನು ಶಾಲು ಹೊದಿಸಿ, ಫಲಪು? ಹಾಗೂ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಪಿ ಯು ಸಿ ಯಲ್ಲಿ ಶೇ. ೯೦ಕ್ಕೂ ಅಧಿಕ ಅಂಕ ಪಡೆದು ನಮ್ಮ ಪದವಿ ಕಾಲೇಜಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ ಪವನ ಕುಮಾರ ಕ,  ಪ್ರೂ ಲೋಕೇಶ ಹಿಡಕಲ್ , ಆಯ್ ಕ್ಯು ಎ ಸಿ ಸಂಯೋಜನಾಧಿಕಾರಿ ಪ್ರೊ ಪಿ.ಬಿ ಚೌಡಕಿ, ಆಯ್ ಟಿ ಸಂಯೋಜನಾಧಿಕಾರಿ ಪ್ರೊಎಮ್.ಎಸ್.ಕುಂದರಗಿ, ಭಾರತಿ ತಳವಾರ, ರೋವರ್ ಸ್ಕೌಟ್ಸ್ ಘಟಕದ ಘಟಕಾಧಿಕಾರಿ ಗ್ರಂಥಪಾಲಕ ಡಾ ಬಸವಂತ ಬರಗಾಲಿ, ಪ್ರೊ ಎ ಎಸ್ ಮಿ ಸಿನಾಯಿಕ, ವಾಯ್ ಆರ್ ಸಿ ಘಟಕಾಧಿಕಾರಿ ಪ್ರೂ ಎಸ್ ಎಸ್ ಕುಲಿಗೋಡ, ಪ್ರೊ ಬಿ ಎಸ್ ಕಂಬಾರ, ಮಹಿಳಾ ಸಬಲೀಕರಣ ಘಟಕದ ಅಧ್ಯಕ್ಷೆ ಪ್ರೊ ಪ್ರೀತಿ ಬೆಳಗಲಿ, ಪ್ರೂ ವೇದಾ ದೇಶಪಾಂಡೆ,ಪ್ರೂ ಎನ್ ಸಿ ಭರಮನ್ನವರ, ಪ್ರೊ ಪಿ.ವಾಯ್ ಪಂಡ್ರೊಳಿ, ಪ್ರೊಎಲ್ ಎಸ್ ಹೊಸಟ್ಟಿ, ಪ್ರೊಎಸ್ ಎಸ್  ಹಿರೇಮಠ,ಪ್ರೊ  ಗೀತಾ ಹಿರೇಮಠ, ಪ್ರೊಎಸ್ ಬಿ ಹೊಸಟ್ಟಿ, ವೆಂಕಟೇಶ ಪಾಟೀಲ, ಲಕ್ಷ್ಮಣ ನಂದಿ, ಮನೋಹರ ಲಮಾನಿ, ರಮೇಶ ಖಾನಪ್ಪಗೋಳ, ಕಲ್ಮೇಶ ಇಂಗಳೆ ಮುಂತಾದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಹನುಮಂತ ತೇರದಾಳ ಪ್ರಾರ್ಥಿಸಿದರು. ಕಾಲೇಜಿನ ಆಡಳಿತಾಧಿಕಾರಿ  ಡಾ. ಎಸ್.ಎಲ್. ಚಿತ್ರಗಾರ ಸ್ವಾಗತಿಸಿದರು. ಪ್ರೊ ಎಸ್.ಆರ್. ಮುಗಳಿ ಹಾಗೂ ಮಹಿಳಾ ಸಂಘು ದ  ಅಧ್ಯಕ್ಷೆ ಪ್ರೊ ಎಸ್.ಕೆ. ಅಂಗಡಿ ಕಾರ್ಯಕ್ರಮ ನಿರೂಪಿಸಿದರು.ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆ ಪ್ರೊ ಎಸ್.ಕೆ. ಕೊತ್ತಲ ವಂದಿಸಿದರು 

 

 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
"ಪರಿಪೂರ್ಣ ಹಾಗೂ ಪರಿಪಕ್ವವಾದ ವ್ಯಕ್ತಿತ್ವ ನಿರ್ಮಾಣವೇ ಶಿಕ್ಷಣದ ಉದ್ದೇಶ"ರಫ್ತು ಉದ್ಯಮಕ್ಕೆ ಬೆಳಗಾವಿಯಲ್ಲಿ ಉತ್ತಮ ಅವಕಾಶ: ಸ್ವಪ್ನಿಲ್ ಶಹಅಪಘಾತ: ಬೈಕ್‌ ಸವಾರ ಸಾವುವಿಜಯಪುರ ಜಿಲ್ಲೆಗೆ 371ಜೆ ಮೀಸಲಾತಿಗೆ ಆಗ್ರಹಿಸಿ ಇಂಡಿ ಶಾಸಕ ಯಶವಂತರಾಯಗೌಡರಿಗೆ ಹೋರಾಟ ಸಮಿತಿಯಿಂದ ಮನವಿಕಾಲುವೆಗೆ ನೀರು ಹರಿಸಿ, ಬೆಳೆ ಉಳಿಸಿ: ಅಧಿಕಾರಿಗಳ ವಿರುದ್ಧ ಚವನಭಾವಿ ರೈತರ ಆಕ್ರೋಶಗಣೇಶ ಹಬ್ಬದಲ್ಲಿ ಮಿತಿ ಮೀರಿದ ಧ್ವನಿವರ್ಧಕಗಳನ್ನು (ಡಿಜೆ ಸೌಂಡ್ ಸಿಸ್ಟಮ್) ಬಳಸಿದರೆ, 1 ಲಕ್ಷ ರೂಪಾಯಿ ದಂಡ; ಪಿಓಪಿ ಗಣೇಶ ವಿಗ್ರಹ ಬಳಕೆ ಸಂಪೂರ್ಣ ನಿಷೇಧ: ಜಿಲ್ಲಾಧಿಕಾರಿ ಸ್ನೇಹಲ್ ಆರ್.ಅಂಗಡಿ ಮಳಿಗೆಗಳಿಂದ ಪ್ರಯಾಣಿಕರಿಗೆ ಅನಾನುಕೂಲ: ತೆರವುಗೊಳಿಸುವಂತೆ ಸಾರ್ವಜನಿಕರ ಆಗ್ರಹಸಂಘಗಳ ಸ್ಥಾಪನೆಗೆ ಸದಸ್ಯತ್ವ ನೊಂದಣಿ ಆರಂಭಎಸ್‌ಜಿಎಮ್‌ಎಚ್‌ಪಿ ಶಾಲೆಯಲ್ಲಿ ವೈಭವದ ೮೦ನೇ ಸ್ವಾತಂತ್ರ್ಯೋತ್ಸವಶರಣರ ಧರ್ಮನಿಷ್ಠೆ ಚಿಂತನೆಗಳು ಬಧುಕಿಗೆ ಪೂರಕ-ಪರಶುರಾಮ