LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
National News

ಜಮ್ಮು ಕಾಶ್ಮೀರ ರಾಜ್ಯದ ಚೆನಾಬ್ ಸೇತುವೆ ಹೃದಯಗಳನ್ನು ಜೋಡಿಸುವ ಸೇತುಬಂಧ: ಟಿ.ಜಿ. ಸೀತಾರಾಂ

ನವದೆಹಲಿ: ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (AICTE) ಅಧ್ಯಕ್ಷರಾದ ಪ್ರೊ. ಟಿ.ಜಿ. ಸೀತಾರಾಂ ಅವರು ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ರೈಲ್ವೆ ಯೋಜನೆಯಾದ ‘ಚೆನಾಬ್ ಸೇತುವೆ’ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದು, ಇದನ್ನು “ಹೊಸ ಭಾರತದ ಅದ್ಭುತ ಸಾಧನೆ” ಎಂದು ಬಣ್ಣಿಸಿದ್ದಾರೆ. ನವದೆಹಲಿಯ ರೈಲ್ ಭವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಅವರು ಸೇತುವೆ ನಿರ್ಮಾಣದ ಹಿನ್ನೆಲೆ ಮತ್ತು ತಮ್ಮ ಪಾತ್ರದ ಬಗ್ಗೆ ವಿವರವಾಗಿ ಹಂಚಿಕೊಂಡರು.


“ಚೆನಾಬ್ ಸೇತುವೆ ಅನೇಕ ಎಂಜಿನಿಯರ್‌ಗಳು, ಕಾರ್ಮಿಕರು ಹಾಗೂ ವಿಜ್ಞಾನಿಗಳ ಶ್ರಮದ ಫಲವೇ ಅಲ್ಲದೆ, ಅದು ಪ್ರತಿಯೊಬ್ಬ ಭಾರತೀಯನ ಕನಸು ಮತ್ತು ಕೊಡುಗೆಯ ಫಲವಾಗಿದೆ. ಇದು ನಮ್ಮ ಎಲ್ಲರ ಜತೆಗೆ ನುಡಿಯುವ ರಾಷ್ಟ್ರೀಯ ಕನಸು,” ಎಂದು ಅವರು ಹೇಳಿದರು.


ಸ್ಮೃತಿ ಚಿಹ್ನೆಯಂತಿರುವ ಈ ಸೇತುವೆಯ ಪ್ರಯಾಣವನ್ನು ಅವರು ಹೀಗೆ ಸ್ಮರಿಸಿದರು. ನಾನು 2005ರಲ್ಲಿ ಮೊದಲ ಬಾರಿಗೆ ಚೆನಾಬ್ ಕಣಿವೆಗೆ ಹೋದಾಗ, ನಾನು ಇತಿಹಾಸದ ಭಾಗವಾಗುತ್ತಿದ್ದೇನೆ ಎಂಬುದು ನನಗೆ ಸ್ಪಷ್ಟವಾಗಿರಲಿಲ್ಲ. ಭೂಗೋಳಿಕವಾಗಿ ಇದು ಅತೀ ಕಷ್ಟದ ಪ್ರದೇಶವಾಗಿದ್ದು ಭೂಮಿಯ ಸ್ಥಿರತೆ ಏನೇನೂ ಖಚಿತವಿರಲಿಲ್ಲ. ಆದರೂ ನಮ್ಮ ದೃಷ್ಟಿಕೋನ ಸ್ಪಷ್ಟವಾಗಿತ್ತು – ನಾವು ಕೇವಲ ಮೂಲಸೌಕರ್ಯವನ್ನು ಕಟ್ಟುತ್ತಿರಲಿಲ್ಲ ಅದು ರಾಷ್ಟ್ರಗೌರವವನ್ನು ರೂಪಿಸುತ್ತಿದ್ದೆವು.


ಚೆನಾಬ್ ನದಿಯಿಂದ 359 ಮೀಟರ್ ಎತ್ತರದಲ್ಲಿರುವ ಈ ಸೇತುವೆ ಇಂದಿಗೆ ಜಾಗತಿಕ ಇಂಜಿನಿಯರಿಂಗ್‌ನ ಚಿಹ್ನೆಯಾಗಿದೆ. ವಿಜ್ಞಾನ, ಮನೋಬಲ ಮತ್ತು ರಾಷ್ಟ್ರೀಯ ಚೈತನ್ಯದ ಸಂಕಲನವಾಗಿತ್ತು ಈ ಎರಡೂ ದಶಕಗಳ ಪ್ರಯಾಣ ಎಂದು ಅವರು ಸಾವಿರಾರು ಎಂಜಿನಿಯರ್‌ಗಳ ಮತ್ತು ತಜ್ಞರ ತ್ಯಾಗವನ್ನು ಪ್ರಶಂಸಿಸಿದರು.


ಭೂಮಿಯ ಭೂಕಂಪ ಸಂವೇದನಾಶೀಲತೆ ಮತ್ತು ಕಠಿಣ ಭೂಭಾಗಕ್ಕೆ ತಕ್ಕಂತೆ ‘ಡಿಸೈನ್-ಅಸ್-ಯು-ಗೋ’ ಎಂಬ ನವೀನ ತಂತ್ರವನ್ನು ಐಐಎಸ್‌ಸಿ (IISc) ತಂಡದ ಜೊತೆ ಜಾರಿಗೆ ತಂದ ಬಗ್ಗೆ ಅವರು ವಿವರಿಸಿದರು. ಪ್ರತಿ ರಿವೆಟ್, ಪ್ರತಿಯೊಂದು ಅಡಿಪಾಯ, ಪ್ರತಿಯೊಂದು ಸ್ತಂಭ – ಕೇವಲ ತಾಂತ್ರಿಕತೆಯಲ್ಲ ಅದು ನಂಬಿಕೆಯ ಕೃತ್ಯವಾಗಿತ್ತು ಎಂದು ಅವರು ಹೇಳಿದರು.


ಇದನ್ನು ನಿರ್ಣಯಿಸುತ್ತಾ ಅವರು ಯುವಜನತೆಗೆ ಸಂದೇಶವೊಂದನ್ನು ನೀಡಿದರು. ಎಂಜಿನಿಯರಿಂಗ್ ಎಂದರೆ ಪ್ರಯೋಗಾಲಯಗಳಲ್ಲಿ ಮಾತ್ರವಲ್ಲ. ಚೆನಾಬ್ ಸೇತುವೆ ಈ ದೇಶಕ್ಕೆ ಪ್ರೀತಿ, ಪ್ರಾಮಾಣಿಕತೆ ಮತ್ತು ಶ್ರದ್ಧೆ ಇದ್ದರೆ ಅಸಾಧ್ಯವೇನು ಇಲ್ಲ ಎನ್ನುವ ಸಾಕ್ಷಿಯಾಗಿದೆ. ನಮ್ಮ ಯುವಕರು ತಮ್ಮ ಮೇಲೆಯೇ ನಂಬಿಕೆ ಇಡಬೇಕು. ನಾವು ಚೆನಾಬ್ ನದಿಗೆ ಸೇತುವೆ ನಿರ್ಮಿಸಬಲ್ಲರೆಂದರೆ, ನಮ್ಮ ಯುವಜನತೆ ಯಾವುದೇ ಎತ್ತರವನ್ನೂ ತಲುಪಬಹುದಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆವಿ.ಶ್ರೀ.ಕೃ. ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜತಾಳಿಕೋಟೆ ತಾಲೂಕು ಕೂಡ ಶೀಘ್ರ ಬರಪೀಡಿತ ಪಟ್ಟಿಗೆ : ಶಾಸಕ ನಾಡಗೌಡತೇರದಾಳ ಹಾಗೂ ರಬಕವಿ /ಬನಹಟ್ಟಿ ತಾಲೂಕುಗಳು ಬರಗಾಲ ಪಟ್ಟಿಗೆ, ಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ.ರೋಗಿಗಳಿಗೆ ಹಾಲುಹಣ್ಣು ವಿತರಿಸಿ ಬಿಜೆಪಿ ಕಾರ್ಯಕರ್ತರಿಂದ ’ಸೇವಾ ಸಂಕಲ್ಪಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಫಾರಂ-2 ಇ-ಖಾತಾ ಮಾಡಿಕೊಡಲು ಆಗ್ರಹಸೆ.20ರಂದು ಬಳ್ಳಾರಿಯಲ್ಲಿ ಹಿಂದೂ ಮಹಾ ಗಣಪತಿ ಭವ್ಯ ಶೋಭಾಯಾತ್ರೆಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ ಸಿಎಂ ಕನಸು; ಜನರಿಗೆ ತೊಂದರೆ ನೀಡಿದರೆ ಕ್ರಮ: ನಾರಾ ಭರತ್ ರೆಡ್ಡಿ