LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಜನಜಾಗೃತಿಗೆ ಬೀದಿನಾಟಕ ಅತ್ಯಂತ ಪ್ರಭಾವಿ ಮಾಧ್ಯಮ

ಹಸಿರು ಕ್ರಾಂತಿ ವರದಿ ಕುಂದಗೋಳ

ಬೀದಿ ನಾಟಕದ ಮೂಲಕ ಜನಜಾಗೃತಿಗೊಳಿಸಿ ಆ ಮೂಲಕ ಸಾಮಾಜಿಕ ಮಾಧ್ಯಮವಾಗಿದ್ದು, ಜನರ ಮನ ಮುಟ್ಟವಂತೆ ಮಾಡುತ್ತಿರುವ ಇಂಥಹ ಕಾರ್ಯಕ್ರಮ ಅತ್ಯಂತ ಶ್ಲಾಘನೀಯ ಎಂದು ಸಮಾಜ ಸೇವಕ ಜಾಫ‌ರ್ ಅತ್ತಾರ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಗೋಳ ತಾಲೂಕು ವಲಯದಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಹರಲಾಪೂರದ ಸಿವೈಸಿಡಿ ಕಲಾತಂಡದಿಂದ ಜರುಗಿದ ಬೀದಿನಾಟಕ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರಿಗೆ ಸಾಲ ಕೊಡುವ ಕೆಲಸ ಅಷ್ಟೇ ಅಲ್ಲ, ಅವರ ಜ್ಞಾನವನ್ನು ವಿಕಾಸಗೊಳಿಸುತ್ತದೆ ಎಂದರು.

ಬೀದಿನಾಟಕ ನಡೆಸಿಕೊಟ್ಟ ಕಲಾತಂಡವು ಮಕ್ಕಳ ಶಿಕ್ಷಣ, ಬಾಲ್ಯ ವಿವಾಹ, ಶೌಚಾಲಯ, ರೈತನ ಮಹತ್ವ, ಸ್ವ-ಉದ್ಯೋಗ, ನೀರಿನ ಮಹತ್ವ, ಮೊಬೈಲ್ ಬಳಕೆ ಅನಾಹುತ, ಲಿಂಗತಾರತಮ್ಯ, ತಂದೆ-ತಾಯಿ ಮಹತ್ವ,ವಾತ್ಸಲ್ಯ ಯೋಜನೆ ಸಹಿತ ಇನ್ನಿತರ ಹಲವಾರು ರೀತಿಯ ವಿಷಯವನ್ನು ನೆರೆದ ನೂರಾರು ಜನರಿಗೆ ಮನಮುಟ್ಟುವಂತೆ ಅಭಿನಯಿಸಿ ತೋರಿಸಿದರು.

ಮಹಿಳಾ ಒಕ್ಕೂಟದ ಅಧ್ಯಕ್ಷೆ ಫಾತಿಮಾ ಬೇಗಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಜಾನಪದ ಹಿರಿಯ ಕಲಾವಿದರಾದ ಎಸ್.ಎಸ್.ಹಿರೇಮಠ, ಶರೀಫ ದೊಡಮನಿ, ನಾಗರಾಜ್ ಗೌಡಣ್ಣವರ, ಈಶ್ವರ ಅರಳಿ, ಮಲ್ಲಪ್ಪ ಮುಳಗುಂದ, ವಸಂತ ಡೊಂಕನವರ, ನಿಂಗಪ್ಪ ಅವಾರಿ, ಗಂಗಮ್ಮ ಪತ್ರಕರ್ತ ಮಂಜುನಾಥ ಸಿಂಗಣ್ಣ, ವಲಯ ಮೇಲ್ವಿಚಾರಕರಾದ ವಿಜಯಾ ಸೇವಾ ಪ್ರತಿನಿಧಿಗಳಾದ ಗೀತಾ, ರೇಷ್ಮಾ ದೀಪಾ, ಭಾವನಾ, ಲಕ್ಷ್ಮೀ ಮಾಬೂಬಿ, ಮತ್ತು ಬಸವೇಶ್ವರ ದೇವಸ್ಥಾನ ಸಮಿತಿಯವರು ಉಪಸ್ಥಿತರಿದ್ದರು.

 

ಬೀದಿನಾಟಕವು ಒಂದು ಸಾಮಾಜಿಕ ಜಾಗೃತಿ ಮಾಧ್ಯಮವಾಗಿದೆ. ಕುಂದಗೋಳ ತಾಲೂಕಿನ ಸಿವೈಸಿಡಿ ಕಲಾತಂಡವು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜೊತೆಗೆ ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿದೆ. ಅವರ ಸೇವೆ ಸಾರ್ಥಕ. 

-ಜಾಫ‌ರ್ ಅತ್ತಾರ, ಸಮಾಜ ಸೇವಕರು .

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್