LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bijapur

ಎಸ್‌ಜಿಎಮ್‌ಎಚ್‌ಪಿ ಶಾಲೆಯಲ್ಲಿ ವೈಭವದ ೮೦ನೇ ಸ್ವಾತಂತ್ರ್ಯೋತ್ಸವ

 

ರನ್ನ ಬೆಳಗಲಿ, ಆ.೧೯: ಪಟ್ಟಣದ ಶ್ರೀ ಗುರು ಮಹಾಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೮೦ನೇ ಸ್ವಾತಂತ್ರ್ಯೋತ್ಸವವನ್ನು ಶನಿವಾರ ವೈಭವದಿಂದ ಆಚರಿಸಲಾಯಿತು.ಶಾಲಾ ಆವರಣದಲ್ಲಿ ಡಿ.ವಿ. ಬರಮನಿ ಅವರು ಧ್ವಜಾರೋಹಣ ನೆರವೇರಿಸಿ, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಆಡಳಿತ ಮಂಡಳಿ ಸದಸ್ಯರಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭೀಮನಗೌಡ ಪಾಟೀಲ ಅವರು ರಾ? ನಾಯಕರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ದೊರೆಯಲು ಅನೇಕ ರಾ? ನಾಯಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಅವರ ಬಲಿದಾನವನ್ನು ಸದಾ ಸ್ಮರಿಸುವುದರ ಜೊತೆಗೆ, ರಾ?ದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಬದ್ಧರಾಗಬೇಕು. ಭಾರತದ ಏಕತೆ ಮತ್ತು ಅಖಂಡತೆಗೆ ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.ಮುಖ್ಯೋಪಾಧ್ಯಾಯರಾದ ಬಸವರಾಜ ಬೂದಿಹಾಳ ಅವರು ಸ್ವಾಗತಿಸಿ, ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಕಾರ್ಯಕ್ರಮದಲ್ಲಿ ಲಕ್ಕಪ್ಪ ದೊಡ್ಡಹಟ್ಟಿ (ಉಪಾಧ್ಯಕ್ಷರು), ಮುತ್ತಪ್ಪ ಹೊಸಪೇಟೆ (ಚೇರ್ಮನ್), ಮಲ್ಲಪ್ಪ ಸನಹಟ್ಟಿ (ಕಾರ್ಯದರ್ಶಿ), ಪ್ರವೀಣ ಬರಮನಿ, ಜಿ.ಪಿ. ಹಿಪ್ಪರಗಿ, ಪಿ.ಬಿ. ಆಲಗೂರು, ಶಿವಪ್ಪ ಕೊನ್ನೂರ, ಪಿ.ಬಿ. ಪೂಜಾರ, ಚಿಕ್ಕಪ್ಪ ನಾಯಕ, ಎಚ್.ಎ. ಕಡಪಟ್ಟಿ ವಕೀಲರು, ಮಾರುತಿ ಆರೇನಾಡ ವಕೀಲರು, ಬಸಪ್ಪ ಮಂಟೂರ, ಎಂ.ಆರ್. ಮೆಗಾಡಿ, ರವೀಂದ್ರ ಮಂಟೂರ, ಮಹಾಲಿಂಗಪ್ಪ ಸಿದ್ದಾಪುರ, ಬಸವಂತ ಮುರ್ನಾಳ, ಬಾಲಪ್ಪ ಹಂಪಿಹೊಳಿ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಾಲಾ ಆವರಣದಲ್ಲಿ ದೇಶಭಕ್ತಿ ಹಾಗೂ ರಾ?ಭಾವನೆ ಮೂಡಿಸುವ ಕಾರ್ಯಕ್ರಮಗಳು ಜರುಗಿ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ದೇಶಪ್ರೇಮದ ಸಂದೇಶ ಸಾರಲಾಯಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
"ಪರಿಪೂರ್ಣ ಹಾಗೂ ಪರಿಪಕ್ವವಾದ ವ್ಯಕ್ತಿತ್ವ ನಿರ್ಮಾಣವೇ ಶಿಕ್ಷಣದ ಉದ್ದೇಶ"ರಫ್ತು ಉದ್ಯಮಕ್ಕೆ ಬೆಳಗಾವಿಯಲ್ಲಿ ಉತ್ತಮ ಅವಕಾಶ: ಸ್ವಪ್ನಿಲ್ ಶಹಅಪಘಾತ: ಬೈಕ್‌ ಸವಾರ ಸಾವುವಿಜಯಪುರ ಜಿಲ್ಲೆಗೆ 371ಜೆ ಮೀಸಲಾತಿಗೆ ಆಗ್ರಹಿಸಿ ಇಂಡಿ ಶಾಸಕ ಯಶವಂತರಾಯಗೌಡರಿಗೆ ಹೋರಾಟ ಸಮಿತಿಯಿಂದ ಮನವಿಕಾಲುವೆಗೆ ನೀರು ಹರಿಸಿ, ಬೆಳೆ ಉಳಿಸಿ: ಅಧಿಕಾರಿಗಳ ವಿರುದ್ಧ ಚವನಭಾವಿ ರೈತರ ಆಕ್ರೋಶಗಣೇಶ ಹಬ್ಬದಲ್ಲಿ ಮಿತಿ ಮೀರಿದ ಧ್ವನಿವರ್ಧಕಗಳನ್ನು (ಡಿಜೆ ಸೌಂಡ್ ಸಿಸ್ಟಮ್) ಬಳಸಿದರೆ, 1 ಲಕ್ಷ ರೂಪಾಯಿ ದಂಡ; ಪಿಓಪಿ ಗಣೇಶ ವಿಗ್ರಹ ಬಳಕೆ ಸಂಪೂರ್ಣ ನಿಷೇಧ: ಜಿಲ್ಲಾಧಿಕಾರಿ ಸ್ನೇಹಲ್ ಆರ್.ಅಂಗಡಿ ಮಳಿಗೆಗಳಿಂದ ಪ್ರಯಾಣಿಕರಿಗೆ ಅನಾನುಕೂಲ: ತೆರವುಗೊಳಿಸುವಂತೆ ಸಾರ್ವಜನಿಕರ ಆಗ್ರಹಸಂಘಗಳ ಸ್ಥಾಪನೆಗೆ ಸದಸ್ಯತ್ವ ನೊಂದಣಿ ಆರಂಭಎಸ್‌ಜಿಎಮ್‌ಎಚ್‌ಪಿ ಶಾಲೆಯಲ್ಲಿ ವೈಭವದ ೮೦ನೇ ಸ್ವಾತಂತ್ರ್ಯೋತ್ಸವಶರಣರ ಧರ್ಮನಿಷ್ಠೆ ಚಿಂತನೆಗಳು ಬಧುಕಿಗೆ ಪೂರಕ-ಪರಶುರಾಮ